ಅಸಾನಿ ಚಂಡಮಾರುತ: ಕರಾವಳಿಯ 3 ರಾಜ್ಯಗಳಲ್ಲಿ ಹೈ ಅಲರ್ಟ್
ನವದೆಹಲಿ, ಮೇ 9: ಆಗ್ನೇಯ ಬಂಗಾಳಕೊಲ್ಲಿಯಲ್ಲಿನ ಅಸಾನಿ ಚಂಡಮಾರುತವು ಮುಂದಿನ 12 ಗಂಟೆಗಳಲ್ಲಿ 'ತೀವ್ರ ಚಂಡಮಾರುತ'ವಾಗಿ ಬದಲಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಸಾನಿ ಚಂಡಮಾರುತದ ತೀವ್ರತೆಯಿಂದ ಸೋಮವಾರ ಮತ್ತು ಮಂಗಳವಾರ ವಿವಿಧ ರಾಜ್ಯಗಳಲ್ಲಿ ಮಳೆಯಾಗಲಿದೆ. ಬುಧವಾರದ ನಂತರದಲ್ಲಿ ಪ್ರಭಾವ ಸ್ವಲ್ಪ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
"ಆಗ್ನೇಯ ಬಂಗಾಳಕೊಲ್ಲಿ ಮೇಲೆ ಅಸನಿ ಚಂಡಮಾರುತ ವಾಯುವ್ಯಕ್ಕೆ ಚಲಿಸಲಿದೆ. ಇಂದಿನ 1130 ಗಂಟೆಗಳ ಮೊದಲು ಅದು ಕಾರ್ ನಿಕೋಬಾರ್‌ನ (ನಿಕೋಬಾರ್ ದ್ವೀಪಗಳು) ಪಶ್ಚಿಮ-ವಾಯುವ್ಯಕ್ಕೆ 530 ಕಿಮೀ, ಪೋರ್ಟ್ ಬ್ಲೇರ್‌ನಿಂದ 440 ಕಿಮೀ ಪಶ್ಚಿಮಕ್ಕೆ (ಅಂಡಮಾನ್ ದ್ವೀಪಗಳು) ವಿಶಾಖಪಟ್ಟಣದ (ಆಂಧ್ರಪ್ರದೇಶ) ಆಗ್ನೇಯಕ್ಕೆ 900 ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿತ್ತು. ಅಸಾನಿ ಚಂಡ ಮಾರುತದ ಕುರಿತು ಮೂರು ರಾಜ್ಯಗಳಲ್ಲಿ ಅಲರ್ಟ್ ಘೋಷಿಸಲಾಗಿದ್ದು, ಈ ಕುರಿತು ಪ್ರಮುಖ ಅಂಶಗಳನ್ನು ಇಲ್ಲಿ ತಿಳಿಯೋಣ.

ಅಸಾನಿ ಚಂಡ ಮಾರುತದ ಕುರಿತು ಪ್ರಮುಖ ಅಂಶಗಳು:
* ಅಸಾನಿ ಚಂಡಮಾರುತವು ಇಂದಿನ 1730 ಗಂಟೆಗಳ ಮೊದಲಾರ್ಧಕ್ಕೆ ತೀವ್ರ ಚಂಡಮಾರುತವಾಗಿ ರೂಪಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
* ಚಂಡಮಾರುತದ ಪ್ರಭಾವದಿಂದ ಆಂಧ್ರಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಎಚ್ಚರಿಕೆ ನೀಡಲಾಗಿದೆ, ಕರಾವಳಿ ಪ್ರದೇಶಗಳಲ್ಲಿ ಮೇ 10 ರಿಂದ ಭಾರೀ ಗಾಳಿ ಮತ್ತು ಮಳೆಯಾಗುವ ನಿರೀಕ್ಷೆಯಿದೆ.
* ಚಂಡಮಾರುತದಿಂದ ಒಡಿಶಾ ಅಥವಾ ಆಂಧ್ರಪ್ರದೇಶದ ಕರಾವಳಿಯಲ್ಲಿ ಯಾವುದೇ ಭೂಕುಸಿತವನ್ನು ಉಂಟುಮಾಡುವುದಿಲ್ಲ, ಆದರೆ ಸಮುದ್ರದಲ್ಲಿ ಕರಾವಳಿಗೆ ಸಮಾನಾಂತರವಾಗಿ ಚಲಿಸುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತುಂಜಯ್ ಮೊಹಪ್ತ್ರ ಹೇಳಿದ್ದಾರೆ.

* ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ಅಸಾನಿ ಚಂಡಮಾರುತದ ರಚನೆಯ ದೃಷ್ಟಿಯಿಂದ ತನ್ನ ನೌಕರರು ಮತ್ತು ವಿಪತ್ತು ನಿರ್ವಹಣಾ ತಂಡಗಳಿಗೆ ಎಚ್ಚರಿಕೆಯನ್ನು ನೀಡಿದೆ
* ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಭಾನುವಾರ ಚಂಡಮಾರುತದ ಆಸಾನಿ ಚಂಡಮಾರುತವು ಗಂಟೆಗೆ 14 ಕಿಮೀ ವೇಗದಲ್ಲಿ ಚಲಿಸಿತು ಎಂದು ಭುವನೇಶ್ವರ್ ಹವಾಮಾನ ಕೇಂದ್ರದ ಟ್ವೀಟ್‌ನಲ್ಲಿ ತಿಳಿಸಿದೆ.
* ಭಾರತೀಯ ಹವಾಮಾನ ಇಲಾಖೆ ಭಾನುವಾರ ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಸಮುದ್ರಕ್ಕೆ ಮೀನುಗಾರಿಕೆ ಮಾಡುವವರಿಗೆ ಎಚ್ಚರಿಕೆ ನೀಡಿದೆ. ಹವಾಮಾನ ಇಲಾಖೆ ಎಚ್ಚರಿಕೆಯಲ್ಲಿ, "ಮೇ 8 ರಂದು ಪೂರ್ವ ಮಧ್ಯ ಮತ್ತು ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಪಕ್ಕದ ಅಂಡಮಾನ್ ಸಮುದ್ರಕ್ಕೆ ಇಳಿಯದಂತೆ ಮೀನುಗಾರಿಗೆ ಸೂಚಿಸಲಾಗಿದೆ.












Click it and Unblock the Notifications