ಮಲ್ಯ ಮಾಡಿದ್ದ 9 ಸಾವಿರ ಕೋಟಿ ಸಾಲ ವಸೂಲಿಗೆ ಹಸಿರು ನಿಶಾನೆ
ದೀರ್ಘಕಾಲದಿಂದಲೂ ನೆನೆಗುದಿಗೆ ಬಿದ್ದಿದ್ದ ಮದ್ಯದ ದೊರೆಯ ಸಾಲ ವಸೂಲಾತಿ ಪ್ರಕ್ರಿಯೆಗೆ ಬಂದಿದೆ ಕಾನೂನಿನ ಬಲ.
ನವದೆಹಲಿ, ಜನವರಿ 19: ಭಾರತೀಯ ಬ್ಯಾಂಕುಗಳಿಗೆ ಮದ್ಯದ ದೊರೆ ವಿಜಯ್ ಮಲ್ಯ ಅವರಿಂದ ಬರಬೇಕಿದ್ದ ಸುಮಾರು 9 ಸಾವಿರ ಕೋಟಿ ರು. ಹಣದ ಸಾಲವನ್ನು ವಸೂಲಿ ಮಾಡುವಂತೆ ಸಾಲ ವಸೂಲಾತಿ ನ್ಯಾಯಾಧೀಕರಣ (ಡಿಆರ್ ಟಿ) ಸಂಬಂಧಪಟ್ಟ ಬ್ಯಾಂಕುಗಳಿಗೆ ಹಸಿರು ನಿಶಾನೆ ನೀಡಿದೆ.
ಮಲ್ಯ ಅವರಿಗೆ ಕೋಟ್ಯಾನುಕೋಟಿ ಮೌಲ್ಯದ ಸಾಲ ನೀಡಿದ್ದ ಬ್ಯಾಂಕುಗಳ ವೃಂದವು ಭಾರತೀಯ ಸ್ಟೇಟ್ ಬ್ಯಾಂಕ್ ನೇತೃತ್ವದಲ್ಲಿ ಡಿಆರ್ ಟಿಗೆ ಮೊರೆ ಹೋಗಿದ್ದವು. ಕಿಂಗ್ ಫಿಶರ್ ಏರ್ ಲೈನ್ ಮೇಲೆ ಮಲ್ಯ ಅವರು ವಿವಿಧ ಬ್ಯಾಂಕ್ ಗಳಿಂದ ಪಡೆದಿರುವ ಸುಮಾರು 9 ಸಾವಿರ ಕೋಟಿ ರು.ಗಳನ್ನು ವಸೂಲಿ ಮಾಡಲು ಅನುಮತಿ ನೀಡಬೇಕೆಂದು ಈ ಬ್ಯಾಂಕುಗಳು ಡಿಆರ್ ಟಿಗೆ ಮನವಿ ಸಲ್ಲಿಸಿದ್ದವು.

ಮನವಿಗೆ ಸ್ಪಂದಿಸಿರುವ ಡಿಆರ್ ಟಿ ಮುಖ್ಯಸ್ಥ ಕೆ. ಶ್ರೀನಿವಾಸನ್, ಬ್ಯಾಂಕುಗಳಿಗೆ ಸಾಲ ವಸೂಲಾತಿಗೆ ಅನುಮತಿ ನೀಡಿದ್ದಾರೆ. ಇದರಿಂದಾಗಿ, ಸಾಲ ವಸೂಲಿಗೆ ಬ್ಯಾಂಕುಗಳಿಗೆ ಕಾನೂನಾತ್ಮಕ ಅವಕಾಶ ಸಿಕ್ಕಂತಾಗಿದೆ. ಹಾಗಾಗಿ, ಶೀಘ್ರದಲ್ಲೇ ವಸೂಲಿ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications