Breaking: ಭೂ ಮೇಲ್ಮೈ ಪ್ರವೇಶಿಸಿದ 'ಸಿತ್ರಾಂಗ್' ಸೈಕ್ಲೋನ್: ರಾಜ್ಯಕ್ಕೆ ತುಂತುರು ಮಳೆ

ಬೆಂಗಳೂರು, ಅಕ್ಟೋಬರ್ 25: ಬಂಗಾಳಕೊಲ್ಲಿಯಲ್ಲಿ ಸಮುದ್ರದಲ್ಲಿ ವಾರದಿಂದ ಹಿಂದೆ ಸೃಷ್ಟಿಯಾಗಿದ್ದ ವೈಪರಿತ್ಯ ಪರಿವರ್ತನೆಗೊಂಡಿದ್ದ 'ಸಿತ್ರಾಂಗ್' ಸೈಕ್ಲೋನ್ ಮಂಗಳವಾರ ಬೆಳಗ್ಗೆ ಬಾಂಗ್ಲಾದೇಶದ ಈಶಾನ್ಯ ದಿಕ್ಕನ್ನು ಪ್ರವೇಶಿಸಿದೆ.

ನಾಲ್ಕು ಹಂತಗಳಲ್ಲಿ ಬದಲಾಗಿ ಚಂಡಮಾರುತವಾಗಿದ್ದ ಈ ಸಿತ್ರಾಂಗ್ ಒಡಿಶಾ ಕರಾವಳಿ ಮಾರ್ಗವಾಗಿ ಸಾಗಿ ಭೂ ಮೇಲ್ಮೈಯನ್ನು ಪ್ರದೇಶಿಸಿದೆ. ಆದರೆ ದುರ್ಬಲಗೊಳ್ಳುವ ಮೂಲಕ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡ ಸಿತ್ರಾಂಗ್ ವಾಯುಭಾರ ಕುಸಿತವಾಗಿ ಮಾರ್ಪಟ್ಟಿದೆ. ಮುಂದಿನ ಆರು ಗಂಟೆಯಲ್ಲಿ ಇನ್ನಷ್ಟು ದುರ್ಬಲಗೊಂಡು ಅಂತ್ಯಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಹವಾಮಾನ ತಜ್ಞ ಡಾ.ಪ್ರಸಾದ್ ಮಾಹಿತಿ ನೀಡಿದರು.

ಸಿತ್ರಾಂಗ್ ಸದ್ಯ ಬಾಂಗ್ಲಾದೇಶದಕ್ಕೆ ಈಶಾನ್ಯ ದಿಕ್ಕಿನಲ್ಲಿ ಮೇಘಾಲಯದಲ್ಲಿ ತಕ್ಕ ಮಟ್ಟಿಗಿನ ಆರ್ಭಟ ಮುಂದುವರಿಸಿದೆ. ಇನ್ನು ಕರ್ನಾಟಕ ಕರಾವಳಿ ಭಾಗದಲ್ಲಿ ಎರಡು ದಿನದ ಹಿಂದೆ ಉಂಟಾಗಿದ್ದ ಮೇಲ್ಮೈ ಸುಳಿಗಾಳಿಯ ತೀವ್ರತೆ ಕುಸಿದಿದೆ. ಇದರಿಂದ ಕರ್ನಾಟಕಕ್ಕೆ ಯಾವುದೇ ಪ್ರಭಾವ ಇಲ್ಲ. ಹೊಸದಾಗಿ ಪಶ್ಚಿಮ ಮಧ್ಯೆ ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿಯೊಂದು ಸೋಮವಾರ ಕಾಣಿಸಿಕೊಂಡಿದೆ. ಇದು ಸಮುದ್ರಮಟ್ಟಕ್ಕಿಂತ ಸುಮಾರು 1.5 ಕಿಲೋ ಮೀಟರ್ ಎತ್ತರದಲ್ಲಿದೆ ಎಂದು ಅವರು ಹೇಳಿದರು.

Cyclone Sitrang entry to in landfall then decrease likely rain expect in Karnataka

ಕರ್ನಾಟಕಕ್ಕೆ 5 ದಿನದ ಮುನ್ಸೂಚನೆ

ಕರ್ನಾಟಕದಲ್ಲಿ ಮುಂದಿನ ಮೂರು ದಿನ ಶುಷ್ಕ ವಾತಾವರಣ, ಬಿಸಿಲಿನ ತೀವ್ರತೆ ಕಂಡು ಬರಲಿದೆ. ನಂತರ ಎರಡು ದಿನ ಕರಾವಳಿಯ ಜಿಲ್ಲೆಗಳು ಹಾಗೂ ಮಲೆನಾಡು ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ತುಂತುರು ಮಳೆ ಬೀಳಬಹುದು. ಇದರ ಹೊರತು ಭಾರಿ ಮಳೆ ಅಥವಾ ಇನ್ನಿತರ ಗಂಭೀರ ರೂಪದ ಬದಲಾವಣೆಗಳು ಇಲ್ಲ ಎಂದರು.

Cyclone Sitrang entry to in landfall then decrease likely rain expect in Karnataka

ಇದೇ ಅವಧಿಯಲ್ಲಿ ಮುಂದಿನ ಐದು ದಿನವು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಶುಷ್ಕ ವಾತಾವರಣವೇ ಮುಂದುವರಿಯಲಿದೆ. ಕೆಲವು ವಾರಗಳಿಂದ ಆಗಾಗ ಆರ್ಭಟಿಸುತ್ತಿತ್ತು. ಇದು ಕೃಷಿ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತಿತ್ತು. ಈ ಭಾಗದಲ್ಲಿ ಇದೀಗ ಮಳೆ ಕಡಿಮೆಯಾಗಿ ಎಲ್ಲೆಡೆ ತಾಪಮಾನ ಏರಿಕೆ ಆಗುತ್ತಿದೆ. ಹಿಂಗಾರು ಕೃಷಿ ಚಟುವಟಿಕೆಗಳು ಗರಿಗೆದರಿವೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+