ಇದೇ ಮೊದಲಲ್ಲ ಫೋನಿ ಸೈಕ್ಲೋನ್ ಹಿಂದೆಯೂ ಒಡಿಶಾಕ್ಕೆ ಅಪ್ಪಳಿಸಿತ್ತು
Recommended Video
ಪುರಿ, ಮೇ 3: ಫೋನಿ ಸೈಕ್ಲೋನ್ ಒಡಿಶಾಕ್ಕೆ ಹೊಸತೇನಲ್ಲ, ಇದಕ್ಕೂ ಮುನ್ನವೂ ಒಮ್ಮೆ ಈ ಚಂಡಮಾರುತ ಒಡಿಶಾಕ್ಕೆ ಅಪ್ಪಳಿಸಿ 10 ಸಾವಿರ ಮಂದಿ ಸಾವಿಗೆ ಕಾರಣವಾಗಿತ್ತು.
ಹೌದು 1999ರಲ್ಲಿ ಫೋನಿ ಚಂಡಮಾರುತ ತನ್ನ ರೌದ್ರಾವತಾರವನ್ನು ಒಡಿಶಾ ಜನರಿಗೆ ತೋರಿಸಿತ್ತು. ಆ ಸಮಯದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.
ಹಾಗಾಗಿಯೇ ಈ ಚಂಡಮಾರುತ ಹೆಸರು ಕೇಳುತ್ತಿದ್ದಂತೆಯೇ ಆತಂಕಗೊಂಡಿರುವ ಒಡಿಶಾ ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಕರಾವಳಿ ಭಾಗದಲ್ಲಿದ್ದ 10 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ.
ನೌಕಾಪಡೆ, ವಾಯುಸೇನೆ, ಕೋಸ್ಟ್‌ಗಾರ್ಡ್, ವಿಪತ್ತು ನಿರ್ವಹಣಾ ತಂಡಗಳು ಈಗಲೇ ಆಗಮಿಸಿವೆ. ಮುಂಜಾಗ್ರತಾ ಕ್ರಮಗಳ ಬಗ್ಗೆ ಪ್ರಧಾನಿ ಮೋದಿ ವರದಿ ಪಡೆದಿದ್ದಾರೆ.

ಒಡಿಶಾ ಮಳೆ, ಸಹಾಯವಾಣಿ ಆರಂಭ
ಒಡಿಶಾ ಗೃಹ ಸಚಿವಾಲಯವು ಈಗಾಗಲೇ ಸಹಾಯವಾಣಿ ಕೇಂದ್ರಗಳನ್ನು ತೆರೆದಿದೆ. 1938ಕ್ಕೆ ಕರೆ ಮಾಡಿ ತೊಂದರೆಗಳನ್ನು ಹೇಳಿಕೊಳ್ಳಬಹುದಾಗಿದೆ.

ಇಂದೋರ್‌ಗೆ ಒಡಿಶಾ ಜನರ ಸ್ಥಳಾಂತರ
ಒಡಿಶಾಕ್ಕೆ ಚಂಡಮಾರುತ ಅಪ್ಪಳಿಸುವ ಮುನ್ಸೂಚನೆ ಇರುವ ಕಾರಣ 10ಲಕ್ಷಕ್ಕೂ ಹೆಚ್ಚು ಮಂದಿಯನ್ನು ಇಂದೋರ್‌ಗೆ ಸ್ಥಳಾಂತರ ಮಾಡಲಾಗುತ್ತಿದೆ. ಈಗಾಗಲೇ ಚಂಡಮಾರುತ ಒಡಿಶಾದಿಂದ ಕೇವಲ 80 ಕಿ.ಮೀ ದೂರದಲ್ಲಿದೆ.

ಫೋನಿ ಅಪ್ಪಳಿಸಿದರೆ ಯಾವ್ಯಾವ ಜಿಲ್ಲೆಗೆ ಹಾನಿ
ಫೋನಿ ಚಂಡಮಾರುತ ಅಪ್ಪಳಿಸಿದರೆ ಗಜಪತಿ, ಗಂಜಂ, ಖುರ್ದಾ,ನಾಯ್‌ಗಢ, ಜಗತ್‌ಸಿಂಗ್‌ಪುರ, ಕೇಂದ್ರಪರ, ಜಾಜ್‌ಪುರ, ಭದ್ರಕ್ ಜಿಲ್ಲೆಗಳಿಗೆ ಹಾನಿ ಉಂಟಾಗಲಿದೆ.

147 ರೈಲುಗಳ ಸಂಚಾರ ಸ್ಥಗಿತ
ಒಡಿಶಾಕ್ಕೆ ಫ್ಯಾನಿ ಚಂಡಮಾರುತ ಆಗಮನದಿಂದಾಗಿ ಅನಾಹುತಗಳು ಸಂಭವಿಸುವ ಸಾಧ್ಯತೆಗಳಿದ್ದು ಮುನ್ನೆಚ್ಚರಿಕಾ ಕ್ರಮವಾಗಿ 147 ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮೇದಿನಿಪುರ, ಹೌರಾ,ಹೂಘ್ಲಿ, ಝಾರ್‌ಗ್ರಾಮ್, ಕೋಲ್ಕತ್ತ, ಆಂಧ್ರಪ್ರದೇಶದ ಶ್ರೀಕಾಕುಲಂ, ವಿಜಯನಗರ, ವಿಶಾಖಪಟ್ಟಣಂನಲ್ಲಿ ತೊಂದರೆಯಾಗುವ ಸಾದ್ಯತೆ ಇದೆ.












Click it and Unblock the Notifications