ಅಜ್ಮೇರ್ ನಲ್ಲಿ ಸಿಲೀಂಡರ್ ಸ್ಫೋಟ: 6 ಮಂದಿ ದುರ್ಮರಣ
ಅಜ್ಮೇರ್, ಫೆಬ್ರವರಿ 17: ರಾಜಸ್ಥಾನದ ಅಜ್ಮೇರ್ ಜಿಲ್ಲೆಯ ಬೀವಾರ್ ಎಂಬಲ್ಲಿ ಕಟ್ಟಡವೊಂದರಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟದಲ್ಲಿ 6 ಜನ ದುರ್ಮರಣಕ್ಕೀಡಾಗಿದ್ದಾರೆ.
ನಿನ್ನೆ(ಫೆ.16) ಸಂಜೆ ಇಲ್ಲಿನ ಕಟ್ಟಡವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಕಟ್ಟಡದಲ್ಲಿದ್ದ 18 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದರು. ನಿನ್ನೆ ಇಬ್ಬರ ಮೃತದೇಹವನ್ನು ಹೊರತೆಗೆಯಲಾಗಿತ್ತು. ಇಂದು ಬೆಳಿಗ್ಗೆ ನಾಲ್ಕು ಮಂದಿಯ ಮೃತದೇಹ ಪತ್ತೆಯಾಗಿದೆ.

ಹಲವರನ್ನು ರಕ್ಷಿಸಲಾಗಿದೆಯಾದರೂ, ಸ್ಫೋಟದಿಂದ ಕಟ್ಟಡ ಕುಸಿದಿದ್ದರಿಂದ ಹಲವರು ಅವಶೇಷದಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ರಕ್ಷಣಾ ತಂಡ ತಿಳಿಸಿದೆ. ರಕ್ಷಣಾ ಕಾರ್ಯ ಇಂದೂ ಮುಂದುವರಿದಿದೆ.












Click it and Unblock the Notifications