ಮಧ್ಯ ಪ್ರದೇಶ ಸಿಲಿಂಡರ್ ಸ್ಫೋಟ: ಸಾವಿನ ಸಂಖ್ಯೆ ಶತಕಕ್ಕೆ ಹತ್ತಿರ
ಭೋಪಾಲ್, ಸೆಪ್ಟೆಂಬರ್. 12 : ಮಧ್ಯಪ್ರದೇಶದ ಝಬುವಾ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ರೆಸ್ಟೊರೆಂಟ್ ಒಂದರಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡಿದೆ. ಅವಘಡದಲ್ಲಿ 82 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು ಸಾವಿನ ಸಂಖ್ಯೆ ಇನ್ನು ಏರಿಕೆಯಾಗುವ ಲಕ್ಷಣವಿದೆ.
ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಆಕಸ್ಮಿಕ ಬೆಂಕಿ ತಗುಲಿದ್ದು ಸಿಲಿಂಡರ್ ಸ್ಫೋಟಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಅಗ್ನಿ ಶಾಮಕ ದಳ ಮತ್ತು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಹಾರ ಕಾರ್ಯ ಕೈಗೊಂಡಿದ್ದಾರೆ.[ಕುಮಟಾ ಬಳಿ ಹೆದ್ದಾರಿಯಲ್ಲಿ ಸ್ಫೋಟಗೊಂಡ ಸಿಲಿಂಡರ್]

ಮೃತರ ಕುಟುಂಬಕ್ಕೆ ಮಧ್ಯ ಪ್ರದೇಶ ಸರ್ಕಾರ ತಲಾ 2 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಘಟನೆಯಲ್ಲಿ ಎರಡು ಕಟ್ಟಡಗಳಿಗೆ ಹಾನಿಯಾಗಿದ್ದು ಅನೇಕರು ಅವಶೇಷಗಳ ಅಡಿ ಸಿಲುಕಿದ್ದು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬೆಳಗ್ಗೆ 8.30 ರ ಸುಮಾರಿಗೆ ಅವಘಡ ಸಂಭಸಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.
ಎರಡು ವಾರದ ಹಿಂದೆ ಉತ್ತರ ಕನ್ನಡ ಜಿಲ್ಲೆ ಕುಮಟಾ ಬಳಿ ಅನಿಲ ಟ್ಯಾಂಕರ್ ಉರುಳಿಬಿದ್ದು ಸ್ಫೋಟಗೊಂಡಿತ್ತು. ಸ್ಫೋಟದ ಪರಿಣಾಮ 10 ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದರು.
Jhabua (MP): LPG cylinder blast in a hotel, 20 people dead. pic.twitter.com/h9vX4eeANL
— ANI (@ANI_news) September 12, 2015 











Click it and Unblock the Notifications