100ರ ನಕಲಿ ನೋಟು ಮುದ್ರಿಸಲು ದಾವೂದ್ ಗ್ಯಾಂಗ್ ಆಲೋಚನೆ!

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ನವೆಂಬರ್ 10: ದಾವೂದ್ ಇಬ್ರಾಹಿಂ ಗುಂಪು 100 ರುಪಾಯಿಯ ನಕಲಿ ನೋಟುಗಳ ಮುದ್ರಣಕ್ಕೆ ಆಲೋಚಿಸುತ್ತಿದೆಯಾ? 500 ಹಾಗೂ 1000 ರುಪಾಯಿ ನೋಟುಗಳನ್ನು ಭಾರತದಲ್ಲಿ ರದ್ದು ಮಾಡಿದ ಮೇಲೆ ದಾವೂದ್ ದಂಧೆಗೆ ಭಾರಿ ಹೊಡೆತ ಬಿದ್ದಿದೆ. ಗುಪ್ತಚರ ಇಲಾಖೆ ಅಧಿಕಾರಿಗಳ ಅಂದಾಜಿನ ಪ್ರಕಾರ, ದಾವೂದ್ ವ್ಯವಹಾರಗಳಿಗೆ ಆಗಿರುವ ನಷ್ಟ ಐದು ಸಾವಿರ ಕೋಟಿ ರುಪಾಯಿ.

ಗುಪ್ತಚರ ಇಲಾಖೆ ಅಧಿಕಾರಿಗಳ ಬಂದಿರುವ ಹೊಸ ಮಾಹಿತಿ ಪ್ರಕಾರ, ಡಿ ಗ್ಯಾಂಗ್ ನ ಒಳಗೆ ನೋಟು ರದ್ದು ವಿಚಾರದ ಚರ್ಚೆಯೇ ಆಗುತ್ತಿದ್ದು, ತಮ್ಮ ದಂಧೆ ಹೇಗೆ ನಡೆಸಬೇಕು ಎಂಬ ಚಿಂತೆ ಹತ್ತಿದೆಯಂತೆ. ಸದ್ಯಕ್ಕೆ ನೂರು ರುಪಾಯಿ ನೋಟು ಇನ್ನೂ ಚಾಲ್ತಿಯಲ್ಲಿ ಇರುವುದರಿಂದ ಅದೇ ಮೌಲ್ಯದ ನೋಟನ್ನು ನಕಲಿ ಮಾಡಿದರೆ ಹೇಗೆ ಅಂತ ಕೂಡ ಚರ್ಚೆ ಜಾರಿಯಲ್ಲಿದೆ.[ನೋಟು ರದ್ದು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ: ಕೇಂದ್ರದಿಂದ ಕೇವಿಯಟ್]

Dawood gang speaks of faking the Rs 100 note now

ಆದ್ದರಿಂದ ನೂರು ರುಪಾಯಿಯ ನಕಲಿ ನೋಟುಗಳು ಬರಬಹುದು, ಹುಷಾರಾಗಿರಿ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ. ಆದರೆ ಇದರಿಂದ ತುಂಬ ಲಾಭವೇನೂ ಸಾಧ್ಯವಿಲ್ಲ. ಆದ್ದರಿಂದ ತುಂಬ ದಿನ ನಡೆಸಿಕೊಂಡು ಹೋಗುವುದಕ್ಕೆ ಆಗುವುದಿಲ್ಲ. ಜೊತೆಗೆ, 500, 1000 ಹಾಗೂ 100 ರುಪಾಯಿ ನಕಲಿ ನೋಟಿನ ತಯಾರಿಕೆಗೆ ಒಂದೇ ಖರ್ಚು ಆಗುತ್ತದೆ.

ಆದ್ದರಿಂದ ತುಂಬ ಒಳ್ಳೆ ದಂಧೆಯಾಗಿ ಉಳಿಯಲ್ಲ. ಈ ಐಡಿಯಾವನ್ನು ದಾವೂದ್ ಗ್ಯಾಂಗ್ ಕೈ ಬಿಡಬಹುದು ಎನ್ನುತ್ತಾರೆ ಅಧಿಕಾರಿಗಳು. ಪ್ರತಿ ನಾಲ್ಕು ನಕಲಿ ನೋಟಿಗೆ ಒಂದು ಸಾಚಾ ನೋಟು ಗ್ಯಾಂಗ್ ಗೆ ದೊರೆಯುತ್ತದೆ. ಈ ದಂಧೆ 4:1 ಪ್ರಮಾಣದಲ್ಲಿ ನಡೆಯುವಂಥದ್ದು. ಸಾವಿರ ರುಪಾಯಿ ನೋಟು ನಕಲು ಮಾಡಿದಾಗ ಡಿ ಗ್ಯಾಂಗ್ ದಂಧೆ ಸಕತ್ ಆಗಿ ಬೆಳೆದಿತ್ತು.[ನೋಟ್ ಬ್ಯಾನ್ ಬೆನ್ನಲ್ಲೇ ಕೇಂದ್ರದ ಮತ್ತೊಂದು ಮಹತ್ವದ ಆದೇಶ]

ಅದು ಯಾವ ಪರಿಯಲ್ಲಿ ನಕಲಿ ನೋಟು ಮಾಡುತ್ತಿದ್ದರೆಂದರೆ ಅಸಲಿ ಹಾಗೂ ನಕಲಿ ನೋಟನ್ನು ಅಕ್ಕಪಕ್ಕ ಇಟ್ಟರೆ ಯಾವುದು ಸಾಚಾ ಅಂತ ಹೇಳೋದೇ ಸಾಧ್ಯವಿರುತ್ತಿರಲಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Is the Dawood Ibrahim syndicate now looking to fake the Rs 100 note? With the ban being announced on the Rs 500 and 1,000 note, his industry has taken a major hit and Intelligence Bureau officials estimate the loss at Rs 5,000 crore.
Please Wait while comments are loading...