ಬ್ಯಾಂಕ್ ಖಾತೆ ಜೊತೆ ಆಧಾರ್ ಜೋಡಣೆ ದಿನಾಂಕ ಮಾರ್ಚ್ 31ಕ್ಕೆ ಮುಂದೂಡಿಕೆ
Recommended Video

ನವದೆಹಲಿ, ಡಿಸೆಂಬರ್ 13: ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವುದಕ್ಕೆ ಸರ್ಕಾರ ನೀಡಿದ್ದ ಡಿ.31 ರ ಗಡುವನ್ನು ಮಾರ್ಚ್ 31, 2018ಕ್ಕೆ ಮುಂದೂಡಲಾಗಿದೆ! ಹೊಸದಾಗಿ ಬ್ಯಾಂಕ್ ಖಾತೆ ತೆರೆದವರು, ಬ್ಯಾಂಕ್ ಖಾತೆ ತೆರೆದ ಆರು ತಿಂಗಳೊಳಗಾಗಿ ತಮ್ಮ ಆಧಾರ್ ವಿವರಗಳನ್ನು ಬ್ಯಾಂಕಿಗೆ ನೀಡುವಂತೆ ಕೋರಲಾಗಿದೆ.
ಬ್ಯಾಂಕ್ ಖಾತೆ ಮತ್ತು ಮೊಬೈಲ್ ನಂಬರ್ ಸೇರಿದಂತೆ ವಿವಿಧ ಸೌಲಭ್ಯಗಳಿಗೂ ಆಧಾರ್ ಸಂಖ್ಯೆ ಜೋಡಿಸುವುದನ್ನು ಕಡ್ಡಾಯಗೊಳಿಸಿದ ಸರ್ಕಾರದ ಕ್ರಮಕ್ಕೆ ತಡೆ ನೀಡುವಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್, ಡಿ.14ರಂದು ನಡೆಸಲಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಿಸುವುದಕ್ಕೆ ಕೊನೆಯ ದಿನಾಂಕ 31, 2018 ಆಗಿದ್ದು, ಆ ದಿನಾಂಕದೊಳಗೆ ಆಧಾರ್, ಪ್ಯಾನ್(Permanent Account Number) ಮತ್ತು ಫಾರ್ಮ್ 60 ಸೇರಿದಂತೆ ಎಲ್ಲ ದಾಖಲೆಗಳನ್ನು ಸಲ್ಲಿಸುವಂತೆ ಆದೇಶಿಸಲಾಗಿದೆ.
ಸಾರ್ವತ್ರಿಕ ಗುರುತಿನ ಚೀಟಿಯಲ್ಲಿರುವ 12 ಅಂಕಿಯ ಆಧಾರ್ ಸಂಖ್ಯೆಯನ್ನು ಭಾರತ ಸರ್ಕಾರ ಈಗಾಗಲೇ ಎಲ್ಲ ಸರ್ಕಾರಿ ಸೌಲಭ್ಯಗಳ ಪ್ರಯೋಜನ ಪಡೆಯಲು ಕಡ್ಡಾಯಗೊಳಿಸಿದೆ. ಅಂತೆಯೇ ಬ್ಯಾಂಕ್ ಖಾತೆಗೂ ಆಧಾರ್ ಸಂಖ್ಯೆ ಜೋಡಿಸಲು ಆದೇಶಿಸಿತ್ತು. ಜೊತೆಗೆ ಮೊಬೈಲ್ ನಂಬರ್ ಗೆ ಆಧಾರ್ ಸಂಖ್ಯೆ ಜೋಡಿಸುವುದಕ್ಕೆ ಫೆ.6, 2018 ಕೊನೆಯ ದಿನವಾಗಿದ್ದು, ಈ ದಿನಾಂಕದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.












Click it and Unblock the Notifications