Sabarimala: ಶಬರಿಮಲೆಯಲ್ಲಿ ನೂಕುನುಗ್ಗಲು- ಹಲವೆಡೆ ಸಂಚಾರ ನಿಯಂತ್ರಣ
ಕೊಟ್ಟಾಯಂ ಡಿಸೆಂಬರ್ 21: ಶಬರಿಮಲೆಯಲ್ಲಿ ಜನಸಂದಣಿ ದಿನದಿಂದ ದಿನಕ್ಕೆ ನಿಯಂತ್ರಣ ತಪ್ಪುತ್ತಿದೆ. ಮಂಗಳವಾರ ಪಂಬಾ ಮತ್ತು ಸನ್ನಿಧಾನಂನಲ್ಲಿ ಮತ್ತೆ ಯಾತ್ರಾರ್ಥಿಗಳ ಭಾರೀ ನೂಕುನುಗ್ಗಲು ಕಂಡುಬಂದಿದೆ. ಇದರಿಂದಾಗಿ ಕೊಟ್ಟಾಯಂ ಮತ್ತು ಪತ್ತನಂತಿಟ್ಟ ಜಿಲ್ಲೆಗಳ ಕೆಲವು ಭಾಗಗಳಲ್ಲಿ ವಾಹನಗಳ ಸಂಚಾರವನ್ನು ಪೊಲೀಸರು ಪರಿಶೀಲಿಸುವಂತೆ ಒತ್ತಾಯಿಸಲಾಗುತ್ತಿದೆ.
ಮಂಗಳವಾರ ಸಂಜೆ 6 ಗಂಟೆಯವರೆಗೆ 54,525 ಯಾತ್ರಾರ್ಥಿಗಳು ದರ್ಶನ ಪಡೆದಿದ್ದು, ಮುಂದಿನ ದಿನಗಳಲ್ಲಿ ಜನಸಂದಣಿ ಹೆಚ್ಚಾಗುವ ನಿರೀಕ್ಷೆಯಿದೆ. ಹೀಗಾಗಿ ಏಕಾಏಕಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದರಿಂದ ಎರುಮೇಲಿ, ಪತ್ತನಂತಿಟ್ಟ, ಕೊನ್ನಿ ಮತ್ತು ಪೊಂಕುನ್ನಂನಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ. ಹೀಗಾಗಿ ಎರುಮೇಲಿಯಲ್ಲಿ ಶಾಲಾ ವಾಹನಗಳು, ಕೆಎಸ್‌ಆರ್‌ಟಿಸಿ ಬಸ್‌ಗಳು ಸೇರಿದಂತೆ ಹಲವು ವಾಹನಗಳು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಆ ಪ್ರದೇಶದ ವ್ಯಾಪಾರಿಗಳಿಗೆ ಹಣವನ್ನು ನೀಡುವ ಮೂಲಕ ಆದ್ಯತೆಯ ಸ್ಥಳಗಳಿಗೆ ಯಾತ್ರಾರ್ಥಿಗಳು ತೆರಳುತ್ತಿದ್ದಾರೆ. ಹೀಗಾಗಿ ಶಬರಿಮಲೆಯಲದಲ್ಲಿ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ನಿರ್ಬಂಧ ಹೇರುವುದು ಅನಿವಾರ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಪೆರುನಾಡು ಪೊಲೀಸ್ ಠಾಣಾ ವ್ಯಾಪ್ತಿಯ ಕೂನಂಕಾರದಲ್ಲಿ ಸಂಚಾರ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಸದಸ್ಯ ಎ ಅಜಿಕುಮಾರ್ ವಾಗ್ವಾದ ನಡೆಸಿದ್ದು ತಿಳಿದು ಬಂದಿದೆ.
ಸನ್ನಿಧಾನಂ ಮತ್ತು ಪಂಬಾದಲ್ಲಿ ದಟ್ಟಣೆಯನ್ನು ನಿಯಂತ್ರಿಸಲು ಸಂಚಾರ ನಿರ್ಬಂಧವನ್ನು ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ತನಂತಿಟ್ಟ ಎಸ್ಪಿ ಅಜಿಕುಮಾರ್ ಅವರ ಆರೋಪವನ್ನು ನಿರಾಧಾರ ಎಂದು ಪೊಲೀಸರು ತಳ್ಳಿಹಾಕಿದರು. ಜೊತೆಗೆ ಜನಸಂದಣಿಯನ್ನು ನಿಯಂತ್ರಿಸಲು ಶಬರಿಮಲೆಯಲ್ಲಿ ಮುಂದಿನ ದಿನಗಳಲ್ಲಿ 500ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ. ಇದು ಪೊಲೀಸ್, ಆರ್‌ಆರ್‌ಎಫ್, ಬಾಂಬ್ ಸ್ಕ್ವಾಡ್, ಸಿಆರ್‌ಪಿಎಫ್ ಮತ್ತು ಎನ್‌ಡಿಆರ್‌ಎಫ್ ಸಿಬ್ಬಂದಿ ಸೇರಿದಂತೆ 2,700 ಕ್ಕೆ ತಲುಪುತ್ತದೆ.
ಡಿಐಜಿ ರಾಹುಲ್ ಆರ್ ನಾಯರ್ ಅವರು ಸನ್ನಿಧಾನಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ 750 ಸಿಬ್ಬಂದಿಗಳ ಹೊಸ ಬ್ಯಾಚ್ ಅನ್ನು ಉದ್ದೇಶಿಸಿ ಮಾತನಾಡಿದರು. ತಲಾ ಒಬ್ಬ ಡಿಎಸ್‌ಪಿ ಅಡಿಯಲ್ಲಿ ಹತ್ತು ವಿಭಾಗಗಳು ಶಬರಿಮಲೆಯಲ್ಲಿ ಭದ್ರತೆಯನ್ನು ನಿರ್ವಹಿಸುತ್ತಿವೆ. ಹತ್ತು ಡಿಎಸ್ಪಿಗಳು, 35 ಇನ್ಸ್ ಪೆಕ್ಟರ್ ಗಳು, 105 ಸಬ್ ಇನ್ಸ್ ಪೆಕ್ಟರ್ ಹಾಗೂ ಎಎಸ್ ಐಗಳು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ದಟ್ಟಣೆಯನ್ನು ನಿರೀಕ್ಷಿಸಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗುವುದು ಎಂದರು.
ಕೇರಳದಲ್ಲಿ ಕೊರೊನಾ:-
ಕೇರಳದಲ್ಲಿ ಕೊರೊನಾ ಮಹಾಮಾರಿ ಮತ್ತೆ ಚಿಗುರೊಡೆದಿದೆ. ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಶಬರಿಮಲೆಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದು ಕೊರೊನಾ ಹರಡುವ ಭೀತಿ ಹೆಚ್ಚಾಗಿದೆ. ದೂರದೂರುಗಳಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಅಯ್ಯಪ್ಪನ ದರ್ಶನಕ್ಕಾಗಿ ಭಕ್ತರು ಶಬರಿಮಲೆಯಕ್ಕೆ ಭೇಟಿ ನೀಡುತ್ತಿದ್ದಾರೆ. ಅಯ್ಯಪ್ಪನ ದರ್ಶನ ಪಡೆದು ತಮ್ಮ ಊರುಗಳಿಗೆ ಭಕ್ತರು ಪ್ರಯಾಣಿಸುವುದರಿಂದ ಕೊರೊನಾ ಎಲ್ಲೆಡೆ ಹರಡುವ ಆತಂಕ ಎದುರಾಗಿದೆ. ಹೀಗಾಗಿ ಕೊರೊನಾ ಲಕ್ಷಣ ಇರುವ ಪ್ರತಿಯೊಬ್ಬರಿಗೂ ಪರೀಕ್ಷೆ ಮಾಡಿಸಿಕೊಳ್ಳಲು ಅಗತ್ಯವಿದ್ದರೆ ಮಾಸ್ಕ ಧರಿಸಲು ಮನವಿ ಮಾಡಲಾಗಿದೆ.












Click it and Unblock the Notifications