• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡೆಲ್ಟಾ AY 4.2 ರೂಪಾಂತರಿಯಿಂದ ಭಾರತಕ್ಕೆ ಆತಂಕವಿಲ್ಲ

|
Google Oneindia Kannada News

ನವದೆಹಲಿ, ಅಕ್ಟೋಬರ್ 29: ಡೆಲ್ಟಾ AY 4.2 ರೂಪಾಂತರಿಯಿಂದ ಭಾರತಕ್ಕೆ ಆತಂಕವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆಂಧ್ರಪ್ರದೇಶದಲ್ಲಿ 7, ಕೇರಳದಲ್ಲಿ 4, ಕರ್ನಾಟಕದಲ್ಲಿ 2, ತೆಲಂಗಾಣದಲ್ಲಿ 2, ಜಮ್ಮು- ಕಾಶ್ಮೀರ ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಂದು ಡೆಲ್ಟಾ ರೂಪಾಂತರಿಯ ಉಪ ರೂಪಾಂತರಿ ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಈ ವೈರಸ್ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ.

ಬ್ರಿಟನ್‌ನಲ್ಲಿ ಕಾಣಿಸಿಕೊಂಡಿದ್ದ AY 4.2 ವೈರಸ್ ತಳಿ ಕರ್ನಾಟಕದಲ್ಲೂ ಪತ್ತೆಬ್ರಿಟನ್‌ನಲ್ಲಿ ಕಾಣಿಸಿಕೊಂಡಿದ್ದ AY 4.2 ವೈರಸ್ ತಳಿ ಕರ್ನಾಟಕದಲ್ಲೂ ಪತ್ತೆ

ಈ ವೈರಸ್ ಅತ್ಯಂತ ವೇಗವಾಗಿ ಹರಡುವ ಕ್ಷಮತೆ ಇದ್ದರೂ, ಹೆಚ್ಚು ಮಾರಣಾಂತಿಕವಾದಂತೆ ಕಾಣುತ್ತಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್​) ವಿಜ್ಞಾನಿ ಡಾ.ಲೋಕೇಶ್ ಮಾಹಿತಿ ನೀಡಿದ್ದಾರೆ. ಐಸಿಎಂಆರ್ ಮತ್ತು ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಎನ್‌ಸಿಡಿಸಿ) ಸದಸ್ಯರನ್ನು ಒಳಗೊಂಡ ತಂಡವು ಎವೈ.4.2 ವೈರಸ್​ ಬಗ್ಗೆ ಸಂಶೋಧನೆಯನ್ನು ನಡೆಸುತ್ತಿದೆ.

ಇನ್‌ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಆ್ಯಂಡ್ ಇಂಟಿಗ್ರೇಟಿವ್ ಬಯಾಲಜಿ (ಐಜಿಐಬಿ) ನಿರ್ದೇಶಕ ಡಾ.ಅನುರಾಗ್ ಅಗರವಾಲ್, ಈಗಿನ ವರದಿಗಳನ್ನು ಪರಿಶೀಲಿಸಿದರೆ ಎವೈ.4.2 ರೂಪಾಂತರ ವೈರಸ್ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಕೊರೊನಾ ಮೂರನೇ ಅಲೆಯ ಭೀತಿ ಜನತೆಯನ್ನು ಕಾಡುತ್ತಿದೆ. ಕೊರೊನಾ ವೈರಸ್ ರೂಪಾಂತರವಾದ ಡೆಲ್ಟಾ ವೇರಿಯಂಟ್​ನಲ್ಲೇ ಕಾಣಿಸಿಕೊಂಡಿರುವ ಮತ್ತೊಂದು 'ಉಪ ರೂಪಾಂತರ' ಆತಂಕ ಹೆಚ್ಚಿಸುತ್ತಿದ್ದು, ವಿಜ್ಞಾನಿಗಳು ಮತ್ತು ತಜ್ಞರಿಗೆ ಮತ್ತೊಂದು ಸವಾಲಾಗಿದೆ.

ಭಾರತದ SARS-CoV2-Genomic Consortia (INSACOG) ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಷ್ಟೇನೂ ಭಯಪಡುವ ಅಗತ್ಯವಿಲ್ಲ. ದೇಶದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಈ ಕೋವಿಡ್ ವೇರಿಯಂಟ್ ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದೆ.
ಡೆಲ್ಟಾ ವೈರಸ್​ನ ಮರು ರೂಪಾಂತರವಾದ ವೈರಸ್​ ಅನ್ನು ಎವೈ.4.2(AY.4.2) ಎಂದು ಹೆಸರಿಸಲಾಗಿದೆ. ಈಗಾಗಲೇ ಯುನೈಟೆಡ್ ಕಿಂಗ್‌ಡಮ್, ಚೀನಾ ಮತ್ತು ರಷ್ಯಾದಲ್ಲಿ ಈ ರೂಪಾಂತರಿಗಳು ಪತ್ತೆಯಾಗಿವೆ. ಭಾರತದಲ್ಲೂ ಕೂಡಾ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತೆಲಂಗಾಣ, ಜಮ್ಮು ಮತ್ತು ಕಾಶ್ಮೀರ ಮತ್ತು ಮಹಾರಾಷ್ಟ್ರ ಇತರ ರಾಜ್ಯಗಳಲ್ಲಿ ಕಾಣಿಸಿಕೊಂಡಿದೆ.

ಹೊಸ ರೂಪಾಂತರಿ ವೈರಸ್ ಪತ್ತೆಯಾದ ಬೆನ್ನಲ್ಲೇ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಆರೋಗ್ಯ ಸಚಿವಾಲಯವು, ಈ ವೈರಸ್ ಬಗ್ಗೆ ಜಾಗರೂಕತೆಯಿಂದಿರಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

ಆಂಧ್ರಪ್ರದೇಶದಲ್ಲಿ 7 ಮಂದಿ ಎವೈ.4.2 ಕೋವಿಡ್ ವೈರಸ್​ನಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಗಳಿವೆ. ದೇಶದ ಇತರೆಡೆಯಲ್ಲೂ ಕಾಣಿಸಿಕೊಂಡಿದ್ದು, ಅಷ್ಟೇನೂ ಮಾರಣಾಂತಿಕವಾಗಿಲ್ಲ. ಆದರೆ ಇದೇ ವೈರಸ್ ಇಂಗ್ಲೆಂಡ್, ರಷ್ಯಾ ಮತ್ತು ಚೀನಾದಲ್ಲಿ ಸಾಕಷ್ಟು ಸಾವುನೋವುಗಳಿಗೆ ಕಾರಣವಾಗಿದೆ ಎಂದು ಏಷ್ಯನ್ ಸೊಸೈಟಿ ಆಫ್ ಎಮರ್ಜೆನ್ಸಿ ಮೆಡಿಸಿನ್ ಅಧ್ಯಕ್ಷ ಡಾ.ಟಾಮೋರಿಶ್ ಕೋಲೆ ಹೇಳಿದ್ದಾರೆ.

ಈ ಬಗ್ಗೆ ಸೂಕ್ತ ಸಂಶೋಧನೆ ನಡೆಯುವವರೆಗೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವುದು ಅತ್ಯಂತ ಅನಿವಾರ್ಯ ಎಂದು ಟಾಮೋರಿಶ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಪ್ರಸ್ತುತ ಪತ್ತೆಯಾಗಿರುವ ನೂತನ ಕೋವಿಡ್ ವೈರಸ್ ರೂಪಾಂತರಿ ಎವೈ4.2 ಇದು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚಿನ ವೇಗದಲ್ಲಿ ಪ್ರಸರಣವಾಗುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ.

ಇದು ಸಂಭಾವ್ಯವಾಗಿ ಸ್ವಲ್ಪ ಹೆಚ್ಚು ಸಾಂಕ್ರಾಮಿಕವಾಗಿರುವ ತಳಿಯಾಗಿದ್ದು, ಇದು ಡೆಲ್ಟಾ ರೂಪಾಂತರಕ್ಕಿಂತ ಗಣನೀಯವಾಗಿ ಹೆಚ್ಚು ವೇಗವಾಗಿ ಹರಡುತ್ತದೆ ಎಂಬುದಕ್ಕೆ ಸ್ಪಷ್ಟ ಸೂಚನೆ ಇಲ್ಲ. ಈ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ ಎನ್ನಲಾಗಿದೆ.

ಈ ಹಿಂದೆ ಪತ್ತೆಯಾಗಿದ್ದ ಆಲ್ಫಾ ಮತ್ತು ಡೆಲ್ಟಾ ರೂಪಾಂತರಗಳು ಭಾರತವೂ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ತಮ್ಮ ಆರ್ಭಟ ತೋರಿದ್ದವು. ಡೆಲ್ಟಾ ರೂಪಾಂತರ ಭಾರತದಲ್ಲಿ 2ನೇ ಅಲೆಗೆ ಕಾರಣವಾಗಿತ್ತು.

ಇದೇ ಭೀತಿ ಇದೀಗ ಭಾರತಕ್ಕೆ ಎದುರಾಗಿದ್ದು, ಹೊಸ ರೂಪಾಂತರಿ ಮೂರನೇ ಅಲೆಗೆ ಕಾರಣವಾಗುತ್ತದೆಯೇ ಎಂದು ಹೇಳಲಾಗಿದೆ. ಇದಕ್ಕೆ ಉತ್ತರಿಸಿರುವ ತಜ್ಞರು ಈ ಹಿಂದೆ ಪತ್ತೆಯಾಗಿದ್ದ ಆಲ್ಫಾ ಮತ್ತು ಡೆಲ್ಟಾ ರೂಪಾಂತರಗಳಷ್ಟು ಈ ಎವೈ 4.2 ಅಪಾಯಕಾರಿಯಲ್ಲ ಎಂದು ಹೇಳಿದ್ದಾರೆ.

AY.4.2 ಡೆಲ್ಟಾ ಉಪ ಪರಂಪರೆಯು ಹೆಚ್ಚುತ್ತಿರುವ ಪಥದಲ್ಲಿ ಉತ್ಪತ್ತಿಯಾಗುವ ಎಲ್ಲಾ ಅನುಕ್ರಮಗಳಲ್ಲಿ ಸರಿಸುಮಾರು ಶೇ 6 ರಷ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.

   ಕನ್ನಡಿಗ KL ರಾಹುಲ್ ಗೆ ಬಿಗ್ ಶಾಕ್ ಕೊಟ್ಟ ಪಂಜಾಬ್ ಟೀಂನ ಮಾಲೀಕ | Oneindia Kannada
   English summary
   A mutation AY 4.2 belonging to the Delta Plus lineage has been found in India and is under investigation. Six states including Maharashtra, Karnataka Andhra Pradesh, Kerala Telangana, Jammu and Kashmir have reported cases of the new variant mutant, which is deemed to be more contagious than the Delta variant.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X