ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಯಾನಿ ಸೈಕ್ಲೋನ್ ಕೆಲವೇ ಗಂಟೆಗಳಲ್ಲಿ ಒಡಿಶಾಕ್ಕೆ ಲಗ್ಗೆ: 10 ಅಂಶಗಳು

|
Google Oneindia Kannada News

ನವದೆಹಲಿ, ಏಪ್ರಿಲ್ 30: ಒಡಿಶಾದ ಕರಾವಳಿಗೆ ಇನ್ನು ಕೆಲವೇ ಗಂಟೆಗಳಲ್ಲಿ 'ಫ್ಯಾನಿ'ಚಂಡಮಾರುತ ಲಗ್ಗೆ ಇಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮೊದಲು ತಮಿಳುನಾಡಿನಲ್ಲಿ ಫ್ಯಾನಿ ಅಬ್ಬರಿಸಲಿದೆ ಎಂದು ಮುನ್ಸೂಚನೆ ನೀಡಲಾಗಿತ್ತು ಆದರೆ ಚಂಡಮಾರುತವು ತನ್ನ ಬದಲಿಸಿ ಒಡಿಶಾ ಕಡೆ ಪಥ ಬದಲಿಸಿದೆ. ಮುಂದಿ 36 ಗಂಟೆಯೊಳಗೆ ಚಂಡಮಾರುತ ತನ್ನ ರೌದ್ರಾವತಾರ ತೋರಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ನೈಸರ್ಗಿಕ ವಿಕೋಪ ವಿಪತ್ತು ತಂಡ ಹಾಗೂ ನೌಕಾಪಡೆಗೆ ಅಲರ್ಟ್‌ ಆಗಿರುವಂತೆ ತಿಳಿಸಲಾಗಿದೆ.

Cyclone Fani May Intensify Further, Heads Toward Odisha Coast

ಸೈಕ್ಲೋನ್ ಫ್ಯಾನಿ ಬಗ್ಗೆ 10 ಸಂಗತಿಗಳು
-ಚಂಡಮಾರುತ ಗಾಳಿಯು ಚೆನ್ನೈನಿಂದ 690ಕಿ.ಮೀ ದೂರದಿಂದ 900 ಕಿ.ಮೀ ದೂರದಲ್ಲಿರುವ ಆಂಧ್ರಪ್ರದೇಶದ ಮಚಲೀಪಟ್ಟಣದ ಕಡೆಗೆ ಬೀಸುತ್ತಿದೆ.
- ವಿಶಾಖಪಟ್ಟಣಂ, ಚೆನ್ನೈನಲ್ಲಿ ಚಂಡಮಾರುತದಿಂದ ಒಂದೊಮ್ಮೆ ಅನಾಹುತಗಳಾದರೆ ಜನರ ರಕ್ಷಣೆಗಾಗಿ ನೌಕಾಪಡೆಯು ಹಡಗುಗಳನ್ನು ಸಿದ್ಧಪಡಿಸಿದೆ.
-ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವು ತುರ್ತು ಪರಿಸ್ಥಿತಿಯ ಕುರಿತು ಸಭೆ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯಂತೆ ದೆಹಲಿಯಲ್ಲಿ ಸಭೆ ನಡೆಸಲಾಗಿದೆ. ಇಂದು ಕೂಡ ಮತ್ತೊಂದು ಸುತ್ತಿನ ಸಭೆ ನಡೆಸಲಾಗುತ್ತಿದೆ.
-ಫ್ಯಾನಿ ಚಂಡಮಾರುತದ ಹಿನ್ನೆಲೆಯಲ್ಲಿ ಸೂಪರ್ಸೋನಿಕ್ ಕ್ರೂಸ್ ಮಿಸೈಲ್ ಸುಖೋಯ್-30 ಪರೀಕ್ಷಾರ್ಥ ಹಾರಾಟವನ್ನು ಕೂಡ ವಾಯು ಸೇನೆ ಹಾಗೂ ಬ್ರಹ್ಮೋಸ್ ಮುಂದೂಡಿದೆ.
-ಫ್ಯಾನಿ ಮಾರುತ ಗಾಳಿಯು ತಮಿಳುನಾಡಿನ ಕೆಲವು ಭಾಗ, ಆಂಧ್ರಪ್ರದೇಶ, ಕೇರಳದ ಕೆಲ ಪ್ರದೇಶಗಳು, ಒಡಿಶಾದಲ್ಲಿ ಮಳೆಯಾಗುವ ಸಂಭವವಿದೆ.
-ಒಡಿಶಾ ಸರ್ಕಾರವು ಗಂಜಮ್, ಪುರಿ,ಕೇಂದ್ರಪಾರದಲ್ಲಿರುವ ನೌಕರರ ರಜೆಯನ್ನು ರದ್ದುಗೊಳಿಸಿದೆ.
-ಒಡಿಶಾದಲ್ಲಿ 879 ನಿರಾಶ್ರಿತರ ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
-ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಟ್ವೀಟ್ ಮಾಡಿ ಫ್ಯಾನಿ ಚಂಡಮಾರುತದ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
-ಫ್ಯಾನಿ ಚಂಡಮಾರುತವನ್ನು ಬಾಂಗ್ಲಾದೇಶಿಗರು ಫೂನಿ ಎಂದು ಉಚ್ಛರಿಸುತ್ತಾರೆ. ಫ್ಯಾನಿ ಎಂದರೆ ಹಾವಿನ ಹೆಡೆ ಎಂದು ಅರ್ಥ.
-ಪುದುಚೇರಿ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಬುಧವಾರದೊಳಗೆ ಚಂಡಮಾರುತ ಅಬ್ಬರಿಸಲಿದೆ. ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.

English summary
The Navy is on high alert as Cyclone Fani, that is nearing coastal Odisha, intensified into a "very severe cyclonic storm" today. It could strengthen further and turn to a "extremely severe cyclonic storm" in the next 36 hours, the weather department said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X