Cauvery Water: ನೀರು ಬಿಡಿ ಎಂದ ತಮಿಳುನಾಡು.. ನೀರಿಲ್ಲ ಎಂದ ಕರ್ನಾಟಕ: ಡ್ಯಾಂ ಚೆಕ್ ಮಾಡಲು ಬರ್ತಾರಂತೆ ಅಧಿಕಾರಿಗಳು!

ಚೆನ್ನೈ, ಜೂನ್. 26: ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ ದಾಖಲಿಸಿತ್ತು. ಕಳೆದ ವಾರದಿಂದ ಮಳೆ ಕೊಂಚ ಹೆಚ್ಚಾಗಿದ್ದು ಜಲಾಶಯಗಳಲ್ಲಿ ಒಳಹರಿವು ಹೆಚ್ಚಾಗಿದೆ. ಇದರ ನಡುವೆಯೇ ಪಕ್ಕದ ರಾಜ್ಯ ತಮಿಳುನಾಡು ನೀರಿಗಾಗಿ ಬೇಡಿಕೆಯಿಟ್ಟಿದೆ. ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಕೊರೆತೆಯಿದೆ ಎಂದು ಹೇಳಿದರೂ ಕೂಡ ಒಪ್ಪದ ಸಿಡಬ್ಲ್ಯುಎಂಎ ಡ್ಯಾಂ ಪರಿಶೀಲನೆಗೆ ಹೊರಟಿದೆ!.

ಹೌದು.. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಮಂಗಳವಾರ ಕರ್ನಾಟಕಕ್ಕೆ ತಂಡವನ್ನು ಕಳುಹಿಸಲು ನಿರ್ಧರಿಸಿದೆ. ಕಾವೇರಿ ಜಲಾನಯನ ಪ್ರದೇಶದ ನೀರಿನ ಪರಿಸ್ಥಿತಿಯನ್ನು ಪರಿಶೀಲಿಸಲು ಮತ್ತು ಜಲಾಶಯಗಳಲ್ಲಿನ ನೀರಿನ ಮಟ್ಟವನ್ನು ಪರಿಶೀಲಿಸಲು ಬರುತ್ತಿದೆ. ತಮಿಳುನಾಡು ಕಾವೇರಿ ನೀರು ಬೀಡಬೇಕು ಎಂದು ಮನವಿ ಮಾಡಿದೆ.

CWMA to send team to Karnataka to check and review the water situation in dams

ಸಿಡಬ್ಲ್ಯುಎಂಎ ಮುಂದೆ ನೀರಿಗಾಗಿ ಬೇಡಿಕೆಯಿಟ್ಟ ತಮಿಳುನಾಡು

ಜೂನ್ 14 ರಂದು ನಡೆದ 97 ನೇ ಸಿಡಬ್ಲ್ಯುಆರ್‌ಸಿ ಸಭೆಯ ಆದೇಶದ ವಿರುದ್ಧ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳಿಂದ ಸಿಡಬ್ಲ್ಯುಎಂಎ 31 ನೇ ಸಭೆಯಲ್ಲಿ ಅಧಿಕಾರಿಗಳು ಅಹವಾಲುಗಳನ್ನು ಆಲಿಸಿದ್ದಾರೆ. ಸೋಮವಾರದ ವೇಳೆಗೆ ಬಿಲ್ಲಿಗುಂಡುಲುನಲ್ಲಿನ ಕೊರತೆಯನ್ನು ನೀಗಿಸಲು 5.37 ಟಿಎಂಸಿ ಅಡಿ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ತಮಿಳುನಾಡು ಸಿಡಬ್ಲ್ಯೂಎಂಎಗೆ ಒತ್ತಾಯಿಸಿದೆ.

ಆದರೆ, ಕರ್ನಾಟಕವು ತನ್ನ ನಾಲ್ಕು ಪ್ರಮುಖ ಜಲಾಶಯಗಳಲ್ಲಿ ಪ್ರಸ್ತುತ 70% ಕೊರತೆಯಿದೆ. ಕುಡಿಯುವ ನೀರಿಗೆ ರಾಜ್ಯ ಆದ್ಯತೆ ನೀಡುತ್ತಿದೆ. ಕಾಲುವೆಗಳಿಗೂ ನೀರು ಬಿಡುತ್ತಿಲ್ಲ. ಯಾವುದೇ ಆದೇಶವನ್ನು ಅನುಸರಿಸಲು ಕಷ್ಟವಾಗುತ್ತದೆ. ತಮಿಳುನಾಡು ತನ್ನ ಜಲಾಶಯಗಳಿಂದ ನದಿಗೆ ನೀರು ಬಿಡುತ್ತಿದೆ ಎಂದು ತಿಳಿಸಿದೆ.

ಜೂನ್ 1 ರಿಂದ ಜೂನ್ 24 ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಸಂಚಿತ ಒಳಹರಿವು 7.307 ಟಿಎಂಸಿ ಆಗಿತ್ತು, ಕಳೆದ 30 ವರ್ಷಗಳ ಸರಾಸರಿ ಒಳಹರಿವು 24.45 ಟಿಎಂಸಿ ಇತ್ತು. ಅಧಿಕಾರಿಗಳ ಪ್ರಕಾರ, ಜೂನ್ 24 ಕ್ಕೆ ಬಿಳಿಗುಂಡ್ಲುನಲ್ಲಿ 5.37 ಟಿಎಂಸಿ ನೀರು ಇರಬೇಕಾಗಿತ್ತು ಆದರೆ, ಅದು 2 ಟಿಎಂಸಿಗಿಂತ ಕಡಿಮೆಯಾಗಿದೆ.

CWMA to send team to Karnataka to check and review the water situation in dams

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್ ಸಕ್ಸೇನಾ ಅವರು ಜುಲೈನಲ್ಲಿ 31.24 ಟಿಎಂಸಿ ನೀರು ಬಿಡುಗಡೆ ಮಾಡುವ ಸುಪ್ರೀಂ ಕೋರ್ಟ್ ತೀರ್ಪಿಗೆ ಕರ್ನಾಟಕ ಬದ್ಧರಾಗಿರಬೇಕು. ಜೂನ್ 1 ರಿಂದ 24 ರವರೆಗೆ ಬಿಳಿಗುಂಡ್ಲುನಲ್ಲಿ ಕೇವಲ 1.99 ಟಿಎಂಸಿ ಅಡಿ ನೀರು ಮಾತ್ರ ಬಂದಿದೆ ಎಂದು ಸಂದೀಪ್ ಸಕ್ಸೇನಾ ತಿಳಿಸಿದ್ದಾರೆ.

ಜೂನ್ 24 ಕ್ಕೆ ಬಿಳಿಗುಂಡ್ಲುವಿಗೆ 5.37 ಟಿಎಂಸಿ ನೀರು ಇರುವಂತೆ ನೀರು ಹರಿಸಬೇಕು ಎಂದು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಮತ್ತು ಜೂನ್‌ನ ಉಳಿದ ಅವಧಿಗೆ ಮತ್ತು ಸುಪ್ರೀಂ ಕೋರ್ಟ್ ಮಾರ್ಪಡಿಸಿದ ವೇಳಾಪಟ್ಟಿಯಂತೆ ಜುಲೈಗೆ 31.24 ಟಿಎಂಸಿ ಎಫ್‌ಟಿ ಹರಿವನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಮಿಳುನಾಡು ಒತ್ತಾಯಿಸಿದೆ.

ಮೆಟ್ಟೂರು ಜಲಾಶಯದ ಪ್ರಸ್ತುತ ಸಂಗ್ರಹಣೆ 12.49 ಟಿಎಂಸಿ ಆಗಿದ್ದು, ಬಳಕೆಗೆ 2 ಟಿಎಂಸಿ ಮಾತ್ರ ಲಭ್ಯವಿದೆ. ಕುಡಿಯುವ ನೀರು ಮತ್ತು ಪರಿಸರ ಅಗತ್ಯಗಳಿಗಾಗಿ ಪ್ರತಿದಿನ ಸುಮಾರು 1,000 ಕ್ಯೂಸೆಕ್‌ಗಳನ್ನು ಬಿಡಲಾಗುತ್ತಿರುವುದರಿಂದ, ಜೂನ್ 12 ರಂದು ನಿಗದಿಯಂತೆ ನೀರಾವರಿಗಾಗಿ ಡ್ಯಾಂ ಓಪನ್ ಮಾಡಲು ಸಾಧ್ಯವಾಗಲಿಲ್ಲ ಎಂದು ಸಂದೀಪ್ ಸಕ್ಸೇನಾ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+