Scam alert: ರಾಮ ಮಂದಿರ ಉದ್ಘಾಟನೆ ಅವಕಾಶ ದುರ್ಬಳಕೆ: VIP ಪಾಸ್ ಪ್ರಸಾದ ನಿಧಿ ಸಂಗ್ರಹಿಸುವ ಸೈಬರ್ ವಂಚಕರು, ಎಚ್ಚರವಹಿಸಿ
ಬೆಂಗಳೂರು, ಜನವರಿ 20: ಭಾರತದಲ್ಲಿ ಧರ್ಮದ ಆಚರಣೆಗೆ, ದೇವರ ಹೆಸರಿನಲ್ಲಿ ಹಿಂದೆ-ಮುಂದೆ ಹಣ ನೀಡುತ್ತಾರೆ. ಹೀಗಾಗಿ ದೇವರ ಹೆಸರನಲ್ಲಿ ಬಹಳ ಸುಲಭವಾಗಿ ಭಕ್ತರಿಗೆ ವಂಚನೆ ಮಾಡಿಬಿಡಬಹುದೆಂಬ ದುರಾಲೋಚನೆಯಲ್ಲಿ ಸೈಬರ್ ಜಾಲವೊಂದು ಸೃಷ್ಟಿಯಾಗಿದೆ. ಇದೀಗ ಅಯೋಧ್ಯೆ ಶ್ರಿರಾಮ ಮಂದಿರ ಹೆಸರಿನಲ್ಲಿ ವಂಚನೆಯ ಜಾಲ ಭಕ್ತರಿಗೆ ಬಲೆ ಬೀಸಿದೆ.
ಭಾರತಾದ್ಯಂತ ಶ್ರೀರಾಮ ಜಪ, ತಪ, ಹವನ, ವಿಶೇಷ ಪೂಜೆಗಳು ನಡೆಯುತ್ತಿವೆ. ಭಕ್ತರು ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ. ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯ ಜನವರಿ 22ರಂದು ಸೋಮವಾರ ನಡೆಯಲಿದೆ. ಇದರ ಸದಾವಕಾಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ವಂಚಕರು ನಿಮಗೆ ಹಣ ಕೇಳ ಬಹುದು, ನಿಮ್ಮಮೊಬೈಲ್ ಫೋನ್‌ಗೆ ಸಂದೇಶ, ಲಿಂಕ್ ಕಳಹಿಸಬಹುದು. ಇವುಗಳಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು? ಎಂಬ ಮಾಹಿತಿ ಇಲ್ಲಿದೆ.

* ರಾಮಮಂದಿರಕ್ಕೆ ಉಚಿತ ವಿಐಪಿ ಪಾಸ್
ಜನವರಿ 22ರಂದು ನೀವು ರಾಮ ಮಂದಿರ ಪ್ರವೇಶಿಸಲು ಉಚಿತಿ ವಿಐಪಿ ಪಾಸ್‌ಗಳು ಬೇಕೆ? ಎಂದು ಮೊಬೈಲ್ ಸಂದೇಗಳು ಹರಿದಾಡುತ್ತಿವೆ. ಹೌದು, ಈಗಾಗಲೇ ಅನೇಕ ಮಂದಿಯ ವಾಟ್ಸ್‌ಪ್‌ಗಳಿಗೆ ವಿಐಪಿ ಪಾಸ್ ಕುರಿತು ಸಂದೇಶಗಳು ಬಂದಿವೆ.
ಈ ಉಚಿತ ಪಾಸ್ ಮೂಲಕ ನೀವು ಅಯೋಧ್ಯೆ ರಾಮ ಮಂದಿರ ಪ್ರವೇಶ ಪಡೆಯಬಹದು. ಈ ಕುರಿತು ವಿಶ್ವ ಹಿಂದೂ ಪರಿಷರ್ ವಕ್ತಾರರೊಬ್ಬರು ನಕಲಿ ವಿಐಪಿ ಪಾಸ್ ವಂಚನೆಯ ವಾಟ್ಸಾಫ್ ಸಂದೇಶದ ಸ್ಕ್ರೀನ್‌ಶಾಟ್ ಶೇರ್ ಮಾಡಿಕೊಂಡಿದ್ದಾರೆ.
'ರಾಮ ಜನ್ಮಭೂಮಿ ಗೃಹಸಂಪರ್ಕ್ ಅಭಿಯಾನ್' ಎಂದು ಹೆಸರಿಸಲಾಗಿದೆ. ವ್ಯಕ್ತಿಯನ್ನು ರಾಮ ಜನ್ಮಭೂಮಿ ಕರೆದೊಯ್ಯಲು ನೀವು ಈ ವಿಐಪಿ ಪಾಸ್ ಪಡೆಯಬೇಕು. ಅದಕ್ಕಾಗಿ ನೀವು ಫಾರ್ಮ್ ಅನ್ನು ಭರ್ತಿ ಮಾಡಬೇಕು, ಇಲ್ಲವೇ ಈ ಕ್ಯೂಆರ್‌ಕೋಡ್, ನಂಬರ್‌ಗೆ ಹಣ ಹಾಕವಂತೆ ಕೇಳಬಹುದು. ಇದೆಲ್ಲವು ಫೇಕ್ ಆಗಿದ್ದು, ಇಂತಹ ಲಿಂಕ್, ಸಂದೇಶದಿಂದ ದೂರವಿರಿ. ಅವುಗಳನ್ನು ನಂಬದಂತೆ ವಕ್ತಾರರು ಮನವಿ ಮಾಡಿಕೊಂಡಿದ್ದಾರೆ.

ಹಣ ಲಪಟಾಯಿಸಬಹುದು ಎಚ್ಚರ
ಈ ಕುರಿತು ಯಾವುದೇ ರಾಜ್ಯ ಸರ್ಕಾರ, ದೇವಸ್ಥಾನದ ಟ್ರಸ್ಟ್ ಸದಸ್ಯರು, ಕೇಂದ್ರ ಸರ್ಕಾರ ಭಾಗಿಯಾಗಿಲ್ಲ. ಅಧಿಕೃತವಾಗಿ ಅವರು ವಿಐಪಿ ಪಾಸ್ ಕೊಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ಇಂತಹ ನಕಲಿ ಸಂದೇಶ ನಂಬಿದರೆ, ಕ್ಷಣಾರ್ಧದಲ್ಲಿ ನಿಮ್ಮ ವೈಯಕ್ತಿಕ ಬ್ಯಾಂಕ್ ಖಾತೆ ವಿವರ, ಹಣ, ಕಾರ್ಡ್ ಸಂಖ್ಯೆ ಸೈಬರ್ ವಂಚಕರ ಕೈ ಸೇರಬಹುದು. ಆದ್ದರಿಂದ ಎಚ್ಚರಿಕೆ ವಹಿಸಬೇಕಿದೆ.
* ರಾಮ ಮಂದಿರ ಹೆಸರಲ್ಲಿ ನಿಧಿ ಸಂಗ್ರಹ
ಶ್ರೀ ರಾಮ ಜನ್ಮಭೂಮಿ ತೀರ್ಥ ಛೇತ್ರ ಅಯೋಧ್ಯೆ, ಉತ್ತರ ಪ್ರದೇಶ' ನಕಲಿ ಸೋಷಿಯಲ್ ಮೀಡಿಯಾ ಪುಟದಲ್ಲಿ ದೇವರ ಹೆಸರಿನಲ್ಲಿ ಹಣ ಸಂಗ್ರಹಕ್ಕೆ ಮುಂದಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ X ನಲ್ಲಿ ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.
ಈ ನಕಲಿ ಪುಟದಲ್ಲಿ QR ಕೋಡ್ ನೀಡಲಾಗಿದೆ. ರಾಮ ಮಂದಿರ ನಿರ್ಮಾಣದ ಹೆಸರಿನಲ್ಲಿ ಹಣವನ್ನು ನೀಡುವಂತೆ ಬಳಕೆದಾರರನ್ನು ಕೇಳಲಾಗುತ್ತಿದೆ. ಶ್ರೀ ರಾಮ ಜನ್ಮ ಭೂಮಿ ಹೆಸರಿನಲ್ಲಿ ದೇಣಿಗೆಗಾಗಿ ಸಂದೇಶಗಳನ್ನು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ. ಕೆಲವರು ಇದು ನಿಜವಿರಬಹುದು ಎಂದು ನಂಬುತ್ತಿದ್ದಾರೆ.
ಇಂತಹ ಕೊಡುಗೆಗಳಿಗೆ ಮಾರು ಹೋಗದಂತೆ ಎಚ್ಚರಿಕೆ ವಹಿಸಬೇಕಿದೆ. ಕೆಲವರು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಹೆಸರಿನಲ್ಲಿ ನಕಲಿ ಐಡಿಗಳನ್ನು ತಯಾರಿಸಿ ಇತರರನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ. ಈ ವಿಷಯವನ್ನು ಕೇಂದ್ರ ಗೃಹ ಸಚಿವಾಲಯ ಮತ್ತು ದೆಹಲಿ ಮತ್ತು ಉತ್ತರ ಪ್ರದೇಶದ ಪೊಲೀಸ್ ಮುಖ್ಯಸ್ಥರಿಗೆ ತಿಳಿಸಲಾಗಿದೆ ಎಂದು ನಕಲಿ ಪುಟದ ಪೋಸ್ಟ್‌ಅನ್ನು ರೀ ಪೋಸ್ಟ್ ಮಾಡಿ ನಂಬದಂತೆ ಮನವಿ ಮಾಡಲಾಗಿದೆ.
सावधान..!!
— विनोद बंसल Vinod Bansal (@vinod_bansal) December 31, 2023
श्री राम जन्मभूमि तीर्थ क्षेत्र के नाम से फर्जी आईडी बना कर कुछ लोग पैसा ठगी का प्रयास कर रहे हैं। @HMOIndia @CPDelhi @dgpup @Uppolice को ऐसे लोगों के विरूद्ध विलम्ब कार्यवाही करनी चहिए। @ShriRamTeerth has not authorised any body to collect funds for this occasion. pic.twitter.com/YHhgTBXEKi
* ಶ್ರಿರಾಮ ಮಂದಿರದಿಂದ ಉಚಿತ ಪ್ರಸಾದ್ ವಿತರಣೆ
ಶ್ರೀರಾಮ ಮಂದಿರ ಉದ್ಘಾಟನೆಯ ಕಾರ್ಯಕ್ರಮ ಬಳಿಕ ನಿಮ್ಮ ಮನೆಗೆ ರಾಮಮಂದಿರ ಪ್ರಸಾದ್ ತಲುಪಿಸುತ್ತೇವೆ ಎಂದು ಹೇಳುವ ವಂಚಕರ ಜಾಲ ಪತ್ತೆ ಆಗಿದೆ. ಹೌದು, ಉಚಿತ ಪ್ರಸಾದ್, ಲಡ್ಡು ತಲುಪಿಸುವುದಾಗಿ ಹೇಳಿಕೊಳ್ಳುವ ವೆಬ್‌ಸೈಟ್‌ಗಳನ್ನು ನೀವು ನೋಡಬಹುದು.
''ಖಾದಿ ಆರ್ಗ್ಯಾನಿಕ್" ಹೆಸರಿನಲ್ಲಿ ವೆಬ್‌ಸೈಟ್ ಮೂಲಕ ಪ್ರಸಾದ್ ಪೂರೈಕೆ ಬಗ್ಗೆ ಭಕ್ತರಿಗೆ ಆಮಿಷ ಒಡ್ಡಲಾಗಿದೆ. ಮನೆ ಬಾಗಿಲಿಗೆ ತಲುಪಿಸುತ್ತೇವೆ ಎಂದು ಹಣ ಲೂಟಿಗೆ ಮುಂದಾಗಿದ್ದಾರೆ. ಈ ಇದು ಸಂಪೂರ್ಣ ಆರ್ಗಾನಿಕ್ ಎಂದು ಸಹ ಹೇಳಿದ್ದಾರೆ.
ದುರದೃಷ್ಟವೆಂದರೆ ಆನ್‌ಲೈನ್ ಖರೀದಿ ವೇದಿಕೆಯಾಗಿರುವ ಅಮೇಜಾನ್ (Amazon) ನಲ್ಲೂ ಸಹ ಖದೀಮರು ಪ್ರಸಾದದ ಪ್ಯಾಕೇಟ್ ಪೋಟೋ ಹಾಕಿ ವಂಚನೆಗೆ ಮುಂದಾಗಿದ್ದಾರೆ. ಇಂತಹ ಹಲವು ವೆಬ್‌ಸೈಟ್, ಸಂದೇಶ್ ಲಿಂಕ್‌ಗಳು ಹರಿದಾಡುತ್ತಿದ್ದು, ಯಾರೂ ಇದಕ್ಕೆ ಮೋಸ ಹೋಗಬಾರದು. ಎಚ್ಚರಿಕೆ ವಹಿಸಬೇಕಿದೆ.












Click it and Unblock the Notifications