ಕೋವಿಡ್ ವಾಯುಗಾಮಿ- ಕೇಂದ್ರದ ಪರಿಷ್ಕೃತ ಮಾರ್ಗಸೂಚಿಯಲ್ಲಿ ಏನಿದೆ?
ನವದೆಹಲಿ, ಮೇ 26: ಕೇಂದ್ರ ಸರ್ಕಾರವು ಕೋವಿಡ್ -19 ನ ಪರಿಷ್ಕೃತ ಮಾರ್ಗಸೂಚಿಯನ್ನು ಬುಧವಾರ ಪ್ರಕಟಿಸಿದೆ. ಈ ಮಾರ್ಗಸೂಚಿಯಲ್ಲಿ ಕೋವಿಡ್ "ಮುಖ್ಯವಾಗಿ ವಾಯುಗಾಮಿ ಮಾರ್ಗ ಮತ್ತು ಸೋಂಕಿತ ವ್ಯಕ್ತಿಯು ಕೆಮ್ಮಿದಾಗ, ಸೀನುವಾಗ ಅಥವಾ ಮಾತನಾಡುವಾಗ ಬಾಯಿಯಿಂದ ಹೊರಬರುವ ಉಗುಳಿನ ಹನಿಯ ಮೂಲಕವೂ ಹರಡುತ್ತದೆ" ಎಂದು ಹೇಳಿದೆ.
ಕಳೆದ ವರ್ಷ ದೇಶದಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ಸೋಂಕಿನ ಎರಡನೇ ಅಲೆಯು ಈಗ ಹಲವು ರಾಜ್ಯಗಳಲ್ಲಿ ಮತ್ತೆ ಲಾಕ್‌ಡೌನ್ ಮಾಡಬೇಕಾದ ಸ್ಥಿತಿಯನ್ನು ತಂದೊಡ್ಡಿದೆ. ಈ ನಡುವೆ ಸರ್ಕಾರ ಕೊರೊನಾ ಮಾರ್ಗಸೂಚಿಯನ್ನು ಪರಿಷ್ಕರಿಸಿದೆ.
ಕೊರೊನಾ ಸೋಂಕು ದೇಶದಾದ್ಯಂತ ಕಳೆದ ವರ್ಷದ ಮಾರ್ಗಸೂಚಿಗಿಂತ ಬದಲಾವಣೆ ಹೊಂದಿರುವ ಈ ಹೊಸ ಮಾರ್ಗಸೂಚಿಯಲ್ಲಿ ಸೋಂಕು ನಿಕಟ ಸಂಪರ್ಕದ ಮೂಲಕ ಹರಡುತ್ತದೆ ಎಂದು ಉಲ್ಲೇಖಿಸಲಾಗಿದೆ. ಹಾಗೆಯೇ ಕೋವಿಡ್ ಸೋಂಕು ವಾಯುಗಾಮಿ ಎಂದು ಕೂಡಾ ಈ ಪರಿಷ್ಕೃತ ಮಾರ್ಗಸೂಚಿ ಹೇಳಿದೆ.

ಕೋವಿಡ್ ವಾಯುಗಾಮಿ
ತನ್ನ ಪರಿಷ್ಕೃತ ಮಾರ್ಗಸೂಚಿ ಮೂಲಕ ಕೋವಿಡ್ ವಾಯುಗಾಮಿ ಎಂದು ಹೇಳಿರುವ ಕೇಂದ್ರ ಸರ್ಕಾರ, ಕೋವಿಡ್ ಸೋಂಕಿತರ ಬಾಯಿಯಿಂದ ಹೊರಬರುವ ಹನಿಯು ಮೇಲ್ಮೈಗಳಲ್ಲಿಯೂ ಇರಬಹುದು, ಅಸ್ಥಿರ ಅವಧಿಯವರೆಗೆ ಈ ಹನಿ ಮೇಲ್ಮೈಯಲ್ಲಿ ಇರುವ ಸಾಧ್ಯತೆ ಇದೆ. ಒಬ್ಬ ವ್ಯಕ್ತಿಯು ಸೋಂಕಿತ ವ್ಯಕ್ತಿಯ ಮೇಲ್ಮೈ ಸ್ಪರ್ಶಿಸಿ ನಂತರ ತನ್ನ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟಿದರೆ ಸೋಂಕು ಹರಡುತ್ತದೆ ಎಂದು ಆರೋಗ್ಯ ಸಚಿವಾಲಯದ ಮಾರ್ಗಸೂಚಿ ಹೇಳಿದೆ. ಕೋವಿಡ್ ಸೋಂಕಿತರ ಬಾಯಿಯ ಲಾಲಾರಸವು ಕೆಮ್ಮಿದಾಗ, ಸೀನಿದಾಗ ಹನಿ ಅಥವಾ ಏರೋಸೆಲ್ ರೂಪದಲ್ಲಿ ಹರುತ್ತದೆ.

ಕೋವಿಡ್ ಹನಿಗಳ ಮೂಲಕ ಹರಡುವುದು ಹೇಗೆ?
ಕೆಮ್ಮಿದಾಗ ಅಥವಾ ಸೀನಿದಾಗ ಬಾಯಿಯಿಂದ ಅಥವಾ ಮೂಗಿನಿಂದ ಹೊರಬರುವ ಲಾಲಾರಸವು ಹನಿಯಾಗಿ ಅಥವಾ ಏರೋಸೆಲ್ ರೂಪದಲ್ಲಿ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುತ್ತದೆ. ಈ ಲಾಲಾರಸದ ಹನಿಯ ಪ್ರಮಾಣ ಹೆಚ್ಚಾಗಿದ್ದರೆ, ನೆಲಕ್ಕೆ ಮತ್ತು ಮೇಲ್ಮೈಗಳಲ್ಲಿ ಬೀಳುತ್ತವೆ, ಸಣ್ಣದಾದರೆ ಏರೋಸೆಲ್ ಕಣಗಳು ಗಾಳಿಯಲ್ಲಿ ಹೆಚ್ಚಿನ ದೂರಕ್ಕೆ ಹೋಗುತ್ತದೆ. ಒಳಾಂಗಣ ಪ್ರದೇಶಗಳಲ್ಲಿ ಹನಿಗಳು ಅಥವಾ ಏರೋಸೆಲ್‌ಗಳು ಶೀಘ್ರವಾಗಿ ಹರಡುತ್ತದೆ ಎಂದು ಹೇಳಲಾಗಿದೆ.

ವೈರಸ್ ವಿಕಾಸಗೊಳ್ಳುತ್ತಿದೆ ಮತ್ತು ನಾವೂ ಹಾಗೆಯೇ
ವೈರಸ್ ಹರಡುವ ಹಿನ್ನೆಲೆ ರಾಜ್ಯ, ನಗರಗಳಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್ ಮತ್ತು ಕರ್ಫ್ಯೂಗಳನ್ನು ಹೇರಿರುವಾಗ ಸರ್ಕಾರ ಮತ್ತು ಆರೋಗ್ಯ ಸಚಿವಾಲಯವು ತನ್ನ ಕೊರೊನಾ ಮಾರ್ಗಸೂಚಿಯನ್ನೂ ನವೀಕರಿಸಿದೆ. ಮನುಷ್ಯರು ಹೇಗೆ ವಿಕಾಸಗೊಳ್ಳುತ್ತಾರೋ ಹಾಗೆಯೇ ವೈರಸ್ ವಿಕಾಸಗೊಳ್ಳುತ್ತಿದೆ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಸುರಕ್ಷತಾ ಅಂತರ ಯಾವುದು?
ಸೋಂಕಿತ ವ್ಯಕ್ತಿಯ ಬಾಯಿಯಿಂದ ಹೊರಬರುವ ಹನಿಯು 2 ಮೀಟರ್‌ವರೆಗೆ ಅಥವಾ ಏರೋಸೆಲ್ 10 ಮೀಟರ್‌ವರೆಗೆ ಗಾಳಿಯಲ್ಲಿ ಸಾಗಬಹುದು ಎಂದು ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ ಇತ್ತೀಚೆಗೆ ಬಿಡುಗಡೆ ಮಾಡಿದ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದೆ. ಈ ಹಿಂದಿನ ಮಾರ್ಗಸೂಚಿಯಲ್ಲಿ ಕೊರೊನಾ ತಡೆಗಟ್ಟಲು ಆರು ಅಡಿ (1.8 ಮೀಟರ್) ದೂರವನ್ನು ಕಾಯ್ದುಕೊಳ್ಳಬೇಕು ಎಂದು ಹೇಳಲಾಗಿತ್ತು.
ಈ ನಡುವೆ ಮಾಸ್ಕ್ ಬಳಕೆ, ಸ್ವಚ್ಛತೆ ಕೂಡಾ ಮುಖ್ಯ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಮನೆಯ ಅಥವಾ ಕಚೇರಿಯ ಬಾಗಿಲಿನ ಹ್ಯಾಂಡಲ್‌ಗಳು, ಸ್ವಿಚ್, ಟೇಬಲ್, ಕುರ್ಚಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಎಸಿ ಬಳಸುತ್ತಿದ್ದರೂ ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿರಬೇಕು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications