Viral video: ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಅಮುಲ್ ಮಜ್ಜಿಗೆ ಪ್ಯಾಕ್‌ನಲ್ಲಿ ಜೀವಂತ ಹುಳುಗಳು!
ನವದೆಹಲಿ, ಜುಲೈ. 20: ಇತ್ತೀಚಿನ ದಿನಗಳಲ್ಲಿ ಆಹಾರ ವಿತರಣಾ ಅಪ್ಲಿಕೇಶನ್‌ಗಳ ಬಳಕೆ ಹೆಚ್ಚಾಗಿರೋದು ನಮಗೆ ಗೊತ್ತೆ ಇದೆ. ಸ್ವಿಗ್ಗಿ, ಜೋಮ್ಯಾಟೋ ಜೊತೆಗೆ ಈಗ ಹೆಚ್ಚಾಗಿರೋದು ಹತ್ತು ನಿಮಿಷದಲ್ಲಿ ನಿಮ್ಮ ಮನೆಗೆ ತರಕಾರಿ, ಹಾಲು, ಹಣ್ಣು, ದಿನಸಿ ತಂದುಕೊಡುವ ಆಪ್‌ಗಳ ಬಳಕೆ.
ಬ್ಯುಸಿ ಜೀವನದಲ್ಲಿ ದಿನಸಿ, ತರಕಾರಿ ಅಂತ ಹೊರ ಹೋಗೋದಕ್ಕಿಂತ ಹೆಚ್ಚಾಗಿ ಬೇಗ ಬೇಗ ಮನೆ ಬಾಗಿಲಿಗೆ ನಮ್ ಅವಶ್ಯಕತೆಗೆ ತಕ್ಕಂತೆ ದಿನಸಿ ತಂದುಕೊಡುವ ಆಪ್‌ಗಳಿಗೆ ಮೊರೆ ಹೋಗುತ್ತೇವೆ. ಇಂತಹದ್ದೆ ರೀತಿ ಆನ್‌ಲೈನ್‌ನಲ್ಲಿ ಅಮುಲ್ ಮಜ್ಜಿಗೆ ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬರಿಗೆ ಜೀವಂತ ಹುಳುಗಳಿಂದ ತುಂಬಿದ್ದ ಬಾಕ್ಸ್ ಬಂದಿದೆ. ಇದು ಆಹಾರ ಸೇವಾ ಉದ್ಯಮದ ಬಗ್ಗೆ ಆತಂಕ ಮೂಡಿಸಿದೆ.

ಹೌದು... ಆನ್‌ಲೈನ್ ಅಪ್ಲಿಕೇಷನ್ ಬಳಕೆದಾರ ಗಜೇಂದರ್ ಯಾದವ್ ಎನ್ನುವವರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಅಮುಲ್ ಹೈ-ಪ್ರೋಟೀನ್ ಮಜ್ಜಿಗೆಯ ಪೆಟ್ಟಿಗೆಯಲ್ಲಿ ಜೀವಂತ ಹುಳುಗಳು ಇರುವುದನ್ನು ಸೋಶೀಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಟೋ, ವಿಡಿಯೋಗಳು ಸಕತ್ ವೈರಲ್ ಆಗುತ್ತಿವೆ.
"ಅಮುಲ್ ವೆಬ್‌ಸೈಟ್‌ನಿಂದ ಉತ್ಪನ್ನಗಳನ್ನು ಖರೀದಿಸುವುದನ್ನು ನಿಲ್ಲಿಸಿ. ಹೇ ಅಮುಲ್ ನೀವು ನಮಗೆ ನಿಮ್ಮ ಹೆಚ್ಚಿನ ಪ್ರೊಟೀನ್ ಮಜ್ಜಿಗೆ ಜೊತೆಗೆ ಹುಳಗಳನ್ನು ಸಹ ಕಳುಹಿಸಿದ್ದೀರಿ. ನಾನು ಇತ್ತೀಚೆಗೆ ಖರೀದಿಸಿದ ಮಜ್ಜಿಗೆಯಲ್ಲಿ ಹುಳುಗಳು ಪತ್ತೆಯಾಗಿವೆ ಎಂದು ಗಜೇಂದರ್ ಯಾದವ್ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಬಾಕ್ಸ್ ಮೇಲೆ ಬಿಳಿ ಹುಳುಗಳು ಹರಿದಾಡುತ್ತಿರುವುದನ್ನು ನೋಡಬಹುದು. ಇದರ ಜೊತೆಗೆ ಹಾಳಾಗಿರು ಮಜ್ಜಿಗೆ ಕೂಡ ಇದರಲ್ಲಿದೆ. "ಬಹುತೇಕ ಅರ್ಧದಷ್ಟು ಪ್ಯಾಕೆಟ್‌ಗಳು ತೆರೆದಿವೆ ಅಥವಾ ಹರಿದಿವೆ. ಮಜ್ಜಿಗೆ ಈಗಾಗಲೇ ಕೊಳೆತಿದೆ. ಮಜ್ಜಿಗೆಯಿಂದ ಅತ್ಯಂತ ಕೆಟ್ಟ ವಾಸನೆ ಬರುತ್ತಿದೆ" ಎಂದು ಗಜೇಂದರ್ ಯಾದವ್ ಮುಂದಿನ ಪೋಸ್ಟ್‌ನಲ್ಲಿ ಬರೆದು ಅಮುಲ್‌ಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
🚨 Stop Buying products from @Amul_Coop website 🚨
— Gajender Yadav (@imYadav31) July 17, 2024
Hey Amul you have sent us WORMS along with your high protien buttermilk.
I am writing to express my deep dissatisfaction after discovering worms in the buttermilk I purchased recently. This experience was incredibly..... pic.twitter.com/vmLC4rp89z
ಇದರ ಜೊತೆಗೆ ಅಮುಲ್‌ಗೆ ಕಳುಹಿಸಿದ ಇಮೇಲ್‌ನ ಸ್ಕ್ರೀನ್‌ಶಾಟ್‌ಗಳನ್ನು ಸಹ ಪೋಸ್ಟ್ ಮಾಡಿದರು, ಅವರು ಪರೀಕ್ಷೆಗಾಗಿ ಈ ಸಾಕ್ಷಿಗಳನ್ನು ಸಂಗ್ರಹಿಸಬೇಕೆಂದು ಒತ್ತಾಯಿಸಿದ್ದಾರೆ. ಇದಾದ ಬಳಿಕ ಅಮುಲ್ ಕಂಪನಿ ಕ್ಷಮೆಯಾಚಿಸಿದೆ ಎಂದು ಉಲ್ಲೇಖಿಸಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ಯಾರನ್ನಾದರೂ ಕಳುಹಿಸುತ್ತಿದೆ ಮತ್ತು ಮರುಪಾವತಿ ಮಾಡುವ ಭರವಸೆ ನೀಡಿದೆ.
ಮತ್ತೊಂದು ಪೋಸ್ಟ್‌ನಲ್ಲಿ, ಅಮುಲ್‌ನ ಗುಜರಾತ್ ಮುಖ್ಯ ಕಚೇರಿಯಿಂದ ತನಗೆ ಕರೆ ಬಂದಿದೆ. "ಘಟನೆಗಾಗಿ ಅವರು ಕ್ಷಮೆಯಾಚಿಸಿದ್ದಾರೆ. ಅವರು ಟೈಮ್‌ಲೈನ್ ಅನ್ನು ಪರಿಶೀಲಿಸಿದ್ದಾರೆ. ಅವರ ಪ್ರಕಾರ..... ಇದು ಅವರ ಲಾಜಿಸ್ಟಿಕ್ಸ್ ತಂಡ/ಪಾಲುದಾರರ ವಿಳಂಬದಿಂದಾಗಿ ಸಂಭವಿಸಿದೆ. ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ ಎಂದು ನನಗೆ ಭರವಸೆ ನೀಡಿದ್ದಾರೆ" ಎಂದು ಬರೆದಿದ್ದಾರೆ.












Click it and Unblock the Notifications