ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವಸ್ಥಾನ ಪ್ರವೇಶಿಸಿದ್ದಕ್ಕಾಗಿ ದಲಿತ ಯುವಕನನ್ನು ಕಟ್ಟಿ, ಸುಡುವ ಕೋಲುಗಳಿಂದ ಹೊಡೆದ ದುಷ್ಕರ್ಮಿಗಳು- ಇದು ನಡೆದದ್ದು ಎಲ್ಲಿ?

|
Google Oneindia Kannada News

ಡೆಹ್ರಾಡೂನ್, ಜನವರಿ 13: ಉತ್ತರಕಾಶಿ ಜಿಲ್ಲೆಯ ಮೋರಿ ಪ್ರದೇಶದ ಸಾಲ್ರಾ ಗ್ರಾಮದಲ್ಲಿ ಪ್ರಾರ್ಥನೆ ಸಲ್ಲಿಸಲು ದೇವಸ್ಥಾನಕ್ಕೆ ಪ್ರವೇಶಿಸಿದ ದಲಿತ ವ್ಯಕ್ತಿಯ ಮೇಲೆ ಜನರ ಗುಂಪೊಂದು ಹಲ್ಲೆ ನಡೆಸಿ ಸುಟ್ಟ ಕೋಲುಗಳಿಂದ ಹೊಡೆದಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಜನವರಿ 9 ರಂದು ಬೈನೋಲ್ ಗ್ರಾಮದ ನಿವಾಸಿ 22 ವರ್ಷದ ಆಯುಷ್ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಂತ್ರಸ್ತ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ದೇವಸ್ಥಾನದಲ್ಲಿ ಮೇಲ್ವರ್ಗಕ್ಕೆ ಸೇರಿದ ಕೆಲವರು ಆತನ ಮೇಲೆ ಹಲ್ಲೆ ನಡೆಸಿ, ಕಟ್ಟಿಹಾಕಿ ರಾತ್ರಿಯಿಡೀ ಸುಡುವ ಕೋಲುಗಳಿಂದ ಹೊಡೆದಿದ್ದಾರೆ.

Dalit Man Tied Up, Burned With Sticks For Entering Uttarkhand Temple: Cops

ಆಯುಷ್ ಅವರನ್ನು ಜನವರಿ 10 ರಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿಂದ ಉತ್ತಮ ಚಿಕಿತ್ಸೆಗಾಗಿ ಉನ್ನತ ಕೇಂದ್ರಕ್ಕೆ ಕರೆದೊಯ್ಯಲು ಶಿಫಾರಸು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಲಿತನಾಗಿ ದೇವಾಲಯ ಪ್ರವೇಶಿಸಿದ್ದರಿಂದ ಮೇಲ್ಜಾತಿಯ ದುಷ್ಕರ್ಮಿಗಳು ಕೋಪಗೊಂಡಿದ್ದರು ಎಂದು ಆಯುಷ್ ದೂರಿನಲ್ಲಿ ತಿಳಿಸಿದ್ದಾರೆ.

ಆಯುಷ್ ನೀಡಿದ ದೂರಿನ ಆಧಾರದ ಮೇಲೆ, ಘಟನೆಗೆ ಸಂಬಂಧಿಸಿದಂತೆ ಐವರು ಗ್ರಾಮಸ್ಥರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಉತ್ತರಕಾಶಿ ಪೊಲೀಸ್ ವರಿಷ್ಠಾಧಿಕಾರಿ ಅರ್ಪಣ್ ಯದುವಂಶಿ ತಿಳಿಸಿದ್ದಾರೆ.

Dalit Man Tied Up, Burned With Sticks For Entering Uttarkhand Temple: Cops

ಸರ್ಕಲ್ ಆಫೀಸರ್ (ಕಾರ್ಯಾಚರಣೆ) ಪ್ರಶಾಂತ್ ಕುಮಾರ್ ಅವರಿಗೆ ತನಿಖೆಯ ಕೆಲಸವನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

ಹೆಚ್ಚುತ್ತಿರುವ ದಲಿತರ ಮೇಲಿನ ದೌರ್ಜನ್ಯ

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ನ ವಾರ್ಷಿಕ ವರದಿಯಾದ 'ಕ್ರೈಮ್ ಇನ್ ಇಂಡಿಯಾ' ನ ಹೊಸ ಆವೃತ್ತಿಯನ್ನು ಆಗಸ್ಟ್ 29 ರಂದು ಬಿಡುಗಡೆ ಮಾಡಿದೆ.

ಪರಿಶಿಷ್ಟ ಜಾತಿಗಳ (ಎಸ್‌ಸಿ) ವಿರುದ್ಧದ ದೌರ್ಜನ್ಯಗಳು ಅಥವಾ ಅಪರಾಧಗಳು ಶೇ 1.2 ರಷ್ಟು ಹೆಚ್ಚಾಗಿದೆ ಎಂದು ವರದಿ ಬಹಿರಂಗಪಡಿಸಿದೆ. ಉತ್ತರ ಪ್ರದೇಶವು ಎಸ್‌ಸಿಗಳ ವಿರುದ್ಧ ಅತಿ ಹೆಚ್ಚು ದೌರ್ಜನ್ಯ ಪ್ರಕರಣಗಳನ್ನು ವರದಿಯಾಗಿದೆ. ಶೇ 25.82 ರಷ್ಟಿದೆ, ನಂತರ ರಾಜಸ್ಥಾನ ಶೇ 14.7% ಮತ್ತು ಮಧ್ಯಪ್ರದೇಶ ಶೇ 14.1 ರಷ್ಟಿದೆ.

ಪರಿಶಿಷ್ಟ ಪಂಗಡಗಳ (ST) ವಿರುದ್ಧದ ದೌರ್ಜನ್ಯಗಳು ಶೇ 6.4 ರಷ್ಟು ಹೆಚ್ಚಾಗಿದೆ ಎಂದು ವರದಿ ಬಹಿರಂಗಪಡಿಸಿದೆ. ಮಧ್ಯಪ್ರದೇಶವು ಶೇ 29.8 ರಷ್ಟು ಅತಿ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದೆ. ನಂತರ ರಾಜಸ್ಥಾನ ಶೇ 24 ಮತ್ತು ಒಡಿಶಾ ಶೇ 7.6 ರಷ್ಟು ಹೆಚ್ಚಾಗಿದೆ.

ದಲಿತ ಮತ್ತು ಆದಿವಾಸಿ ಮಹಿಳೆಯರ ಮೇಲಿನ ದೌರ್ಜನ್ಯವೂ ಹೆಚ್ಚಿದೆ. ವರದಿಯಾದ ಒಟ್ಟು ಪ್ರಕರಣಗಳಲ್ಲಿ ಎಸ್‌ಸಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು, (ಅಪ್ರಾಪ್ತ ವಯಸ್ಕರನ್ನು ಒಳಗೊಂಡಂತೆ) ಶೇ 7.64 ಮತ್ತು ಎಸ್‌ಟಿ ಮಹಿಳೆಯರು ಶೇ 15 ರಷ್ಟಿದ್ದಾರೆ. ದಲಿತ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳ ವಿವರವಾದ ಅಂಕಿಅಂಶಗಳನ್ನು ಸಹ ವರದಿಯು ಮಂಡಿಸಿದೆ. ಅತ್ಯಾಚಾರದ ಯತ್ನ, ಮಹಿಳೆಯರ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಎಸ್‌ಸಿ ಮಹಿಳೆಯರಲ್ಲಿ ಶೇ 16.8 ಮತ್ತು 26.8 ರಷ್ಟಿದೆ. ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರ ಅಪಹರಣ ಪ್ರಕರಣಗಳಲ್ಲಿಯೂ ಎಸ್ಟಿ ಮಹಿಳೆಯರೇ ಹೆಚ್ಚು.

English summary
A Dalit man was allegedly assaulted by a group of people and singed with burning sticks when he entered a temple to offer prayers at Salra village in Mori area of Uttarkashi district, police said on Thursday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X