ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2,290 ಕೋಟಿ ರೂ ವೆಚ್ಚದ ರಕ್ಷಣಾ ಸಾಮಗ್ರಿ ಖರೀದಿಗೆ ಡಿಎಸಿ ಅನುಮೋದನೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 28: ಚೀನಾದೊಂದಿಗಿನ ಗಡಿ ಬಿಕ್ಕಟ್ಟಿನ ನಡುವೆಯೇ ರಕ್ಷಣಾ ಇಲಾಖೆಯು ಅಮೆರಿಕದಿಂದ 72,000 ಸಿಗ್ ಸಾವರ್ ರೈಫಲ್‌ಗಳು ಸೇರಿದಂತೆ 2,290 ಕೋಟಿ ರೂ ವೆಚ್ಚದ ರಕ್ಷಣಾ ಸಾಮಗ್ರಿಗಳ ಖರೀದಿಗೆ ಅನುಮೋದನೆ ನೀಡಿದೆ.

ಈ ಪ್ರಸ್ತಾವಗಳಿಗೆ ರಕ್ಷಣಾ ಇಲಾಖೆಯ ಖರೀದಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಉನ್ನತ ಸಂಸ್ಥೆಯಾದ ರಕ್ಷಣಾ ಖರೀದಿ ಸಮಿತಿ (ಡಿಎಸಿ) ಸೋಮವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಅನುಮೋದನೆ ನೀಡಿತು.

ಭಾರತೀಯ ಸಶಸ್ತ್ರ ಪಡೆಗಳಿಗೆ ಅಗತ್ಯವಿರುವ ವಿವಿಧ ಬಗೆಯ ಉಪಕರಣಗಳನ್ನು ಪಡೆದುಕೊಳ್ಳಲು ಅಂದಾಜು 2,290 ಕೋಟಿ ರೂ. ಖರೀದಿಗೆ ಒಪ್ಪಿಗೆ ನೀಡಲಾಯಿತು ಎಂದು ರಕ್ಷಣಾ ಇಲಾಖೆ ಹೇಳಿಕೆ ತಿಳಿಸಿದೆ. ಈ ಉಪಕರಣಗಳನ್ನು ಸ್ವದೇಶಿ ಕೈಗಾರಿಕೆಗಳು ಹಾಗೂ ವಿದೇಶಿ ಕಂಪೆನಿಗಳಿಂದ ಖರೀದಿ ಮಾಡಲಾಗುವುದು ಎಂದು ಅದು ಹೇಳಿದೆ.

DAC Approves Arms Procurement Worth Rs 2,290 Crore

ಭಾರತೀಯ (ಐಡಿಡಿಎಂ) ವಿಭಾಗದ ಅಡಿ ಖರೀದಿಗೆ 1,510 ಕೋಟಿ ರೂ ವೆಚ್ಚದಲ್ಲಿ ಸ್ಟಾಟಿಕ್ ಎಚ್ಎಫ್ ಟಾನ್ಸ್ ರಿಸೀವರ್ ಸೆಟ್‌ಗಳು ಮತ್ತು ಸ್ಮಾರ್ಟ್ ಆಂಟಿ ಏರ್‌ಫೀಲ್ಡ್ ವೆಪನ್ (ಎಸ್‌ಎಎಡಬ್ಲ್ಯೂ) ಖರೀದಿ ಮಾಡಲು ಡಿಎಸಿ ಒಪ್ಪಿಗೆ ನೀಡಿದೆ. 540 ಕೋಟಿ ರೂ ವೆಚ್ಚದಲ್ಲಿ ಎಚ್ ಎಫ್ ರೇಡಿಯೋ ಸೆಟ್‌ಗಳನ್ನು ಖರೀದಿಸಲಾಗುತ್ತದೆ. ಇವು ಸೇನೆ ಹಾಗೂ ವಾಯುಪಡೆಯ ಘಟಕಗಳ ನಡುವಿನ ಸಂವಹನಕ್ಕೆ ನೆರವು ನೀಡಲಿದೆ. ಸ್ಮಾರ್ಟ್ ಆಂಟಿ ಏರ್‌ಫೀಲ್ಡ್ ವೆಪನ್‌ಗೆ 970ಕೋಟಿ ರೂ ವೆಚ್ಚವಾಗಲಿದೆ.

ಅಮೆರಿಕದಿಂದ 2019ರಲ್ಲಿ ಸಿಗ್ ಸಾವುರ್ ಅಸಾಲ್ಟ್ ರೈಫಲ್ಸ್ ಖರೀದಿಸಿದ್ದ ರಕ್ಷಣಾ ಇಲಾಖೆ, ಈಗ 780ಕೋಟಿ ವೆಚ್ಚದಲ್ಲಿ 72,400 ರೈಫಲ್‌ಗಳನ್ನು ಖರೀದಿಸಲಿದೆ.

English summary
DAC of Defence Ministry has approved for arms procurement worth Rs 2,290 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X