ಚಿತ್ರಗಳು: ಜನ್ಮದಿನದಿಂದ ಯೋಗ ದಿನದ ಸಿದ್ಧತೆ ತನಕ ನಾನಾ ವಿದ್ಯಮಾನ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಲವತ್ತೆಂಟನೇ ವರ್ಷದ ಹುಟ್ಟುಹಬ್ಬ ಜೂನ್ ಹತ್ತೊಂಬತ್ತರ ಮಂಗಳವಾರ ಆಚರಿಸಲಾಗಿದೆ. ಪಕ್ಷದ ಅತಿರಥ- ಮಹಾರಥ ನಾಯಕರು, ಮುಖಂಡರು ವಿವಿಧ ರಾಜ್ಯಗಳಿಂದ ಶುಭಾಶಯ ಕೋರಿದ್ದಾರೆ. ಬಹುತೇಕರಲ್ಲಿ ಮುಂದಿನ ಲೋಕಸಭೆ ಚುನಾವಣೆ ಹಾಗೂ ಆ ನಂತರದ ಬೆಳವಣಿಗೆಯ ಬಗ್ಗೆಯೇ ಶುಭ ಹಾರೈಸುವ ಉಮ್ಮೇದು.

ಇನ್ನು ಮುಂಬೈನಲ್ಲಿ ನಟಿ ಕಾಜೊಲ್ ಇನ್ ಕ್ರೆಡಿಬಲ್ಸ್ 2 ವಿಶೇಷ ಪ್ರದರ್ಶನದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಮಂದಿರಾ ಬೇಡಿ 'ಸ್ಟ್ರೀಟ್ ಸ್ಮಾರ್ಟ್ ಸ್ಟ್ರೀಟ್ ಸೇಫ್' ಅಭಿಯಾನದಲ್ಲೂ ಕ್ಯಾಮೆರಾ ಕಣ್ಣಿಗೆ ಮಾದಕವಾಗಿ ಸೆರೆಯಾಗಿದ್ದಾರೆ. ಇನ್ನೇನು ಯೋಗ ದಿನಾಚರಣೆಗೆ ಲೇಹ್ ನಲ್ಲಿ ಸೈನಿಕರ ಬೇಸ್ ಕ್ಯಾಂಪ್ ನಲ್ಲಿ ಇಷಾ ಫೌಂಡೇಷನ್ ನ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಮಾಡಿದ ಫೋಟೋ ಇಲ್ಲಿದೆ.

ಒಟ್ಟಾರೆ ಇಲ್ಲಿರುವ ಫೋಟೋಗಳು ಪಿಟಿಐನದು. ಸಂದರ್ಭಕ್ಕೆ ಅನುಸಾರ ಬೇರೆ ಬೇರೆ ಫೋಟೋಗಳನ್ನು ಒಂದು ಕಡೆ ಪೋಣಿಸುವ ಮಾಲೆ ಇದು. ನಿಮಗೆ ಈ ಪ್ರಯತ್ನ ಇಷ್ಟವಾದರೆ ಕಾಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ. ಮುದುವರಿಸಿಕೊಂಡು ಹೋಗಲು ಒಂದು ವಿಶ್ವಾಸ ಹಾಗೂ ಉತ್ಸಾಹ ಮೂಡುತ್ತದೆ.

ಕ್ಯಾಮೆರಾಕ್ಕೆ ಪೋಸು ನೀಡಿದ ಕಾಜೊಲ್

ಕ್ಯಾಮೆರಾಕ್ಕೆ ಪೋಸು ನೀಡಿದ ಕಾಜೊಲ್

ಮುಂಬೈನಲ್ಲಿ ಆಯೋಜಿಸಿದ್ದ ಇನ್ ಕ್ರೆಡಿಬಲ್ಸ್ 2 ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಅದರಲ್ಲಿ ನಟಿ ಕಾಜೊಲ್ ಕಾಣಿಸಿಕೊಂಡಿದ್ದು ಹೀಗೆ.

ರಾಹುಲ್ ಗಾಂಧಿ ಜನ್ಮ ದಿನಾಚರಣೆ

ರಾಹುಲ್ ಗಾಂಧಿ ಜನ್ಮ ದಿನಾಚರಣೆ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಲವತ್ತೆಂಟನೇ ಜನ್ಮದಿನವನ್ನು ಮಂಗಳವಾರ ಪಕ್ಷದ ಕಾರ್ಯಕರ್ತರು ನವದೆಹಲಿಯಲ್ಲಿ ಸಂಭ್ರಮದಿಂದ ಆಚರಿಸಿದರು.

'ಸ್ಟ್ರೀಟ್ ಸ್ಮಾರ್ಟ್ ಸ್ಟ್ರೀಟ್ ಸೇಫ್'

'ಸ್ಟ್ರೀಟ್ ಸ್ಮಾರ್ಟ್ ಸ್ಟ್ರೀಟ್ ಸೇಫ್'

ಮುಂಬೈನಲ್ಲಿ ಬಾಲಿವುಡ್ ನಟಿ ಮಂದಿರಾ ಬೇಡಿ 'ಸ್ಟ್ರೀಟ್ ಸ್ಮಾರ್ಟ್ ಸ್ಟ್ರೀಟ್ ಸೇಫ್' ಅಭಿಯಾನದಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಹೀಗೆ.

ಸದ್ಗುರು ಮಾರ್ಗದರ್ಶನದಲ್ಲಿ ಯೋಗಾಭ್ಯಾಸ

ಸದ್ಗುರು ಮಾರ್ಗದರ್ಶನದಲ್ಲಿ ಯೋಗಾಭ್ಯಾಸ

ಲೇಹ್ ನ ಸೇನಾ ಕ್ಯಾಂಪ್ ನಲ್ಲಿ ಇಷಾ ಫೌಂಡೇಷನ್ ನ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಮಾಡಿದರು.

ಆಂಗ್ ಸಾನ್ ಸೂ ಕಿ ಜನ್ಮ ದಿನಾಚರಣೆ

ಆಂಗ್ ಸಾನ್ ಸೂ ಕಿ ಜನ್ಮ ದಿನಾಚರಣೆ

ಮ್ಯಾನ್ಮಾರ್ ನ ನಾಯಕಿ ಆಂಗ್ ಸಾನ್ ಸೂ ಕಿ ಮಂಗಳವಾರ ತಮ್ಮ ಎಪ್ಪತ್ಮೂರನೇ ವರ್ಷದ ಹುಟ್ಟು ಹಬ್ಬದ ಆಚರಣೆ ಮಾಡಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+