ಆಕಾಶದಲ್ಲೂ ಅಕ್ಕಿ ಬೆಳೆಯಬಹುದಾ? ಹಾಗಾದ್ರೆ ಇಲ್ಲಿ ಸಿಕ್ಕಿದೆ ನೋಡಿ ಸಾಕ್ಷಿ! ISRO Mission
ಇಸ್ರೋ ಭಾರತೀಯರ ಹೆಮ್ಮೆ ಮಾತ್ರವಲ್ಲ, ಇಡೀ ಮನುಷ್ಯರ ಕುಲದ ಹೆಮ್ಮೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಅದು ಹೇಗೆ ಅಂದ್ರೆ, ಭಾರತೀಯರ ಹೆಮ್ಮೆ 'ಇಸ್ರೋ' ಸಂಸ್ಥೆ ಮಾಡುತ್ತಿರುವ ಸಂಶೋಧನೆ & ಕೈಗೊಂಡಿರುವ ಯೋಜನೆಗಳು ಭವಿಷ್ಯದಲ್ಲಿ ಮನುಷ್ಯರಿಗೆಲ್ಲಾ ಇನ್ನಷ್ಟು ಭದ್ರವಾಗಿ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡುತ್ತದೆ. ಅದರಲ್ಲೂ ಬಾಹ್ಯಾಕಾಶ ಎಂಬ ಅಂತ್ಯವೇ ಇಲ್ಲದ ಜಾಗದಲ್ಲಿ ಮೊದಲ ಬಾರಿಗೆ ಕೃಷಿ ಕೆಲಸದಲ್ಲೂ ಸಕ್ಸಸ್ ಆಗಿದೆ ನಮ್ಮ ಇಸ್ರೋ!
ಹೌದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅರ್ಥಾತ್ ನಮ್ಮ ಭಾರತದ ಇಸ್ರೋ ಇದೀಗ ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ಈ ಮೂಲಕ ಇಡೀ ಜಾಗತಿಕ ವೈಜ್ಞಾನಿಕ ಲೋಕ ಭಾರತದ ಕಡೆಗೆ ತಿರುಗಿ ನೋಡಿದೆ. ಅದು ಹೇಗೆ ಅಂದ್ರೆ ಅಂತರಿಕ್ಷದಲ್ಲೂ ಅಂದರೆ, ಬಾಹ್ಯಾಕಾಶದಲ್ಲೂ ಕೃಷಿ ಮಾಡುವ ಕನಸಿಗೆ ಇದೀಗ ಮೊದಲ ಯಶಸ್ಸು ಸಿಕ್ಕಿದೆ. 'ಇಸ್ರೋ' ವಿಜ್ಞಾನಿಗಳ ತಂಡ ಬಾಹ್ಯಾಕಾಶ ವಲಯದಲ್ಲಿ ಕೂಡ 'ಹಸಿರು ಕ್ರಾಂತಿ' ಮಾಡಿದೆ!

ಇಸ್ರೋ ವಿಜ್ಞಾನಿಗಳಿಗೆ ಭರ್ಜರಿ ಬಂಪರ್!
ಅಷ್ಟಕ್ಕೂ ಮೈಕ್ರೋಗ್ರಾವಿಟಿ ಅಂದ್ರೆ ಅತೀ ಕಡಿಮೆ ಗುರುತ್ವಾಕರ್ಷಣೆ ಶಕ್ತಿ ಇರುವ ಪ್ರದೇಶದಲ್ಲಿ ಕೂಡ, ಮೆಕ್ಕೇಜೋಳ ಚಿಗುರು ಬಂದಿದೆ. ಮೆಕ್ಕೇಜೋಳದ ಬೀಜಗಳು ಬಾಹ್ಯಾಕಾಶ ವಲಯಕ್ಕೆ ಕೂಡ ಎಂಟ್ರಿ ಕೊಟ್ಟು ಹಸಿರು ಚೆಲ್ಲಿವೆ. ಬಾಹ್ಯಾಕಾಶದಲ್ಲಿ ಗಿಡಗಳು ಹೇಗೆ ಬೆಳೆಯಬಹುದು? ಅನ್ನೋ ಕುತೂಹಲದ ಪ್ರಶ್ನೆಗೆ ಇಸ್ರೋ ಖುದ್ದಾಗಿ ಉತ್ತರ ಕಂಡುಕೊಂಡಿದೆ. 2024 ರಲ್ಲಿ ಇಸ್ರೋ ಉಡಾವಣೆ ಮಾಡಿದ್ದ 'ಪಿಎಸ್‌ಎಲ್‌ವಿ-ಸಿ60' ರಾಕೆಟ್ ಮೂಲಕ ಮೆಕ್ಕೇಜೋಳದ ಬೀಜಗಳನ್ನು ಇಸ್ರೋ ಅಂತರಿಕ್ಷಕ್ಕೆ ಕಳುಹಿಸಿತ್ತು.
Leaves have emerged! 🌱 VSSC's CROPS (Compact Research Module for Orbital Plant Studies) aboard PSLV-C60 POEM-4 achieves a milestone as cowpea sprouts unveil their first leaves in space. 🚀 #ISRO #BiologyInSpace #POEM4 pic.twitter.com/xKWmGHoPfl
— ISRO (@isro) January 6, 2025
ಹೀಗೆ 8 ಮೆಕ್ಕೇಜೋಳದ ಬೀಜಗಳು ಈಗ ಬಾಹ್ಯಾಕಾಶದಲ್ಲಿ ಚಿಗುರು ಹೊಡೆದಿವೆ. ಈ ಮೂಲಕ ಇಸ್ರೋ ವಿಜ್ಞಾನಿಗಳಿಗೆ ಬಾಹ್ಯಾಕಾಶ ಕೃಷಿ ಬಗ್ಗೆ ಒಂದು ಮಹತ್ವದ ಮಾಹಿತಿ ಸಿಕ್ಕಂತಾಗಿದೆ. ಆ ಫೋಟೋಗಳನ್ನು ಇದೀಗ ಇಸ್ರೋ ಹಂಚಿಕೊಂಡಿದೆ. ಆಕ್ಸಿಜನ್, ಕಾರ್ಬನ್ ಡೈಯಾಕ್ಸೈಡ್ ಸೇರಿದಂತೆ ಬಾಕ್ಸ್‌ನಲ್ಲಿ ನೀರಿನ ಅಂಶ ಅಂದ್ರೆ ತೇವಾಂಶಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗಿತ್ತು. ಇದರ ಜೊತೆಗೆ ಮಣ್ಣಿನ ಬಗ್ಗೆ ಕೂಡ ಹೆಚ್ಚಿನ ಗಮನ ವಹಿಸಿದ್ದರು ಇಸ್ರೋ ವಿಜ್ಞಾನಿಗಳು.
ಇಸ್ರೋ ಸಾಧನೆಯಿಂದ ಏನು ಲಾಭ?
ಭೂಮಿ ಮೇಲೆ ನಾವು ಸುಲಭವಾಗಿ ಕೃಷಿ ಮಾಡಬಹುದು, ಆದರೆ ಬಾಹ್ಯಾಶದಲ್ಲಿ ಕೂಡ ಇದೇ ರೀತಿ ಕೃಷಿ ಮಾಡಲು ಸಾಧ್ಯ ಇದೆಯಾ? ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಯಾಕಂದ್ರೆ ಭವಿಷ್ಯದಲ್ಲಿ ಭಾರತ ಮಾನವರ ಸಹಿತ ಬಾಹ್ಯಾಕಾಶ ಯೋಜನೆಗಳ ಕೈಗೊಂಡ ಸಮಯದಲ್ಲಿ ಈ ಪ್ರಯೋಗ ಸಾಕಷ್ಟು ಸಹಾಯಕ್ಕೆ ಬರಲಿದೆ. ಹಾಗೇ ಮತ್ತೊಂದು ಕಡೆ ಮಂಗಳ ಗ್ರಹ ಸೇರಿ, ಚಂದ್ರನ ಅಂಗಳಕ್ಕೆ ಹೋಗಲು ಭಾರತೀಯರಿಗೆ ಇದರಿಂದ ದೊಡ್ಡ ಸಹಾಯ ಆಗುವ ನಿರೀಕ್ಷೆ ಇದೆ.












Click it and Unblock the Notifications