ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂದು 'ಬಿಜೆಪಿ ಲಸಿಕೆ' ಎಂದು ಅಣಕವಾಡಿದ್ದ ಕಾಂಗ್ರೆಸ್ಸಿನಿಂದ ಈಗ ಲಸಿಕೆಗಾಗಿ ಹಾಹಾಕಾರ

|
Google Oneindia Kannada News

ಮಹಾಮಾರಿ ಕೊರೊನಾ ಪ್ರಭಾವ ತಗ್ಗಿಸುವ ಲಸಿಕೆ ಅಂತೂ ಇಂತೂ, ಕ್ಲಿನಿಕಲ್ ಟ್ರಯಲ್ ಮುಗಿಸಿ, ಸಾರ್ವಜನಿಕರಿಗೆ ಲಭ್ಯವಾದಾಗ ಈ ವಿಚಾರದಲ್ಲಿ ಬಿಜೆಪಿ ವಿರುದ್ದ ವಿರೋಧ ಪಕ್ಷಗಳು ಮಾಡಿದ ಟೀಕೆ ಒಂದಾ ಎರಡಾ..

ಈಗ ಕೊರೊನಾ ಪಾಸಿಟೀವ್ ಗೆ ಒಳಗಾಗಿರುವ ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಖ್ ಯಾದವ್ ಮತ್ತು ಕೆಲವು ಕಾಂಗ್ರೆಸ್ ಮುಖಂಡರು ಈ ಹಿಂದೆ ಲಸಿಕೆಯನ್ನು ಬಿಜೆಪಿ ಲಸಿಕೆ ಎಂದು ಹೇಳಿ ವಿಜ್ಞಾನಿಗಳ ಪರಿಶ್ರಮವನ್ನೇ ಅಣಕವಾಡಿದ್ದರು.

ಕೊರೊನಾ ಭೀತಿ, ಮನೋವಿಜ್ಞಾನಿಯೊಬ್ಬರ ಹತ್ತು ಉಪಯುಕ್ತ ಟಿಪ್ಸ್ಕೊರೊನಾ ಭೀತಿ, ಮನೋವಿಜ್ಞಾನಿಯೊಬ್ಬರ ಹತ್ತು ಉಪಯುಕ್ತ ಟಿಪ್ಸ್

ಇದಾದ ನಂತರ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ಬಳಕೆಗೆ ಡ್ರಗ್ಸ್ ಕಂಟ್ರೋಲ್ ಅನುಮತಿ ನೀಡಿದಾಗಲಂತೂ ವಿರೋಧ ಪಕ್ಷಗಳ ಟೀಕೆ ತಾರಕಕ್ಕೇರಿತ್ತು. ಮೊದಲು, ಪ್ರಧಾನಮಂತ್ರಿ ಮೋದಿಯವರು ಲಸಿಕೆ ಹಾಕಿಸಿಕೊಳ್ಲಲಿ, ನಮಗೆ ಲಸಿಕೆ ಮೇಲೆ ನಂಬಿಕೆಯಿಲ್ಲ ಎಂದು ಜರಿದಿದ್ದರು.

ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುವ ಕೋವ್ಯಾಕ್ಸಿನ್ ಲಸಿಕೆಯ ಬಗ್ಗೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದ ಕಾಂಗ್ರೆಸ್, ಈ ಲಸಿಕೆಯ ಕಾರ್ಯಕ್ಷಮತೆಯ ಬಗ್ಗೆ ಅನುಮಾನ ವ್ಯಕ್ತ ಪಡಿಸಿತ್ತು. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಸಮಾಜವಾದಿ ಪಕ್ಷದ ನಾಯಕರೊಬ್ಬರು ಈ ಲಸಿಕೆ ಪುರುಷತ್ವಕ್ಕೆ ಧಕ್ಕೆ ತರುತ್ತೆ ಎನ್ನುವ ಹೇಳಿಕೆಯನ್ನು ನೀಡಿದ್ದರು.

 ಇದೆಲ್ಲದರ ನಡುವೆ ನಮ್ಮನ್ನು ಕಾಡುವ ಪ್ರಶ್ನೆ ಪ್ರಧಾನಿ ಮೋದಿ ಎಲ್ಲಿ? ಇದೆಲ್ಲದರ ನಡುವೆ ನಮ್ಮನ್ನು ಕಾಡುವ ಪ್ರಶ್ನೆ ಪ್ರಧಾನಿ ಮೋದಿ ಎಲ್ಲಿ?

 ಭಾರತ ಇಡೀ ವಿಶ್ವಕ್ಕೆ ಮಾದರಿ ಎಂದು ಬೆನ್ನುತಟ್ಟಿದ WHO

ಭಾರತ ಇಡೀ ವಿಶ್ವಕ್ಕೆ ಮಾದರಿ ಎಂದು ಬೆನ್ನುತಟ್ಟಿದ WHO

ಆದರೆ ವಿರೋಧ ಪಕ್ಷಗಳ ಆರೋಪ ಸತ್ಯಕ್ಕೆ ದೂರವಾದದ್ದು ಎನ್ನುವಂತೆ ಈ ಎರಡೂ ಲಸಿಕೆಯ ಕಾರ್ಯಕ್ಷಮತೆ ಶೇ. 84ರಷ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಧೃಡೀಕರಿಸಿತು. ಇದರ ಜೊತಗೆ, ಲಸಿಕೆ ವಿತರಣೆ ಮತ್ತು ಉತ್ಪಾದನೆಯ ವಿಚಾರದಲ್ಲಿ ಭಾರತ ಇಡೀ ವಿಶ್ವಕ್ಕೆ ಮಾದರಿ ಎಂದು WHO ಬೆನ್ನು ತಟ್ಟಿತು.

 6 ಕೋಟಿ 55 ಲಕ್ಷ ಲಸಿಕೆ ರಫ್ತು

6 ಕೋಟಿ 55 ಲಕ್ಷ ಲಸಿಕೆ ರಫ್ತು

ಇಷ್ಟೇ ಅಲ್ಲದೇ, ಏಪ್ರಿಲ್ ಹದಿನೇಳರ ವರೆಗೆ ಭಾರತ 6 ಕೋಟಿ 55 ಲಕ್ಷ ಲಸಿಕೆಗಳನ್ನು ವಿದೇಶಗಳಿಗೆ ರಫ್ತು ಮಾಡಿದೆ. ವಿಶ್ವದ 92 ವಿವಿಧ ದೇಶಗಳಿಗೆ ಲಸಿಕೆ ರಫ್ತು ಮಾಡಿದೆ. ಕಾಂಗ್ರೆಸ್ ಪಕ್ಷ ಈಗ ಲಸಿಕೆ ರಫ್ತನ್ನು ಪ್ರಶ್ನಿಸಿ, ಮೊದಲು ಭಾರತೀಯರಿಗೆ ಲಸಿಕೆ ಸಿಗುವಂತೆ ನೋಡಿಕೊಳ್ಳಿ ಎಂದು ಟೀಕಿಸಲು ಆರಂಭಿಸಿದೆ.

 ಮೋದಿಯ ಪ್ರಚಾರದ ತೆವಲಿಗೆ ಭಾರತೀಯರ ಹಿತ ಬಲಿಯಾಗುದೆ

ಮೋದಿಯ ಪ್ರಚಾರದ ತೆವಲಿಗೆ ಭಾರತೀಯರ ಹಿತ ಬಲಿಯಾಗುದೆ

ಕೊರೊನಾ ಎರಡನೇ ಅಲೆಯ ಪ್ರಭಾವ ಹೆಚ್ಚಾಗುತ್ತಿದ್ದಂತೆಯೇ ಲಸಿಕೆಯ ಡಿಮಾಂಡ್ ಹೆಚ್ಚಿದೆ. ಸ್ವಾಭಾವಿಕವಾಗಿ ಕೆಲವು ರಾಜ್ಯಗಳಲ್ಲಿ ಲಸಿಕೆಯ ಅಭಾವ ಎದುರಾಗಿದೆ. ಈಗ, ಈ ವಿಚಾರವನ್ನು ಇಟ್ಟುಕೊಂಡು ಟೀಕೆ ಮಾಡುತ್ತಿರುವ ಕಾಂಗ್ರೆಸ್, "ಪ್ರಧಾನಿ ಮೋದಿಯ ಪ್ರಚಾರದ ತೆವಲಿಗೆ ಭಾರತೀಯರ ಹಿತ ಬಲಿಯಾಗುತ್ತಿರುವುದು ಇದೇ ಮೊದಲಲ್ಲ. ಉತ್ಪಾದಿಸಿದ ಲಸಿಕೆಗಳನ್ನು ವಿದೇಶಗಳಿಗೆ ಹಂಚಿದ್ದಾರೆ, ಪರಿಣಾಮ ದೇಶಾದ್ಯಂತ ಲಸಿಕೆ ಕೊರತೆ ಎದುರಾಗಿದೆ. ಇಷ್ಟಾದರೂ ರಫ್ತು ನಿಷೇಧ ಹೇರಲಿಲ್ಲ"ಎಂದು ಟೀಕಿಸಿದೆ.

ಬಿಜೆಪಿ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, "ಭಾರತದಲ್ಲಿ ಲಸಿಕೆ ಕಂಡು ಹಿಡಿದಾಗ, ಲಸಿಕಾ ಅಭಿಯಾನ ನಡೆದಾಗ ಕಾಂಗ್ರೆಸ್‌ ಪಕ್ಷದ ಮುಖಂಡರು ಇದು ಬಿಜೆಪಿ ಲಸಿಕೆ ಎಂದು ಟೀಕಿಸಿದರು. ಈಗ ದೇಶದ ಎಲ್ಲಾ ಜನರಿಗೂ ಲಸಿಕೆ ಕೊಡಿ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷದ ನಿಲುವುಗಳಲ್ಲಿ ಏಕೆ ಇಷ್ಟೊಂದು ವ್ಯತ್ಯಾಸ? ದೇಶದ ಪರವಾಗಿ ಕಾಂಗ್ರೆಸ್ ಎಂದು ನಿಲ್ಲುವುದು?"ಎಂದು ಬಿಜೆಪಿ ತಿರುಗೇಟು ನೀಡಿದೆ.

English summary
Covid Vaccine Shortage: Congress Strongly Opposing Modi Government Export Policy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X