ಗುಜರಾತ್‌ಗೆ ಅಪ್ಪಳಿಸಿದ ಬಿಪರ್‌ಜಾಯ್ ಚಂಡಮಾರುತ: ಜೂನ್ 20ರವರೆಗೆ ಏನೆಲ್ಲಾ ಪರಿಣಾಮಗಳಾಗಲಿವೆ ತಿಳಿಯಿರಿ

ಬಿಪರ್‌ಜಾಯ್ ಚಂಡಮಾರುತ ನಿರೀಕ್ಷೆ ಮಾಡಿದಂತೆ ಗುಜರಾತ್ ಕಡಲ ತೀರಕ್ಕೆ ಬಂದು ಅಪ್ಪಳಿಸಲು ಆರಂಭಿಸಿದೆ. ಗುರುವಾರ ಮಧ್ಯರಾತ್ರಿಯ ವೇಳೆಗೆ ಜಖೌ ಬಂದರಿನ ಬಳಿ ಬಂದರಿನ ಬಳಿ ತೀವ್ರವಾಗುವ ಸಾಧ್ಯತೆ ಇದೆ. ಚಂಡಮಾರುತವು ಗುಜರಾತ್‌ನ ಮಾಂಡ್ವಿ ಮತ್ತು ಪಾಕಿಸ್ತಾನದ ಕರಾಚಿ ನಡುವೆ ಭೂಕುಸಿತ ಮಾಡಿದಾಗ ಗಾಳಿಯ ವೇಗ ಗಂಟೆಗೆ 115-125 ಕಿ.ಮೀ.ಗೆ ತೀವ್ರವಾಗಲಿದೆ.

10 ದಿನಗಳ ಕಾಲ ಅರಬ್ಬಿ ಸಮುದ್ರದಲ್ಲಿ ಚಲಿಸಿದ್ದ ಬಿಪರ್ ಜಾಯ್ ಚಂಡಮಾರುತ ಅಂತಿಮವಾಗಿ ಭೂಮಿಯ ಮೇಲೆ ಚಲಿಸಲು ಪ್ರಾರಂಭಿಸಿದೆ. ಈಗಾಗಲೇ ಭಾರಿ ಗಾಳಿ ಮತ್ತು ಮಳೆಯ ರೌದ್ರ ನರ್ತನಕ್ಕೆ ಕಚ್ ಮತ್ತು ಸೌರಾಷ್ಟ್ರ ಕರಾವಳಿ ತತ್ತರಿಸಿದೆ. ಸರ್ಕಾರ ಜನರ ರಕ್ಷಣೆಗಾಗಿ ಮುಂಜಾಗ್ರತೆ ವಹಿಸಿದ್ದ ಪರಿಣಾಮ ಅನಾಹುತ ಕಡಿಮೆಯಾಗುವ ಸಾಧ್ಯತೆ ಇದೆ.

Cyclone Biparjoy Hits Gujarat

ಮುಂದಿನ ಐದು ದಿನಗಳ ಕಾಲ ಬಿಪರ್‌ಜಾಯ್ ಚಂಡಮಾರುತ ಯಾವ ದಿಕ್ಕಿಗೆ ಚಲಿಸುತ್ತದೆ, ಪರಿಣಾಮ ಹೇಗಿರಲಿದೆ, ಯಾವೆಲ್ಲಾ ಪ್ರದೇಶಗಳನ್ನು ದಾಟಲಿದೆ ಎನ್ನುವ ವಿವರನ್ನು ದಿನಾಂಕದ ಪ್ರಕಾರ ಪಟ್ಟಿ ಮಾಡಲಾಗಿದೆ.

ಜೂನ್ 15, ಗುರುವಾರ: ಮಧ್ಯರಾತ್ರಿ ವೇಳೆಗೆ ಭಾರತ ಮತ್ತು ಪಾಕಿಸ್ತಾನ ಕರಾವಳಿ ಪ್ರದೇಶಗಳಿಗೆ ಅಪ್ಪಳಿಸಲಿದ್ದು, ಗಂಟೆಗೆ 90-110 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಕರಾಚಿ ಮತ್ತು ಮಾಂಡವಿ ನಡುವೆ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜೂನ್ 16, ಶುಕ್ರವಾರ : ಕರಾಚಿ ಮತ್ತು ಹೈದರಾಬಾದ್ ಪ್ರದೇಶಗಳನ್ನು ದಾಟುವ ಬಿಪರ್ ಜಾತ್ ಮತ್ತಷ್ಟು ಮುಂದಕ್ಕೆ ಸಾಗುತ್ತದೆ. ಮಧ್ಯಾಹ್ನ 12 ಗಂಟೆಯ ವೇಳೆಗೆ ಭಾರತ ಮತ್ತು ಪಾಕಿಸ್ತಾನದ ಕೆಲವು ಭಾಗಗಳಲ್ಲಿ ನೆಲೆಗೊಳ್ಳಲಿದ್ದು, ಗಂಟೆಗೆ 35-40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ಆದರೆ, ಕರಾಚಿ ಮತ್ತು ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಗಾಳಿಯ ವೇಗ ಗಂಟೆಗೆ 90-110 ಕಿಮೀ ಪಡೆದುಕೊಳ್ಳಲಿದೆ. ಸಂಜೆಯ ವೇಳೆಗೆ ಭಾರತದ ಮಧ್ಯ ಮತ್ತು ಉತ್ತರ ಭಾಗಗಳಲ್ಲಿ ಗಾಳಿಯ ವೇಗ ತೀವ್ರವಾಗಲಿದೆ.

ಜೂನ್ 17, ಶನಿವಾರ: ಮುಂಜಾನೆ ಬಿಪರ್ ಜಾಯ್ ಚಂಡಮಾರುತವು ಮತ್ತೆ ಭಾರತದ ಕಡೆಗೆ ಚಲಿಸಲಿದೆ. ಇದು ರಾಜಸ್ಥಾನದ ಕಡೆಗೆ ಸಾಗಲಿದ್ದು, ಭಾರತ ಮತ್ತು ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಗಾಳಿಯ ವೇಗ ಗಂಟೆಗೆ 90-110 ಕಿಮೀ ನಷ್ಟಿರುತ್ತದೆ. ಮಧ್ಯರಾತ್ರಿಯ ಹೊತ್ತಿಗೆ ಬಲವಾದ ಗಾಳಿ ಬೀಸುತ್ತದೆ. ಈ ಸಮಯದಲ್ಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಂತಹ ಭಾರತದ ಇತರ ಭಾಗಗಳಲ್ಲಿ ಸಹ ಬಲವಾದ ಗಾಳಿ ಬೀಸಲಿದೆ. ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಹವಾಮಾನ ಬದಲಾವಣೆಗೂ ಕಾರಣವಾಗುತ್ತದೆ.

ಜೂನ್ 18 ಭಾನುವಾರ: ಜೂನ್ 18ರಂದು ಚಂಡಮಾರುತ ದುರ್ಬಲಗೊಳ್ಳುವ ನಿರೀಕ್ಷೆಯಿದೆ. ಇದು ರಾಜಸ್ಥಾನದ ಮೇಲೆ ಸುಳಿದಾಡಲಿದೆ, ಆದರೆ ಗಾಳಿಯ ವೇಗವು ಹೆಚ್ಚಾಗಿ ಗಂಟೆಗೆ 30-35 ನಡುವೆ ಇರುತ್ತದೆ. ಭಾರತ ಮತ್ತು ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಭಾರಿ ಗಾಳಿ ಬೀಸಲಿದೆಯಾದರೂ ಚಂಡಮಾರುತವು ದುರ್ಬಲವಾಗಬಹುದು.

ಜೂನ್ 19 ಸೋಮವಾರ : ಜೋಧ್‌ಪುರ ಮತ್ತು ಜೈಪುರ ನಡುವೆ ಬಿಪರ್ ಜಾಯ್ ಚಂಡಮಾರುತ ಚಲಿಸುವ ನಿರೀಕ್ಷೆಯಿದೆ ಮತ್ತು ಗಾಳಿಯ ವೇಗವು ಸಾಮಾನ್ಯವಾಗಿರುತ್ತದೆ ಎಂದು ಹೇಳಲಾಗಿದೆ.

ಜೂನ್ 20 ಮಂಗಳವಾರ : ಬಿಪರ್ ಜಾಯ್ ಚಂಡಮಾರುತದ ಸ್ಥಳದ ಸುತ್ತಲೂ ಗಾಳಿಯ ವೇಗವು ಮತ್ತೊಮ್ಮೆ ಹೆಚ್ಚಾಗುತ್ತದೆ ಎಂದು ಹೇಳಾಲಿಗಿದೆ. ಮಧ್ಯರಾತ್ರಿಯವರೆಗೆ ಭಾರತ ಮತ್ತು ಪಾಕಿಸ್ತಾನದ ಬಹುತೇಕ ಭಾಗಗಳಲ್ಲಿ ಗಂಟೆಗೆ 90-110 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ.

ಬಿಪರ್‌ಜಾಯ್ ಚಂಡಮಾರುತವು ಭಾರಿ ಹಾನಿಯುಂಟು ಮಾಡುವ ಶಕ್ತಿ ಹೊಂದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಗುಜರಾತ್‌ನ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಸುಮಾರು 1 ಲಕ್ಷ ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಅಲೆಗಳು ತೀವ್ರಗೊಳ್ಳಲಿದ್ದು, ಸೌರಾಷ್ಟ್ರ ಮತ್ತು ಕಚ್ ಕರಾವಳಿಯ ತಗ್ಗು ಪ್ರದೇಶಗಳನ್ನು ಮುಳುಗಿಸಬಹುದು ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+