ಮೇಘಾಲಯ ಚಂಡಮಾರುತ: 1000ಕ್ಕೂ ಅಧಿಕ ಮನೆಗೆ ಹಾನಿ
ಶಿಲ್ಲಾಂಗ್, ಏಪ್ರಿಲ್ 15: ಮೇಘಾಲಯದ ರಿ-ಭೋಯ್ ಜಿಲ್ಲೆಯಲ್ಲಿ ಗುರುವಾರ ಚಂಡಮಾರುತವು ಭಾರೀ ಹಾನಿಯನ್ನು ಉಂಟು ಮಾಡಿದೆ. ಚಂಡ ಮಾರುತದ ಕಾರಣದಿಂದಾಗಿ ಜಿಲ್ಲೆಯಲ್ಲಿ 1000 ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿದೆ.
ಜಿಲ್ಲೆಯಲ್ಲಿ ಸಾವಿರಾರು ಮನೆಗಳಿಗೆ ಹಾನಿ ಉಂಟಾಗಿದೆ. ಆದರೆ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಿಲ್ಲೆಯ 47 ಗ್ರಾಮಗಳು ಚಂಡಮಾರುತದಿಂದ ಹಾನಿಗೊಳಗಾಗಿದೆ. ಅಲ್ಲಿನ ಮನೆಗಳಿಗೆ ಹಾನಿ ಉಂಟಾಗಿದೆ ಎಂದು ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಬಿಡಿಒ ಕಚೇರಿ, ಶಾಲೆ, ಲೋಕೋಪಯೋಗಿ ಇಲಾಖೆ ಕಚೇರಿ, ಪಶುವೈದ್ಯಕೀಯ ಕಚೇರಿಗಳು ಸೇರಿದಂತೆ ಸರ್ಕಾರಿ ಆಸ್ತಿಗಳು ಚಂಡಮಾರುತದಲ್ಲಿ ನಾಶವಾಗಿದೆ ಎಂದು ಕೂಡಾ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಹಾನಿಗೊಳಗಾದ ಗ್ರಾಮಗಳಲ್ಲಿ ಜನರ ತೆರವು ಕಾರ್ಯ ಹಾಗೂ ಜನರನ್ನು ಬೇರೆಡೆ ವರ್ಗಾವಣೆ ಮಾಡಿ ವಸತಿ ವ್ಯವಸ್ಥೆ ಮಾಡುವ ಕಾರ್ಯವು ನಡೆಯುತ್ತಿದೆ. ಇದಕ್ಕಾಗಿ ಇಲಾಖೆಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಸುಮಾರು 29 ಹಳ್ಳಿಗಳು ಮತ್ತು 612 ಮನೆಗಳಿಗೆ ಹಾನಿ
ಚಂಡಮಾರುತದಿಂದಾಗಿ ಮೇಘಾಲಯದ ರಿ ಭೋಯ್ ಜಿಲ್ಲೆಯ ಭೋರಿಂಬೊಂಗ್ ಬ್ಲಾಕ್ ಅಡಿಯಲ್ಲಿ ಸುಮಾರು 29 ಹಳ್ಳಿಗಳು ಮತ್ತು 612 ಮನೆಗಳು ಹಾನಿಗೊಳಗಾಗಿವೆ. ಟೈರ್ಸೊ ಮತ್ತು ಮಾವ್ಲಾಸ್ನಾಯ್ ಪ್ರದೇಶದಲ್ಲಿ ಸುಮಾರು 400 ಮನೆಗಳು ಸಹ ಹಾನಿಗೆ ಒಳಗಾಗಿದೆ ಎಂದು ರಿ ಭೋಯಿ ಉಪ ಆಯುಕ್ತ (ಡಿಸಿ) ಅರ್ಪಿತ್ ಉಪಾಧ್ಯಾಯ ಹೇಳಿದ್ದಾರೆ.
"271 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಮತ್ತು 86 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ, ಆದರೆ ಉಮೇತ್ ಗ್ರಾಮದಲ್ಲಿ ಮೂರು ಮಂದಿಗೆ ಸಣ್ಣ ಪುಟ್ಟ ಗಾಯಗಳು ಆಗಿದೆ," ಎಂದು ಕೂಡಾ ಮಾಹಿತಿ ನೀಡಿದ್ದಾರೆ.
ಚಂಡಮಾರುತದಿಂದಾಗಿ ಉಮ್ರೋಯಿ ನೊಂಗ್ರಾಹ್‌ನಲ್ಲಿರುವ ಶಾಲೆ ಮತ್ತು ಲುಮ್‌ಡಿಯೆಂಗ್‌ಗನ್‌ನಲ್ಲಿನ ಒಂದು ಚರ್ಚ್ ಹಾನಿಗೀಡಾಗಿದ್ದು, ಬಿಡಿಒ ಕಚೇರಿ, ಇಇ ಕಚೇರಿ, ಕ್ವಾರ್ಟರ್ಸ್, ಹ್ಯಾಚರಿ ಕಮ್ ಪೌಲ್ಟ್ರಿ ಫಾರ್ಮ್ ಮತ್ತು ಮೀನುಗಾರಿಕೆ ಸೇರಿದಂತೆ ಲೋಕೋಪಯೋಗಿ ಇಲಾಖೆ ಸೇರಿದಂತೆ ಸರ್ಕಾರಿ ಆಸ್ತಿಗಳು ಹಾನಿಗೊಳಗಾಗಿವೆ. ಉಮ್ಸ್ನಿಂಗ್ ಸಿ&ಆರ್‌ಡಿ ಬ್ಲಾಕ್‌ನಲ್ಲಿ, ಸುಮಾರು 47 ಹಳ್ಳಿಗಳು ಹಾನಿಗೊಳಗಾಗಿವೆ ಮತ್ತು ಹಲವಾರು ಮನೆಗಳಿಗೆ ಹಾನಿಯಾಗಿದೆ ಎಂದು ವರದಿ ಉಲ್ಲೇಖ ಮಾಡಿದೆ.
ಚಂಡಮಾರುತದಿಂದಾಗಿ ಮನೆ ಕಳೆದುಕೊಂಡವರಿಗಾಗಿ ಸೈಧೆ ಗ್ರಾಮದಲ್ಲಿ ಒಂದು ತಾತ್ಕಾಲಿಕ ಆಶ್ರಯವನ್ನು ಸ್ಥಾಪಿಸಲಾಗಿದೆ ಎಂದು ಡಿಸಿ ಅರ್ಪಿತ್ ಉಪಾಧ್ಯಾಯ ಹೇಳಿದರು. ಈ ನಡುವೆ ಪೊಲೀಸ್, ಅರಣ್ಯ ಮತ್ತು ಪಿಡಬ್ಲ್ಯೂ ತೆರವು ಮತ್ತು ಮರುಸ್ಥಾಪನೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲು ತಕ್ಷಣವೇ ಸೂಚನೆ ನೀಡಲಾಗಿದೆ.
ಮೇಘಾಲಯ ಎನರ್ಜಿ ಕಾರ್ಪೊರೇಷನ್ ಲಿಮಿಟೆಡ್ ತಕ್ಷಣವೇ ತನ್ನ ತಂಡವನ್ನು ಪೀಡಿತ ಜಿಲ್ಲೆಯಲ್ಲಿ ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸಲು ಕಳುಹಿಸಿದೆ. ಈ ಬಗ್ಗೆ ಅಧಿಕ ಮಾಹಿತಿ ನೀಡಿದ ಡಿಸಿ "ಉಮ್ಸ್ನಿಂಗ್ ಬ್ಲಾಕ್‌ನಲ್ಲಿ ಸಂಚಾರವನ್ನು ತಕ್ಷಣವೇ ಮತ್ತೆ ಸ್ಥಾಪಿಸಲಾಯಿತು ಮತ್ತು ಅಗತ್ಯ ಕ್ರಮಕ್ಕಾಗಿ ಎಲ್ಲಾ ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಆನ್‌ಲೈನ್ ತುರ್ತು ಸಭೆ ನಡೆಸಲಾಯಿತು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications