Cyclone MONTHA: ಕರಾವಳಿಗೆ ಅಪ್ಪಳಿಸಿದ ಬಳಿಕವೂ ಅಬ್ಬರ, ಈ ಭಾಗಗಳಿಗೆ ಭಾರೀ ಮಳೆ ಎಚ್ಚರಿಕೆ
IMD Weather Forecast: ದಕ್ಷಿಣ ಭಾರತಾದ್ಯಂತ ಬಂಗಾಳಕೊಲ್ಲಿಯಲ್ಲಿ ಆವರಿಸಿದ್ದ ಚಂಡಮಾರುತ 'ಮೊಂಥಾ' ಅಬ್ಬರ ಕಂಡು ಬಂದಿದೆ. ಆಂಧ್ರ ಪ್ರದೇಶ ಅಕ್ಷರಶಃ ನಲುಗಿದೆ. ತೆಲಂಗಾಣದಲ್ಲೂ ಕೆಲವು ದಿನಗಳಲ್ಲಿ ಬಿಟ್ಟು ಬಿಡದೇ ಮಳೆ ಸುರಿದಿದೆ. ರಸ್ತೆ , ರೈಲು ಸಂಚಾರ, ಜನ ಜೀವನ ಅಸ್ತವ್ಯಸ್ಥವಾಗಿದೆ. ಇವೆರಡು ರಾಜ್ಯಗಳ ಹಲವೆಡೆ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದ ಕೆಲವು ಭಾಗಗಳಲ್ಲಿ ಗುಡುಗು ಮಿಂಚು ಸಹಿತ ಅತಿ ಭಾರೀ ಮಳೆ ನಿರೀಕ್ಷೆ ಇದ್ದು, ಇಂದು ರೆಡ್ ಅಲರ್ಟ್ ನೀಡಲಾಗಿದೆ. ನೆನ್ನೆ ರಾತ್ರಿ ಸೈಕ್ಲೋನ್ ಕರಾವಳಿಗೆ ಅಪ್ಪಳಿಸಿದರೆ. ಅದರ ತೀವ್ರತೆ ಕಡಿಮೆ ಆಗಲು ಸಮಯ ಹಿಡಿಯುತ್ತದೆ. ಅಲ್ಲಿಯವರೆಗೆ ಅಲ್ಲಲ್ಲಿ ಧಾರಾಕಾರ ಮಳೆ ನಿರೀಕ್ಷೆ ಇದೆ. ಸೌರಾಷ್ಟ್ರ, ಕಚ್ ಮತ್ತು ವಿದರ್ಭ ಭಾಗಗಳಲ್ಲಿಯೂ ಭಾರೀ ಮಳೆ ಬೀಳುವ ಸಂಭವವಿದೆ. ಮುಂದಿನ ಮೂರು ದಿನ ಮಧ್ಯ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಕೇರಳದ ಕೆಲವು ಜಿಲ್ಲೆಗಳಲ್ಲಿಯೂ ಜೋರು ಮಳೆಯ ನಿರೀಕ್ಷೆ ಇದೆ ಎಂದು ಐಎಂಡಿ ತಿಳಿಸಿದೆ.

ಚಂಡಮಾರುತ "ಮೋಂತಾ' ಆಂಧ್ರ ಕರಾವಳಿಯ ಬಳಿ ತೀವ್ರಗೊಳ್ಳಲಿದೆ. ಪ್ರತಿ ಗಂಟೆಗೆ ಸುಮಾರು 15 ಕಿಮೀ ವೇಗದಲ್ಲಿ ಉತ್ತರ-ಉತ್ತರಪಶ್ಚಿಮ ದಿಕ್ಕಿನಲ್ಲಿ ಸಾಗುತ್ತಿದೆ. ಇಂದು ಬೆಳಗ್ಗೆ 5.30ಕ್ಕೆ ನರ್ಸಾಪುರದ ಉತ್ತರ-ಪಶ್ಚಿಮಕ್ಕೆ 80 ಕಿಮೀ ಹಾಗೂ ಕಾಕಿನಾಡಾದ ಪಶ್ಚಿಮಕ್ಕೆ 100 ಕಿಮೀ ದೂರದಲ್ಲಿ ಕೇಂದ್ರಿತವಾಗಿತ್ತು. ಮುಂದಿನ ಕೆಲ ಗಂಟೆಗಳಲ್ಲಿ ಇದು ತೆಲಂಗಾಣದತ್ತ ಸಾಗಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
ಅರಬ್ಬಿ ಸಮುದ್ರದ ಮಧ್ಯಪೂರ್ವ ಭಾಗದಲ್ಲಿಯೂ ಒಂದು ದಣಿವು (Depression) ರೂಪಗೊಂಡಿದೆ. ಇದು ಮುಂಬೈ ಮತ್ತು ವೇರಾವಲ್ ಕರಾವಳಿಯಿಂದ ದೂರ ಸಾಗುತ್ತಿದೆ. ಮುಂದಿನ 36 ಗಂಟೆಗಳಲ್ಲಿ ಈ ವ್ಯವಸ್ಥೆ ಉತ್ತರ-ಪೂರ್ವ ದಿಕ್ಕಿನಲ್ಲಿ ಚಲಿಸಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಇವತ್ತಿನಿಂದ ಮುಂದಿನ 48 ಗಂಟೆಗಳ ವರೆಗೆ ಕರ್ನಾಟಕ, ಗೋವಾ, ಗುಜರಾತ್ ಮತ್ತು ತಮಿಳುನಾಡು ಕರಾವಳಿಗಳಲ್ಲೂ ಸೈಕ್ಲೋನ್ ಪ್ರಭಾವ ಕಂಡು ಬರಲಿದೆ. ಬಿರುಗಾಳಿ ಹಾಗೂ ಮಳೆ ಸಾಧ್ಯತೆ ಇದೆ. ಕರಾವಳಿಯಲ್ಲಿನ ಗಾಳಿಯ ವೇಗ ಪ್ರತಿ ಗಂಟೆಗೆ 35 ರಿಂದ 55 ಕಿಮೀ ತಲುಪುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರಕ್ಕೆ ತೆರಳದಂತೆ ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ.
ಚಂಡಮಾರುತ "ಮೋಂತಾ' ನಿಧಾನವಾಗಿ ಬಲ ಕುಗ್ಗಿಸಿಕೊಳ್ಳಲಿದೆ. ತೆಲಂಗಾಣ ಮತ್ತು ಛತ್ತೀಸ್‌ಗಢದತ್ತ ಮುಂದುವರಿಯಲಿದು ನಂತರ ಅದರ ತೀವ್ರ ತಗ್ಗುವ ನಿರೀಕ್ಷೆ ಇದೆ. ಅಲ್ಲಿಯವರೆಗೆ ಕೇರಳ, ಲಕ್ಷದ್ವೀಪ ಮತ್ತು ಕರಾವಳಿ ರಾಜ್ಯಗಳಲ್ಲಿ ಮಳೆ ಸಕ್ರಿಯವಾಗಿರಲಿದೆ.












Click it and Unblock the Notifications