ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿಯೇ ಉಳಿಯುತ್ತೇನೆ ಎಂದ ದಲೈ ಲಾಮಾ, ಕಾರಣವೇನು?

|
Google Oneindia Kannada News

ನವದೆಹಲಿ, ನವೆಂಬರ್ 11: ಚೀನಾ ಹಾಗೂ ತೈವಾನ್ ಎರಡೂ ದೇಶಗಳ ನಡುವೆ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೌದ್ಧ ಧಾರ್ಮಿಕ ಗುರು ದಲೈ ಲಾಮಾ ಭಾರತದಲ್ಲಿಯೇ ಉಳಿಯುತ್ತೇನೆ ಎಂದು ಹೇಳಿದ್ದಾರೆ.

ತೈವಾನ್ ಮತ್ತು ಚೀನಾ ದೇಶಗಳ ನಡುವಿನ ಬಿಕ್ಕಟ್ಟು ಉಲ್ಬಣವಾಗಿರುವ ಹಿನ್ನಲೆಯಲ್ಲಿ ಉಭಯ ದೇಶಗಳ ಸಂಬಂಧ ಸೂಕ್ಷ್ಮವಾಗಿದೆ. ಹೀಗಾಗಿ ತಾವು ಭಾರತದಲ್ಲಿಯೇ ಪ್ರಶಾಂತವಾಗಿರಲು ಬಯಸಿದ್ದೇನೆ ಎಂದಿದ್ದಾರೆ.

ದಲೈ ಲಾಮಾ ಸಲಹೆಗಾರರು ಕೂಡಾ ಪೆಗಾಸಸ್ ಪಟ್ಟಿಯಲ್ಲಿದ್ದರು: ವರದಿದಲೈ ಲಾಮಾ ಸಲಹೆಗಾರರು ಕೂಡಾ ಪೆಗಾಸಸ್ ಪಟ್ಟಿಯಲ್ಲಿದ್ದರು: ವರದಿ

ಈ ಸಂದರ್ಭದಲ್ಲಿ ಸುದ್ದಿಗಾರರು ಕೇಳಿದ ಹಲವು ಪ್ರಶ್ನೆಗಳಿಗೆ ದಲೈ ಲಾಮಾ ಉತ್ತರಿಸಿದರು. ಟಿಬೆಟ್‌ನಲ್ಲಿ ಚೀನಾ ಆಡಳಿತದ ವಿರುದ್ಧ ಬಂಡಾಯ ವಿಫಲವಾದ ಹಿನ್ನೆಲೆಯಲ್ಲಿ ಅವರು 1959 ರಿಂದ ಭಾರತದಲ್ಲಿದ್ದಾರೆ. "ಸಾಮಾನ್ಯ ಬೌದ್ಧ ಸನ್ಯಾಸಿ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ನಾನು ಭಾವಿಸುತ್ತೇನೆ.

 Dalai Lama Says Prefers To Stay In India

ಅದಕ್ಕಾಗಿಯೇ ಸ್ಥಳೀಯ, ರಾಜಕೀಯ ಸಂಕೀರ್ಣತೆಗಳ ಭಾಗವಾಗಲು ಇಷ್ಟವಿಲ್ಲ. ಚೀನಾದಲ್ಲಿ ವಿವಿಧ ಜನಾಂಗೀಯ ಗುಂಪುಗಳಿದ್ದರೂ ... ಹಾನ್ ಸಮುದಾಯ ಹೆಚ್ಚು ಪ್ರಾಬಲ್ಯ, ನಿಯಂತ್ರಣಹೊಂದಿದೆ ಇದು ಸತ್ಯ ಎಂದು ಸ್ಪಷ್ಟಪಡಿಸಿದರು.

ಟೋಕಿಯೊ ವಿದೇಶಿ ವರದಿಗಾರರ ಕ್ಲಬ್ ಆನ್‌ಲೈನ್‌ನ ಸಭೆಯಲ್ಲಿ ಬುಧವಾರ ಮಾತನಾಡಿದ ಅವರು, 'ಧಾರ್ಮಿಕ ಸೌಹಾರ್ದತೆಯ ಕೇಂದ್ರ ಬಿಂದುವಾಗಿರುವ ಭಾರತದಲ್ಲಿಯೇ ಪ್ರಶಾಂತವಾಗಿ ಇರಲು ಬಯಸುವುದಾಗಿ ಬೌದ್ಧರ ಆಧ್ಯಾತ್ಮಿಕ ಗುರು ದಲೈಲಾಮಾ ಮತ್ತೊಮ್ಮೆ ಸ್ಪಷ್ಟಪಡಿಸಿದ್ದು, ವಿಭಿನ್ನ ಸಂಸ್ಕೃತಿಗಳ ಪ್ರಾಮುಖ್ಯತೆಯನ್ನು ಚೀನಾದ ನಾಯಕರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಸಮಾಜವನ್ನು ಕಠಿಣವಾಗಿ ನಿಯಂತ್ರಿಸಲು ಆ ದೇಶದ ಕಮ್ಯುನಿಸ್ಟ್ ಸರ್ಕಾರ ಅನುಸರಿಸುತ್ತಿರುವ ನೀತಿಗಳು ಹಾನಿಕಾರಕವಾಗಿದೆ' ಎಂದು ಅವರು ಹೇಳಿದ್ದಾರೆ.

ಬೌದ್ಧ ಧರ್ಮಗುರು ದಲೈ ಲಾಮ ಜೊತೆಗೆ ಮಾತುಕತೆಗೆ ಸಿದ್ಧ ಆದರೆ ಅದು ಅವರ ವೈಯಕ್ತಿಕ ಭವಿಷ್ಯದ ವಿಷಯವಾಗಿ ಮಾತ್ರ ಆಗಿರಲಿದ್ದು, ಟಿಬೆಟ್ ಬಗ್ಗೆ ಅಲ್ಲ ಎಂದು ಚೀನಾ ಹೇಳಿದೆ.

ಇದಕ್ಕೂ ಮುನ್ನ ಟೋಕಿಯೋದಿಂದ ಬಂದಿದ್ದ ವರದಿ ದಲೈ ಲಾಮ ಅವರು ಟೋಕಿಯೋ ವಿದೇಶಿ ಕರೆಸ್ಪಾಂಡೆಂಟ್ಸ್ ಕ್ಲಬ್ ನಿಂದ ಆಯೋಜಿಸಲಾಗಿದ್ದ ಆನ್ ಲೈನ್ ಪ್ರೆಸ್ ಕಾನ್ಫರೆನ್ಸ್ ನಲ್ಲಿ ಮಾತನಾಡಿದ್ದ ದಲೈ ಲಾಮ, ನಾನು ಭಾರತದಲ್ಲೇ ಶಾಂತಿಯುತವಾಗಿರುವುದಕ್ಕೆ ಬಯಸುತ್ತೇನೆ ಎಂದು ಹೇಳಿ ಭಾರತವನ್ನು ಧಾರ್ಮಿಕ ಸೌಹಾರ್ದತೆಯ ಕೇಂದ್ರ ಎಂದು ಹೇಳಿದ್ದರು.

86 ವರ್ಷದ ಟಿಬೆಟ್ ನ ಬೌದ್ಧ ಗುರುಗಳು ತಮಗೆ ಷಿ ಜಿನ್ಪಿಂಗ್ ಅವರನ್ನು ಭೇಟಿ ಮಾಡುವ ಯಾವುದೇ ಉದ್ದೇಶವೂ ಇಲ್ಲ ಎಂದು ಹೇಳಿದ್ದು, ತಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡುವುದಕ್ಕಾಗಿ ಟಿಬೆಟ್ ಗೆ ಭೇಟಿ ನೀಡಬೇಕೆಂಬ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಇನ್ನು ಷಿ ಜಿನ್ಪಿಂಗ್ ಮೂರನೇ ಬಾರಿಗೆ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಮುಂದುವರೆಯುವ ಯೋಜನೆಯ ಬಗ್ಗೆ ಪ್ರತಿಕ್ರಿಯೆ ನೀಡಲು ದಲೈ ಲಾಮ ನಿರಾಕರಿಸಿದ್ದಾರೆ.

ಚೀನಾದ ಕಮ್ಯುನಿಸ್ಟ್ ನಾಯಕರಿಗೆ ವಿವಿಧ ಸಂಸ್ಕೃತಿಗಳ ವೈವಿಧ್ಯತೆ ಅರ್ಥವಾಗುವುದಿಲ್ಲ. ವಾಸ್ತವದಲ್ಲಿ ಅತಿಯಾದ ನಿಯಂತ್ರಣ ಜನರಿಗೆ ಮುಳುವಾಗಲಿದೆ" ಎಂದು ದಲೈ ಲಾಮ ಎಚ್ಚರಿಸಿದ್ದಾರೆ.

ಚೀನಾ ವಿದೇಶಾಂಗ ಸಚಿವರಿಗೆ ದಲೈ ಲಾಮ ಹೇಳಿಕೆ ಬಗ್ಗೆ ಹಾಗೂ ದಲೈ ಲಾಮ ಅವರಿಗೆ ಟಿಬೆಟ್ ಗೆ ಭೇಟಿ ನೀಡುವುಕ್ಕೆ ಚೀನಾ ಅನುಮತಿ ನೀಡಲಿದೆಯೇ? ಎಂಬ ಪ್ರಶ್ನೆ ಕೇಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ "ಬೌದ್ಧ ಧರ್ಮಗುರು ದಲೈ ಲಾಮ ಜೊತೆಗೆ ಮಾತುಕತೆಗೆ ಚೀನಾ ಸಿದ್ಧ ಆದರೆ ಅದು ಅವರ ವೈಯಕ್ತಿಕ ಭವಿಷ್ಯದ ವಿಷಯವಾಗಿ ಮಾತ್ರ ಆಗಿರಲಿದ್ದು, ಟಿಬೆಟ್ ಬಗ್ಗೆ ಅಲ್ಲ" ಎಂದು ಸಷ್ಟಪಡಿಸಿದ್ದಾರೆ.

ಈ ಹಿಂದೆ ಲಡಾಖ್‌ನಲ್ಲಿ ಭಾರತೀಯ ಯೋಧರು, ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದ ಸಂದರ್ಭ ಚೀನಾದ ಸೈನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು.

ಲಡಾಖ್‌ನ ಡೆಮ್‌ಚುಕ್ ಪ್ರದೇಶದಲ್ಲಿ ಭಾರತೀಯ ಯೋಧರು ಹಾಗೂ ಸ್ಥಳೀಯರು ದಲೈ ಲಾಮಾ ಅವರ ಜನ್ಮದಿನವನ್ನು ಆಚರಿಸುತ್ತಿದ್ದ ಸಂದರ್ಭ ಚೀನಾ ಸೈನಿಕರು ಹಾಗೂ ನಾಗರಿಕರು ವಾಹನಗಳಲ್ಲಿ ಆಗಮಿಸಿ, ಸಿಂಧು ನದಿಯ ಮತ್ತೊಂದು ತೀರದಲ್ಲಿ ನಿಂತು ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿರುವುದಾಗಿ ತಿಳಿದುಬಂದಿದೆ. ಈ ಘಟನೆ ಜುಲೈ 6ರಂದು ನಡೆದಿದೆ.

ಚೀನಾದ ಜತೆ ಭಾರತದ ಸಂಬಂಧ ಹದಗೆಡಲು ಕಾರಣ ತಿಳಿಸಿದ ಸಚಿವ ಜೈಶಂಕರ್ ಚೀನಾದ ಜತೆ ಭಾರತದ ಸಂಬಂಧ ಹದಗೆಡಲು ಕಾರಣ ತಿಳಿಸಿದ ಸಚಿವ ಜೈಶಂಕರ್ ಭಾರತ ಮತ್ತು ಚೀನಾ ನಡುವೆ ಕಳೆದ ಏಪ್ರಿಲ್ ತಿಂಗಳಿನಿಂದ ಗಡಿ ವಿವಾದ ಆರಂಭಗೊಂಡಿದೆ. ಆನಂತರ ಚೀನಾ-ಭಾರತ ಸಂಬಂಧದಲ್ಲಿ ಬಿರುಕು ಆರಂಭವಾಗಿದೆ.

ಜುಲೈ 6ರಂದು ದಲೈ ಲಾಮಾ ಅವರ 86ನೇ ಹುಟ್ಟುಹಬ್ಬ ಇತ್ತು. ಪ್ರಧಾನಿ ಮೋದಿ ಅವರು ದಲೈಲಾಮಾ ಅವರಿಗೆ ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದ್ದರು. ಟ್ವೀಟ್ ಮೂಲಕವೂ ದಲೈ ಲಾಮಾ ಅವರಿಗೆ ಶುಭ ಕೋರಿದ್ದರು.

English summary
The Dalai Lama, Tibet's spiritual leader, when asked on Wednesday in an online news conference about visiting Taiwan, said he prefers to stay in India since relations between Taiwan and mainland China are "quite delicate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X