ಗುಜರಾತ್ ಎಟಿಎಸ್ ಬಲೆಗೆ ಬಿದ್ದ ಡಿ ಗ್ಯಾಂಗಿನ ಮಜೀದ್ ಕುಟ್ಟಿ

ಜಮ್ಶೇಡ್ಪುರ್(ಜಾರ್ಖಂಡ್), ಡಿ. 27: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗಿನ ಪ್ರಮುಖ ಸದಸ್ಯನೊಬ್ಬನನ್ನು ಬಂಧಿಸಲಾಗಿದೆ. ಬಂಧಿತನನ್ನು ಜಾರ್ಖಂಡ್ ಮೂಲದ ಅಬ್ದುಲ್ ಮಜೀದ್ ಕುಟ್ಟಿ ಎಂದು ಗುರುತಿಸಲಾಗಿದೆ.

1997ರಲ್ಲಿ ಗಣತಂತ್ರ ದಿನದಂದು ಗುಜರಾತ್ ಹಾಗೂ ಮಹಾರಾಷ್ಟ್ರಗಳಲ್ಲಿ ಬಾಂಬ್ ಸ್ಫೋಟಕ್ಕಾಗಿ ಸಂಚು ರೂಪಿಸಿದ್ದ ಆರೋಪ ಮಜೀದ್ ಕುಟ್ಟಿ ಮೇಲಿದೆ. ಬಹುಕಾಲದಿಂದ ತಲೆ ತಪ್ಪಿಸಿಕೊಂಡು ತಿರುಗುತ್ತಿದ್ದ ಈತನನ್ನು ಗುಜರಾತ್ ಎಟಿಎಸ್ ಬಂಧಿಸಿದೆ.

ಪಾಕಿಸ್ತಾನದ ಏಜೆನ್ಸಿಯ ನೆರವಿನಿಂದ ದಾವೂದ್ ಇಬ್ರಾಹಿಂ ಸ್ಫೋಟಕ ಸಾಮಾಗ್ರಿಗಳನ್ನು ಒದಗಿಸಿದ್ದು, ಸ್ಫೋಟಕಗಳನ್ನು ಬಳಸಿಕೊಂಡು ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಬಾಂಬ್ ಸ್ಫೋಟ ಸಂಚು ರೂಪಿಸುವಲ್ಲಿ ಮಜೀದ್ ಕುಟ್ಟಿ ಯಶಸ್ವಿಯಾಗಿದ್ದ. ಕುಟ್ಟಿ ಬಳಿ ಇದ್ದ 106 ಪಿಸ್ತೂಲ್, 750 ಕಾಟ್ರಿಡ್ಜ್, 4ಕೆಜಿ ಆರ್ ಡಿ ಎಕ್ಸ್ ವಶಪಡಿಸಿಕೊಳ್ಳಲಾಗಿದೆ.

Dawoods aide Abdul Majeed Kutty arrested

ಇತ್ತೀಚೆಗೆ ದಾವೂದ್ ಇಬ್ರಾಹಿಂಗೆ ಸೇರಿದ ಪರಂಪರಾಗತ ಆಸ್ತಿಯನ್ನು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಹರಾಜು ಹಾಕಲಾಗಿದ್ದು, 1 ಕೋಟಿ ರು ಗೂ ಅಧಿಕ ಮೊತ್ತಕ್ಕೆ ಮಾರಾಟವಾಗಿದೆ.

2020ರ ಆರಂಭದಲ್ಲಿ ದಾವೂದ್ ಇಬ್ರಾಹಿಂ ಗ್ಯಾಂಗಿಗೆ ಸೇರಿದ ಮಾಜಿ ಬಂಟ ಏಜಾಜ್ ಲಕ್ಡಾವಾಲನನ್ನು ಪೊಲೀಸರು ಬಂಧಿಸಿದ್ದರು. ದಾವೂದ್, ಛೋಟಾ ರಾಜನ್ ಸಂಪರ್ಕ್ ಕಡಿತಗೊಂಡ ಬಳಿಕ 10 ವರ್ಷಗಳ ಹಿಂದೆ ತನ್ನದೇ ಹೊಸ ಗ್ಯಾಂಗ್ ಕಟ್ಟಿ ಭೂಗತ ಚಟುವಟಿಕೆಗಳಲ್ಲಿ ತೊಡಗಿದ್ದ ಏಜಾಜ್ ಮಲೇಷಿಯಾ, ಯುನೈಟೆಡ್ ಸ್ಟೇಟ್ಸ್, ನೇಪಾಳ ಮುಂತಾದ ದೇಶಗಳಲ್ಲಿ ಕಾರ್ಯಾಚರಣೆಯಲ್ಲಿದ್ದ. ವಿಚಾರಣೆ ವೇಳೆ ಏಜಾಜ್ ಅನೇಕ ಹೆಸರುಗಳನ್ನು ಬಹಿರಂಗ ಪಡಿಸಿದ್ದಾನೆ ಎಂಬ ಮಾಹಿತಿಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+