ಮಾಯಾವತಿಯನ್ನು ವೇಶ್ಯೆ ಎಂದ ಬಿಜೆಪಿ ಮುಖಂಡ ಅಮಾನತು

Posted By:
Subscribe to Oneindia Kannada

ಲಕ್ನೋ, ಜುಲೈ 20: ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ದಯಾಶಂಕರ್ ಸಿಂಗ್ ರನ್ನು ಉಪಾಧ್ಯಕ್ಷ ಹುದ್ದೆಯಿಂದ ವಜಾಗೊಳಿಸಲಾಗಿದೆ.

ಉತ್ತರಪ್ರದೇಶದ ಬಿಜೆಪಿ ಉಪಾಧ್ಯಕ್ಷ ಸ್ಥಾನದಲ್ಲಿದ್ದ ದಯಾಶಂಕರ್ ಅವರು ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ, ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರನ್ನು ಸೆಕ್ಸ್ ವರ್ಕರ್ ಗಳಿಗೆ ಹೋಲಿಸಿದ್ದರು.[ಉತ್ತರಪ್ರದೇಶದ ಸಿಎಂ ಅಭ್ಯರ್ಥಿಯಾಗಿ ಶೀಲಾ ದೀಕ್ಷಿತ್: ಕಾಂಗ್ರೆಸ್]

' ಮೂರು ಬಾರಿ ಮುಖ್ಯಮಂತ್ರಿಯಾಗಿರುವ ಮಾಯಾವತಿ ಅವರು ತಮ್ಮ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಕೇಳಿದವರಿಗೆಲ್ಲ ಹಂಚುತ್ತಿದ್ದಾರೆ. ಆಕೆಗೆ 1 ಕೋಟಿ ರು ನೀಡಿದರೆ ಸಾಕು ಟಿಕೆಟ್ ನೀಡುತ್ತಾರೆ. 2 ಕೋಟಿ ರು ಮಧ್ಯಾಹ್ನ ನೀಡಿದರೆ ಮತ್ತೊಬ್ಬರಿಗೆ ಟಿಕೆಟ್, ಸಂಜೆ 3 ಕೋಟಿ ಸಿಕ್ಕರೆ ಮಗದೊಬ್ಬರಿಗೆ ಟಿಕೆಟ್ ಹೀಗೆ ದುಡ್ಡಿಗಾಗಿ ಟಿಕೆಟ್ ಮಾರಿಕೊಳ್ಳುತ್ತಾರೆ. ಇವತ್ತು ಆಕೆ ನಡವಳಿಕೆ ವೇಶ್ಯೆಯಂತೆ ಇದೆ ಎಂದು ದಯಾಶಂಕರ್ ಅವರು ಹೇಳಿಕೆ ನೀಡಿದ ವಿಡಿಯೋ ಭಾರಿ ಸಂಚಲನ ಮೂಡಿಸಿತ್ತು.[ಕಾಳಿ ಅವತಾರದಲ್ಲಿ ಮಾಯಾವತಿ, ಬಿಜೆಪಿ ಕಿಡಿ ಕಿಡಿ]

ಆದರೆ, ಅಸಂವಿಧಾನಾತ್ಮಕ ಪದ ಪ್ರಯೋಗದ ಬಗ್ಗೆ ಆಕ್ಷೇಪ ಕೇಳಿ ಬಂದ ಹಿನ್ನೆಲೆಯಲ್ಲಿ ದಯಾಶಂಕರ್ ಅವರು ಬುಧವಾರದಂದು ಬಹಿರಂಗವಾಗಿ ಕ್ಷಮೆಯಾಚಿಸಿದರು. ಅದರೆ, ಇದು ಅವರ ಹುದ್ದೆ ಕಾಯ್ದುಕೊಳ್ಳಲು[ಉತ್ತರಪ್ರದೇಶದಲ್ಲಿ ಚುನಾವಣೆ ನಡೆದರೆ, ದಯನೀಯ ಸ್ಥಿತಿಗೆ ಕಾಂಗ್ರೆಸ್?] ಸಾಕಾಗಲಿಲ್ಲ.

ಬಹಿರಂಗವಾಗಿ ಕ್ಷಮೆಯಾಚಿಸಿದರು

ಬಹಿರಂಗವಾಗಿ ಕ್ಷಮೆಯಾಚಿಸಿದರು

ಆದರೆ, ಅಸಂವಿಧಾನಾತ್ಮಕ ಪದ ಪ್ರಯೋಗದ ಬಗ್ಗೆ ಆಕ್ಷೇಪ ಕೇಳಿ ಬಂದ ಹಿನ್ನೆಲೆಯಲ್ಲಿ ದಯಾಶಂಕರ್ ಅವರು ಬುಧವಾರದಂದು ಬಹಿರಂಗವಾಗಿ ಕ್ಷಮೆಯಾಚಿಸಿದರು. ಅದರೆ, ಇದು ಅವರ ಹುದ್ದೆ ಕಾಯ್ದುಕೊಳ್ಳಲು ಸಾಕಾಗಲಿಲ್ಲ.

ಯುಪಿ ಬಿಜೆಪಿ ಅಧ್ಯಕ್ಷ ರಿಂದಲೂ ಕ್ಷಮೆ ಯಾಚನೆ

ಯುಪಿ ಬಿಜೆಪಿ ಅಧ್ಯಕ್ಷ ರಿಂದಲೂ ಕ್ಷಮೆ ಯಾಚನೆ

ಮಾಯಾವತಿ ಅವರು ದಿಟ್ಟ ಮಹಿಳೆ, ಅವರು ತುಂಬಾ ಕಷ್ಟಪಟ್ಟು ಮೇಲಕ್ಕೆ ಬಂದಿದ್ದಾರೆ. ಅವರ ವಿರುದ್ಧ ನಾನು ಆ ರೀತಿ ಹೋಲಿಕೆ ನೀಡಿದ್ದು ತಪ್ಪು ಎಂದು ದಯಾಶಂಕರ್ ಹೇಳಿದ್ದಾರೆ. ದಯಾಶಂಕರ್ ಗೂ ಮುನ್ನ ಯುಪಿ ಬಿಜೆಪಿ ಅಧ್ಯಕ್ಷ ಕೇಶವ್ ಮೌರ್ಯ ಅವರು ಬಿಜೆಪಿ ಪಕ್ಷದ ಪರವಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದರು.

ಮಾಯಾವತಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ವಿಡಿಯೋ

ಮಾಯಾವತಿ ಬಗ್ಗೆ ದಯಾಶಂಕರ್ ಅವರು ಅವಹೇಳನಕಾರಿ ಹೇಳಿಕೆ ನೀಡಿದ ವಿಡಿಯೋ

ದಯಾಶಂಕರ್ ವಿರುದ್ಧ ಎಫ್ ಐಆರ್ ಹಾಕುತ್ತೇವೆ

ದಯಾಶಂಕರ್ ವಿರುದ್ಧ ಎಫ್ ಐಆರ್ ಹಾಕುತ್ತೇವೆ ಎಂದ ಬಿಎಸ್ ಪಿ ಮುಖಂಡ ಸತೀಶ್ ಮಿಶ್ರಾ

ಬಿಜೆಪಿ ಯುಪಿ ಅಧ್ಯಕ್ಷ ಕೇಶವ್ ಮಿಶ್ರಾರಿಂದ ಕ್ಷಮೆಯಾಚನೆ

ಬಿಜೆಪಿ ಯುಪಿ ಅಧ್ಯಕ್ಷ ಕೇಶವ್ ಮಿಶ್ರಾರಿಂದ ಬಿಎಸ್ ಪಿ ಮಾಯಾವತಿ ಅವರಲ್ಲಿ ಕ್ಷಮೆಯಾಚನೆ

ಬಿಎಸ್ ಪಿ ಜನಪ್ರಿಯತೆ ಸಹಿಸದ ಬಿಜೆಪಿ : ಮಾಯಾವತಿ

ಬಿಎಸ್ ಪಿ ಜನಪ್ರಿಯತೆ ಸಹಿಸದ ಬಿಜೆಪಿಯಿಂದ ಇನ್ನೇನು ಸಹಿಸಲು ಸಾಧ್ಯ ಎಂದ ಮಾಯಾವತಿ.

ದಯಾಶಂಕರ್ ಅವರ ಮನೆಗೆ ಭಾರಿ ಭದ್ರತೆ

ದಯಾಶಂಕರ್ ಹೇಳಿಕೆ, ಕ್ಷಮೆಯಾಚನೆ, ಅಮಾನತು ನಂತರ ದಯಾಶಂಕರ್ ಅವರ ಮನೆಗೆ ಭಾರಿ ಭದ್ರತೆ ಒದಗಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
UP BJP VP Dayashankar Singh who compared BSP Chief Mayawati with a sex worker, apologises for his remark. But, BJP today sacked Dayashankar Singh over his outrageous comments on camera comparing rival political leader Mayawati to a prostitute.
Please Wait while comments are loading...