ಭಾರತದ 15 ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಶೇ 50ರಷ್ಟು
ನವದೆಹಲಿ, ಮೇ 09; ಕೋವಿಡ್ 2ನೇ ಅಲೆ ಭಾರತದಲ್ಲಿ ಆತಂಕವನ್ನು ಉಂಟು ಮಾಡಿದೆ. ವಿವಿಧ ರಾಜ್ಯಗಳಲ್ಲಿ ಹೊಸ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ದೇಶದ 301 ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿದೆ.
31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶೇ 40ರಷ್ಟು ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿವೆ. ಶೇ 15ರಷ್ಟು ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಶೇ 50ರಷ್ಟಿದೆ. ಹರ್ಯಾಣದ 4, ಅರುಣಾಚಲ ಪ್ರದೇಶದ ಮತ್ತು ರಾಜಸ್ಥಾನದ 2 ಜಿಲ್ಲೆಗಳಲ್ಲಿ ಸೋಂಕು ಜಾಸ್ತಿ ಇದೆ.
ರಾಜ್ಯಗಳಲ್ಲಿ ಕೇರಳದಲ್ಲಿ 14 ಜಿಲ್ಲೆಗಳಲ್ಲಿ ಶೇ 20 ಪ್ಲಸ್ ಸೋಂಕಿನ ಪ್ರಮಾಣವಿದೆ. ಹರ್ಯಾಣದ 22 ಜಿಲ್ಲೆಗಳ ಪೈಕಿ 19, ಪಶ್ಚಿಮ ಬಂಗಾಳದ 23 ಜಿಲ್ಲೆಗಳ ಪೈಕಿ 19, ದೆಹಲಿಯ 11 ಜಿಲ್ಲೆಗಳ ಪೈಕಿ 9, ಕರ್ನಾಟಕ 31 ಜಿಲ್ಲೆಗಳ ಪೈಕಿ 24ರಲ್ಲಿ ಶೇ 70ರಷ್ಟು ಸೋಂಕಿನ ಪ್ರಕರಣಗಳಿವೆ.

ಶನಿವಾರ ಭಾರತದಲ್ಲಿ 4.01 ಲಕ್ಷ ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 37,23,446ಕ್ಕೆ ಏರಿಕೆಯಾಗಿದೆ. 4,187 ಜನರು ಮೃತಪಟ್ಟಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕೇರಳ, ಕರ್ನಾಟಕದಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗಿವೆ.
ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ಮಾಡಿದಂತೆ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿವೆ. 2ನೇ ಅಲೆ ಹರಡುವಿಕೆ ತಡೆಯಲು ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿವೆ. ಕರ್ನಾಟಕದಲ್ಲಿ ಮೇ 10 ರಿಂದ 24ರ ತನಕ ಲಾಕ್ ಡೌನ್ ಜಾರಿಯಲ್ಲಿರುತ್ತದೆ.












Click it and Unblock the Notifications