ರಾಜ್ಯಗಳಿಗೆ 3 ದಿನದಲ್ಲಿ ಹೆಚ್ಚುವರಿಯಾಗಿ 60 ಲಕ್ಷ ಡೋಸ್ ಲಸಿಕೆ ಪೂರೈಕೆ

ನವದೆಹಲಿ, ಮೇ 03: ಕೇಂದ್ರ ಸರ್ಕಾರವು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಮುಂದಿನ 3 ದಿನಗಳಲ್ಲಿ ಹೆಚ್ಚುವರಿಯಾಗಿ 60 ಲಕ್ಷ ಡೋಸ್ ಲಸಿಕೆಯನ್ನು ಪೂರೈಕೆ ಮಾಡುವುದಾಗಿ ತಿಳಿಸಿದೆ.

ಈ ಪೈಕಿ 15,79,21,537 ಗಳಷ್ಟು ಲಸಿಕೆ ಡೋಸ್ ಗಳನ್ನು ಸೋಮವಾರ ಬೆಳಿಗ್ಗೆ ವರೆಗೂ ಜನರಿಗೆ ನೀಡಲಾಗಿದೆ. ಇನ್ನೂ 75 ಲಕ್ಷಗಳಷ್ಟು ಡೋಸ್ ಗಳು ಬಳಕೆಯಾಗದೇ ಉಳಿದಿದ್ದು, ಇನ್ನಷ್ಟೇ ನೀಡಬೇಕಿದೆ, ಇದರ ಜೊತೆಗೆ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಇನ್ನು ಮೂರು ದಿನಗಳಲ್ಲಿ 59 ಲಕ್ಷ ಡೋಸ್ ಗಳನ್ನು ನೀಡಲಾಗುತ್ತದೆ ಎಂದು ಹೇಳಿದೆ.

ಆರೋಗ್ಯ ಸಚಿವಾಲಯ ಮಾಧ್ಯಮ ಪ್ರಕಟಣೆಯನ್ನು ಪ್ರಕಟಿಸಿದ್ದು, ಈ ವರೆಗೂ ಭಾರತ ಸರ್ಕಾರ 16.54 ಕೋಟಿ ಲಸಿಕೆ ಡೋಸ್ ಗಳನ್ನು ಕೇಂದ್ರಾಡಳಿತ/ ರಾಜ್ಯ ಸರ್ಕಾರಗಳಿಗೆ ಉಚಿತವಾಗಿ ನೀಡಿದೆ.

Covid Vaccine: 60 Lakh Doses, In Addition, To Be Received By States In Next 3 Days

ಭಾನುವಾರ ಭಾರತದಲ್ಲಿ 3,69,957 ಹೊಸ ಕೋವಿಡ್ ಪ್ರಕರಣಗಳು ರಾತ್ರಿ 11.30ರ ತನಕ ದಾಖಲಾಗಿವೆ. ಈ ಅವಧಿಯಲ್ಲಿ ಒಟ್ಟು 3,455 ಜನರು ಮೃತಪಟ್ಟಿದ್ದಾರೆ.

ದೇಶದಲ್ಲಿ ಇದುವರೆಗೂ 1,99,19,900 ಕೋವಿಡ್ ಪ್ರಕರಣಗಳು ದಾಖಲಾಗಿವೆ. 2,18,909 ಜನರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ 56,647 ಹೊಸ ಕೋವಿಡ್ ಪ್ರಕರಣ ದಾಖಲಾಗಿದ್ದು, ಶೇ 16ರಷ್ಟು ಹೊಸ ಪ್ರಕರಣ ರಾಜ್ಯದ್ದಾಗಿದೆ.

ಕೋವಿಡ್ ಲಾಕ್ ಡೌನ್ ಮಾರ್ಗಸೂಚಿಯಲ್ಲಿ ಆಗಲೇ 4ನೇ ಬದಲಾವಣೆ ಕರ್ನಾಟಕದಲ್ಲಿ 37,773. ಕೇರಳದಲ್ಲಿ 31,959 ಹೊಸ ಪ್ರಕರಣಗಳು ದಾಖಲಾಗಿದ್ದವು. ಮೇ 1ರಂದು ಮಹಾರಾಷ್ಟ್ರದಲ್ಲಿ 669, ಉತ್ತರ ಪ್ರದೇಶದಲ್ಲಿ 288 ಮತ್ತು ಕರ್ನಾಟಕದಲ್ಲಿ 217 ಜನರು ಮೃತಪಟ್ಟಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+