Bank Holidays: ದೀಪಾವಳಿ 2024 ಪ್ರಯುಕ್ತ ಬ್ಯಾಂಕ್‌ಗಳಿಗೆ ಸಾರ್ವಜನಿಕ ರಜೆ ಘೋಷಣೆ
ಬೆಂಗಳೂರು, ಅಕ್ಟೋಬರ್ 21: ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ದೀಪಾವಳಿ ಸಂಭ್ರಮಾಚರಣೆಗೆ ಜನರು ಎದುರು ನೋಡುತ್ತಿದ್ದಾರೆ. ಆಚರಣೆಗೆ ಇನ್ನೊಂದು ವಾರವಷ್ಟೇ ಬಾಕಿ ಇದೆ. ಈ ದೀಪಾವಳಿ 2024 (Deepavali 2024 Holiday) ಹಬ್ಬದ ಪ್ರಯುಕ್ತ ಬ್ಯಾಂಕ್‌ಗಳಿಗೆ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಹಾಗಾದರೆ ಮೂರು ದಿನದ ದೀಪಾವಳಿ ಹಬ್ಬದಲ್ಲಿ ಯಾವ ದಿನ ರಜೆ ಇರುತ್ತದೆ, ಎಂಬ ಮಾಹಿತಿ ಇಲ್ಲಿದೆ.
ಈಗಾಗಲೇ ಎಲ್ಲ ಬ್ಯಾಂಕ್‌ಗಳು ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ತಿಂಗಳ ಪ್ರತಿ ಭಾನುವಾರ ರಜೆ ಹೊಂದಿವೆ. ಅಕ್ಟೋಬರ್ 31ರಿಂದ ನವೆಂಬರ್ 02ರವರೆಗೆ ದೀಪಾವಳಿ ಆಚರಿಸಲಾಗುತ್ತದೆ. ಈ ಸಂಬಂಧ ಎಲ್ಲ ಬ್ಯಾಂಕ್‌ಗಳಿಗೆ ಅಕ್ಟೋಬರ್ 31 ರಜೆ ಘೋಷಿಸಲಾಗಿದೆ.

ದೀಪಾವಳಿ ಹಬ್ಬವನ್ನು ದೇಶದಲ್ಲಿ ಅದರಲ್ಲೂ ಹಿಂದೂ ಸಮುದಾಯಗಳಲ್ಲಿ ಮಹ್ವದ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ಎಲ್ಲಡೆ ವಿಜೃಂಭಣೆಯಿಂದ ಪಟಾಕಿ ಹೊಡೆದು, ಹೊಸ ಬಟ್ಟೆ ಧರಿಸಿ, ಸಾಂಪ್ರದಾಯಿಕವಾಗಿ ಆಚರಣೆ ಮಾಡಲಾಗುತ್ತದೆ. ಇದು ಆಚರಣೆಗೆ ಸಿಮೀತವಾಗದೇ ಧಾರ್ಮಿಕ ಸಂಪ್ರದಾಯಗ ಮೀರಿ, ಆಳವಾದ ಸಾಂಸ್ಕೃತಿಕ,ಆಧ್ಯಾತ್ಮಿಕ ಮತ್ತು ಆರ್ಥಿಕ ಮಹತ್ವ ಸಹ ಹೊಂದಿದೆ.
2024ರ ಈ ದೀಪಾವಳಿ ಬ್ಯಾಂಕ್ ರಜೆಯು ಕರ್ನಾಟಕಕ್ಕೆ ಮಾತ್ರವಲ್ಲದೇ ನೆರೆಯ ಗೋವಾ, ಕೇರಳ, ಆಂಧ್ರಪ್ರದೇಶ, ಪುದುಚೇರಿ, ತೆಲಂಗಾಣ ಮತ್ತು ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಅಕ್ಟೋಬರ್ 31 ರಂದು (ಗುರುವಾರ) ಬ್ಯಾಂಕ್ ರಜೆ ಘೋಷಿಸಲಾಗಿದೆ.

ಕರ್ನಾಟಕದಲ್ಲಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಅಂದು ಸಾರ್ವಜನಿಕ ರಜೆ ಇರುತ್ತದೆ. ಅದೇ ರೀತಿ ರಾಷ್ಟ್ರ ರಾಜಧಾನಿ ನವದೆಹಲಿ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿ ಇನ್ನಿತರ ಕೆಲ ರಾಜ್ಯಗಳಲ್ಲಿ, ನವೆಂಬರ್ 1 ರಂದು (ಶುಕ್ರವಾರ) ಕೆಲವು ಹೆಚ್ಚುವರಿ ಪ್ರಾದೇಶಿಕ ರಜಾದಿನ ಇರಲಿದೆ. ಅಂದು ಕೆಲವೆಡೆ ದೀಪಾವಳಿ ಹಬ್ಬದಾಚರಣೆ ಜೋರಾಗಿರುತ್ತದೆ. ಹೀಗಾಗಿ ರಜೆ ಕೊಡಲಾಗಿದೆ.
ಭಾರತದಲ್ಲಿ ಅಕ್ಟೋಬರ್ 2024 ಬ್ಯಾಂಕ್ ರಜೆಗಳ ಪಟ್ಟಿ
ಅಕ್ಟೋಬರ್ 1 - ಜಮ್ಮು & ಕಾಶ್ಮೀರ ವಿಧಾನಸಭಾ ಚುನಾವಣೆಗೆ ರಜೆ.
ಅಕ್ಟೋಬರ್ 02 - ಮಹಾತ್ಮ ಗಾಂಧಿ ಜಯಂತಿ/ಮಹಾಲಯ ಅಮವಾಸ್ಯೆ
ಅಕ್ಟೋಬರ್ 03 - ಶಾರದೀಯ ನವರಾತ್ರಿ ಮತ್ತು ಮಹಾರಾಜ ಅಗ್ರಸೇನ್ ಜಯಂತಿ.
ಅಕ್ಟೋಬರ್ 10 - ದಸರಾ ರಜೆ
ಅಕ್ಟೋಬರ್ 11 - ದಸರಾ-ಮಹಾನವಮಿ/ಆಯುಧ ಪೂಜೆ/ದುರ್ಗಾಪೂಜೆ
ಅಕ್ಟೋಬರ್ 12 - ದಸರಾ/ದಸರಾ (ಮಹಾನವಮಿ/ವಿಜಯದಶಮಿ)/ ಎರಡನೇ ಶನಿವಾರ.
ಅಕ್ಟೋಬರ್ 14 - ಗ್ಯಾಂಗ್ಟಾಕ್ನಲ್ಲಿ ದುರ್ಗಾ ಪೂಜೆ (ದಾಸೈನ್) ಮತ್ತು ದಸರಾ.
ಅಕ್ಟೋಬರ್ 16 - ಲಕ್ಷ್ಮಿ ಪೂಜೆ (ಅಗರ್ತಲಾ, ಕೋಲ್ಕತ್ತಾ).
ಅಕ್ಟೋಬರ್ 17 - ಮಹರ್ಷಿ ವಾಲ್ಮೀಕಿ ಜಯಂತಿ
ಅಕ್ಟೋಬರ್ 26 - ಪ್ರವೇಶ ದಿನ (ಜಮ್ಮು ಮತ್ತು ಕಾಶ್ಮೀರ) / ನಾಲ್ಕನೇ ಶನಿವಾರ.
ಅಕ್ಟೋಬರ್ 31 - ದೀಪಾವಳಿ/ಕಾಳಿ ಪೂಜೆ/ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ/ನರಕ ಚತುರ್ದಶಿ
ಇದರರೊಂದಿಗೆ ಎಸ್‌ಬಿಐ ಸಹ ಪ್ರದೇಶವಾರು ಬ್ಯಾಂಕ್ ರಜೆ ಪಟ್ಟಿ ಬಿಡುಗಡೆ ಮಾಡಿದೆ.












Click it and Unblock the Notifications