ದೇವೇಗೌಡರ ಮನೆಯಿಂದ ದೆಹಲಿ ಲೋದಿ ಗಾರ್ಡನ್ ವರೆಗೆ ಯೋಗಾಯೋಗ

ಜೂನ್ ಇಪ್ಪತ್ತೊಂದರ ಗುರುವಾರ ನಾನಾ ಕಡೆ ಯೋಗ ದಿನಾಚರಣೆ ನಡೆದಿವೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ಇಳಿ ವಯಸ್ಸಿನಲ್ಲೂ ಆ ಪರಿಯ ಉತ್ಸಾಹದಲ್ಲಿ ಆಸನ ಮಾಡಿರುವ ಫೋಟೋ ನೋಡಿದರೆ ಎಂಥವರಲ್ಲೂ ಪ್ರೋತ್ಸಾಹ ಮೂಡಬೇಕು. ಹಾಗಿದೆ ಅವರ ಭಂಗಿ ಹಾಗೂ ಸುಸ್ತಿಲ್ಲದ ಮುಖ ಚರ್ಯೆ.

ಇನ್ನು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿನ ಯೋಗ ದಿನಾಚರಣೆ ಕಾರ್ಯಕ್ರಮ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಅದರಲ್ಲೂ ವಿಶೇಷ ಚೇತನರೊಬ್ಬರು ಪ್ರದರ್ಶಿಸಿದ ಯೋಗವು ಬಹಳ ಜನರ ಮೆಚ್ಚುಗೆಗೆ ಕಾರಣವಾಯಿತು. ಅಪಾರ ಸಂಖ್ಯೆಯಲ್ಲಿ ಭಾಗಿಯಾಗಿದ್ದ ಮಹಿಳೆಯರು ಸಹ ದಿನದ ವಿಶೇಷಕ್ಕೆ ಕಳೆ ತಂದರು.

ಮಧ್ಯಪ್ರದೇಶ ಭೋಪಾಲ್ ನಲ್ಲಿ ಕೈದಿಗಳ ಸಹ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ದೆಹಲಿಯಲ್ಲಿನ ಲೋದಿ ಉದ್ಯಾನ ಹಾಗೂ ಅಮೃತ್ ಸರದಲ್ಲಿ ಬಿಎಸ್ ಎಫ್ ಸಿಬ್ಬಂದಿ ಪಾಲ್ಗೊಂಡಿದ್ದು ಹೀಗೆ ನಾನಾ ಕಡೆಯ ಯೋಗ ದಿನಾಚರಣೆಯ ಕಾರ್ಯಕ್ರಮದ ಚಿತ್ರ- ಸುದ್ದಿಯು ನಿಮ್ಮೆದುರಿಗೆ ಇವೆ. ಇವೆಲ್ಲವೂ ಪಿಟಿಐ ಚಿತ್ರಗಳು. ನಿಮಗೆ ಇಷ್ಟವಾಯಿತೆ ಎಂಬುದರ ಬಗ್ಗೆ ಕೂಡ ಒಂದೆರಡು ಸಾಲು ಬರೆಯಿರಿ.

ಎಂಥ ಪಟ್ಟು, ಆಸನಕ್ಕೂ ಗೌಡ್ರು ತಯಾರು

ಎಂಥ ಪಟ್ಟು, ಆಸನಕ್ಕೂ ಗೌಡ್ರು ತಯಾರು

ವಿಶ್ವ ಯೋಗ ದಿನವಾದ ಗುರುವಾರ ಬೆಂಗಳೂರಿನ ಪದ್ಮನಾಭನಗರದಲ್ಲಿ ಇರುವ ತಮ್ಮ ಮನೆಯಲ್ಲಿ ಮಾಜಿ ಪ್ರಧಾನಿ- ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರು ಯೋಗಾಸನ ಮಾಡಿದ ಫೋಟೋ ಇದು. ರಾಜಕೀಯ ಪಟ್ಟು, ಆಸನಗಳನ್ನು ಹಾಕುವುದರಲ್ಲಿ ಮಾತ್ರ ಅಲ್ಲ ಸ್ವಾಮಿ, ಯೋಗಾಸನವೂ ಮಾಡ್ತೀನಿ ಅನ್ನೋದನ್ನು ಸಾಬೀತು ಪಡಿಸುವಂತಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಯೋಗ ದಿನ

ಕಂಠೀರವ ಕ್ರೀಡಾಂಗಣದಲ್ಲಿ ಯೋಗ ದಿನ

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಮಟ್ಟದ ಯೋಗ ಪಟುವೊಬ್ಬರು ಪ್ರದರ್ಶಿಸಿದ ಆಸನಗಳಿಗೆ ಸೇರಿದ್ದ ಜನರು ಮೂಕವಿಸ್ಮಿತರಾದರು.

ಮಹಿಳೆಯರ ಅತ್ಯುತ್ಸಾಹ

ಮಹಿಳೆಯರ ಅತ್ಯುತ್ಸಾಹ

ಬೆಂಗಳೂರಿನಲ್ಲಿ ವಿಶ್ವ ಯೋಗ ದಿನಾಚರಣೆ ಸಲುವಾಗಿ ಗುರುವಾರ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡರು.

ಭೋಪಾಲ್ ನ ಕೇಂದ್ರ ಕಾರಾಗೃಹ ಕೈದಿಗಳು

ಭೋಪಾಲ್ ನ ಕೇಂದ್ರ ಕಾರಾಗೃಹ ಕೈದಿಗಳು

ನಾಲ್ಕನೇ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮಧ್ಯಪ್ರದೇಶದ ಭೋಪಾಲ್ ನ ಕೇಂದ್ರ ಕಾರಾಗೃಹದಲ್ಲಿ ಆಸನದಲ್ಲಿ ತೊಡಗಿದ್ದ ಕೈದಿಗಳು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಹೀಗೆ.

ವಿದ್ಯಾರ್ಥಿನಿ ಉತ್ಸಾಹ

ವಿದ್ಯಾರ್ಥಿನಿ ಉತ್ಸಾಹ

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ಯೋಗ ದಿನಾಚರಣೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡ ವಿದ್ಯಾರ್ಥಿನಿ.

ಗಡಿ ಭದ್ರತಾ ಪಡೆಯ ಸಿಬ್ಬಂದಿ

ಗಡಿ ಭದ್ರತಾ ಪಡೆಯ ಸಿಬ್ಬಂದಿ

ಅಮೃತ್ ಸರದಲ್ಲಿ ಗಡಿ ಭದ್ರತಾ ಪಡೆಯ ಸಿಬ್ಬಂದಿ ಯೋಗಾಭ್ಯಾಸದಲ್ಲಿ ತೊಡಗಿಕೊಂಡು ವಿಶ್ವ ಯೋಗ ದಿನವನ್ನು ಆಚರಿಸಿದರು.

ಲೋದಿ ಉದ್ಯಾನದಲ್ಲಿ ಯೋಗ ಭಂಗಿ

ಲೋದಿ ಉದ್ಯಾನದಲ್ಲಿ ಯೋಗ ಭಂಗಿ

ನವದೆಹಲಿಯ ಲೋದಿ ಉದ್ಯಾನದಲ್ಲಿ ಯೋಗಾಸಕ್ತರೊಬ್ಬರು ಗುರುವಾರ ಯೋಗ ದಿನಾಚರಣೆಯಲ್ಲಿ ಪ್ರದರ್ಶಿಸಿದ ಭಂಗಿ ಭಾರೀ ಮೆಚ್ಚುಗೆಗೆ ಪಾತ್ರವಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+