ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಮತ್ತು ಪೂರ್ವದ 6 ರಾಜ್ಯಗಳಲ್ಲಿ ಕೋವಿಡ್ ಹೆಚ್ಚಳ!

|
Google Oneindia Kannada News

ನವದೆಹಲಿ, ಆಗಸ್ಟ್ 18 : ಭಾರತದಲ್ಲಿನ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 27.02 ಲಕ್ಷಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಅತಿ ಹೆಚ್ಚು ಸೋಂಕಿತರು ಇರುವ ರಾಜ್ಯ ಮಹಾರಾಷ್ಟ್ರ. ಉತ್ತರ ಮತ್ತು ಪೂರ್ವ ಭಾರತದ ಕೆಲವು ರಾಜ್ಯಗಳಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.

Recommended Video

Chitradurgaದ ವ್ಯಕ್ತಿ ಮೇಲೆ Corona Vaccine ಪ್ರಯೋಗ | Oneindia Kannada

ಜುಲೈ 24 ರಿಂದ ಆಗಸ್ಟ್ 16ರ ತನಕ ಭಾರತದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ 6 ರಾಜ್ಯಗಳಲ್ಲಿ ಹೆಚ್ಚಾಗುತ್ತಿದೆ. ಉತ್ತರ ಮತ್ತು ಪೂರ್ವ ಭಾರತದ 6 ರಾಜ್ಯಗಳಲ್ಲಿ ಸೋಂಕಿತರು ಹೆಚ್ಚಾಗುತ್ತಿದ್ದಾರೆ.

ಬಯೋಕಾನ್ ಮುಖ್ಯಸ್ಥೆಗೆ ಕೋವಿಡ್ 19 ಸೋಂಕು ಬಯೋಕಾನ್ ಮುಖ್ಯಸ್ಥೆಗೆ ಕೋವಿಡ್ 19 ಸೋಂಕು

ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 2.6ರಷ್ಟು ಹೆಚ್ಚಾಗಿದೆ. ಈ ರಾಜ್ಯಗಳಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಲಾಗಿದ್ದು, ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ.

ಕೊರೊನಾ ಸೋಂಕು ಹೆಚ್ಚಳ: ಬಿಹಾರದಲ್ಲಿ ಸೆಪ್ಟೆಂಬರ್‌ 6ರ ವರೆಗೆ ಲಾಕ್‌ಡೌನ್ ವಿಸ್ತರಣೆ ಕೊರೊನಾ ಸೋಂಕು ಹೆಚ್ಚಳ: ಬಿಹಾರದಲ್ಲಿ ಸೆಪ್ಟೆಂಬರ್‌ 6ರ ವರೆಗೆ ಲಾಕ್‌ಡೌನ್ ವಿಸ್ತರಣೆ

ಜುಲೈ 24ರಂದು ಕೋವಿಡ್ ಸೋಂಕಿತರ ಸಂಖ್ಯೆಲ್ಲಿ ಈ ರಾಜ್ಯಗಳ ಪಾಲು ಶೇ 15.6ರಷ್ಟಿತ್ತು. ಈಗ ಅದು ಶೇ 20ಕ್ಕೆ ಏರಿಕೆಯಾಗಿದೆ. ಉತ್ತರ ಪ್ರದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,58,216ಕ್ಕೆ ಏರಿಕೆಯಾಗಿದೆ.

ಭಾರತದ ಕೊರೊನಾ ಹಾಟ್‌ಸ್ಪಾಟ್ ಮುಂಬೈ ಅಲ್ಲ, ಮತ್ಯಾವ್ದು? ಭಾರತದ ಕೊರೊನಾ ಹಾಟ್‌ಸ್ಪಾಟ್ ಮುಂಬೈ ಅಲ್ಲ, ಮತ್ಯಾವ್ದು?

ಸೋಂಕಿತರು ಇರುವ ಟಾಪ್ ರಾಜ್ಯಗಳು

ಸೋಂಕಿತರು ಇರುವ ಟಾಪ್ ರಾಜ್ಯಗಳು

ಕೊರೊನಾ ವೈರಸ್ ಸೋಂಕಿತರು ಇರುವ ಟಾಪ್ 5 ರಾಜ್ಯಗಳಲ್ಲಿ ಮಹಾರಾಷ್ಟ್ರ (6,04,358) ಮೊದಲ ಸ್ಥಾನದಲ್ಲಿದೆ. ತಮಿಳುನಾಡು (3,43,945), ಆಂಧ್ರ ಪ್ರದೇಶ (2,96,609), ಕರ್ನಾಟಕ (2,33,283) ಮತ್ತು ಉತ್ತರ ಪ್ರದೇಶ (1,58,216).

1 ಲಕ್ಷದ ಗಡಿದಾಟಿದ ಯುಪಿ, ಪ. ಬಂಗಾಳ

1 ಲಕ್ಷದ ಗಡಿದಾಟಿದ ಯುಪಿ, ಪ. ಬಂಗಾಳ

ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಡಿದೆ. ಪಶ್ಚಿಮ ಬಂಗಾಳದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,19,578ಕ್ಕೆ ಏರಿಕೆಯಾಗಿದೆ.

ಬಿಹಾರ, ಅಸ್ಸಾಂ ರಾಜ್ಯಗಳು

ಬಿಹಾರ, ಅಸ್ಸಾಂ ರಾಜ್ಯಗಳು

ಬಿಹಾರ (1,06,618) ಮತ್ತು ಅಸ್ಸಾಂ (79,668) ರಾಜ್ಯಗಳಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ತೆಲಂಗಾಣ ರಾಜ್ಯದಲ್ಲಿಯೂ ಸೋಮವಾರ 1,682 ಹೊಸ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 93,937ಕ್ಕೆ ಏರಿಕೆಯಾಗಿದೆ.

ಜಾರ್ಖಂಡ್, ಒಡಿಶಾ

ಜಾರ್ಖಂಡ್, ಒಡಿಶಾ

ಜಾರ್ಖಂಡ್‌ನಲ್ಲಿ 24,067 ಪ್ರಕರಣಗಳು, ಒಡಿಶಾದಲ್ಲಿ 62,294 ಕೋವಿಡ್ ಸೋಂಕಿತರ ಸಂಖ್ಯೆ ದಾಖಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಸಾವಿರಾರು ಕಾರ್ಮಿಕರು ವಾಪಸ್ ಹೋದಾಗಲೂ ಹೆಚ್ಚಾಗದ ಸೋಂಕಿತರ ಸಂಖ್ಯೆ ಜುಲೈ ನಂತರ ಹೆಚ್ಚಾಗುತ್ತಿದೆ.

English summary
Rise in Covid cases numbers in north and east Indian 6 states Bihar and Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X