ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ನೀಡಲು ಡಿಸಿಜಿಐ ಅನುಮತಿ
ನವದೆಹಲಿ, ಏಪ್ರಿಲ್ 2: ಭಾರತ್ ಬಯೋಟೆಕ್ ಕಂಪನಿಯ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಡೋಸ್ ಅನ್ನು ಪ್ರಾಯೋಗಿಕವಾಗಿ ನೀಡಲು ಡಿಸಿಜಿಐ (ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ) ಸಮಿತಿ ಅನುಮತಿ ನೀಡಿರುವುದಾಗಿ ತಿಳಿದುಬಂದಿದೆ.
ಈ ಬೂಸ್ಟರ್ ಡೋಸ್ ಕೊರೊನಾ ಸೋಂಕಿನ ವಿರುದ್ಧ ಇನ್ನಷ್ಟು ಪರಿಣಾಮಕಾರಿಯಾಗಿರಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಎರಡನೇ ಡೋಸ್ ಪಡೆದ ಆರು ತಿಂಗಳ ನಂತರ ಈ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಇದೀಗ ಎರಡನೇ ಡೋಸ್ ಪಡೆದಿರುವ ಸ್ವಯಂ ಸೇವಕರಿಗೆ ಬೂಸ್ಟರ್ ಡೋಸ್ ನೀಡಲು ಮಾಡಿಕೊಂಡಿರುವ ಸಿದ್ಧತೆಗಳ ಕುರಿತು ಭಾರತ್ ಬಯೋಟೆಕ್ ಡಿಸಿಜಿಐ ತಜ್ಞರ ಸಮಿತಿಗೆ ತಿಳಿಸಿದೆ. ಈ ಮೂರನೇ ಹಂತದ ಪ್ರಯೋಗಕ್ಕೆ ಅನುಮತಿ ದೊರೆತಿದೆ.

ಈ ಪ್ರಯೋಗಕ್ಕೆ ಅನುಮತಿ ನೀಡಲಾಗಿದ್ದು, ಮೂರನೇ ಡೋಸ್ ಪಡೆದ ಸ್ವಯಂ ಸೇವಕರ ಆರೋಗ್ಯದ ಕುರಿತು ವರದಿ ನೀಡಬೇಕು ಎಂದು ಡಿಸಿಜಿಐ ತಜ್ಞರ ಸಮಿತಿ ತಿಳಿಸಿದೆ.
ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ಪಡೆದಿರುವ ಲಸಿಕೆಗಳಲ್ಲಿ ಕೋವ್ಯಾಕ್ಸಿನ್ ಕೂಡ ಒಂದಾಗಿದೆ.












Click it and Unblock the Notifications