ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ವರ್ಷಾಂತ್ಯಕ್ಕೆ ಕೊವಿಡ್ ಲಸಿಕೆ ಲಭ್ಯ: ಆರೋಗ್ಯ ಸಚಿವ ಮಾಹಿತಿ

|
Google Oneindia Kannada News

ಗಾಜಿಯಾಬಾದ್, ಆಗಸ್ಟ್ 23: ಭಾರತಕ್ಕೆ ಕೊರೊನಾ ಲಸಿಕೆ ಕೋವ್ಯಾಕ್ಸಿನ್ ಈ ವರ್ಷದ ಅಂತ್ಯದಲ್ಲಿ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.

ಎನ್ ಡಿಆರ್ ಎಫ್ -10 ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆಯೊಂದನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊರೋನಾ ವಿರುದ್ಧದ ಎಂಟು ತಿಂಗಳ ಹೋರಾಟದಲ್ಲಿ ದೇಶದಲ್ಲಿ ಶೇ.75 ರಷ್ಟು ಉತ್ತಮ ಚೇತರಿಕೆ ಪ್ರಮಾಣವಿದೆ.

ಒಟ್ಟಾರೆ 2.2 ಮಿಲಿಯನ್ ರೋಗಿಗಳು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.ಮತ್ತೆ ಏಳು ಲಕ್ಷ ಸೋಂಕಿತರು ಶೀಘ್ರದಲ್ಲಿಯೇ ಗುಣಮುಖರಾಗಲಿದ್ದಾರೆ ಎಂದರು.

Vaccine

ಸ್ವದೇಶಿ ನಿರ್ಮಿತ ಕೊರೊನಾಲಸಿಕೆಯೊಂದು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿದ್ದು, ಈ ವರ್ಷಾಂತ್ಯಕ್ಕೆ ಲಸಿಕೆ ಅಭಿವೃದ್ಧಿಯಾಗುವ ವಿಶ್ವಾಸ ಹೊಂದಿರುವುದಾಗಿ ಅವರು ಹೇಳಿದ್ದಾರೆ.ಆರಂಭದಲ್ಲಿ ಪುಣೆಯಲ್ಲಿ ಕೇವಲ ಒಂದು ಪ್ರಯೋಗಾಲವನ್ನು ಪ್ರಾರಂಭಿಸಲಾಗಿತ್ತು.

ಮಾನವನ ಮೇಲೆ 'ಕೋವ್ಯಾಕ್ಸಿನ್' ಪ್ರಯೋಗ ಆರಂಭಿಸಿದ ಭಾರತ್ ಬಯೋಟೆಕ್ಮಾನವನ ಮೇಲೆ 'ಕೋವ್ಯಾಕ್ಸಿನ್' ಪ್ರಯೋಗ ಆರಂಭಿಸಿದ ಭಾರತ್ ಬಯೋಟೆಕ್

ಆದರೆ, ಈಗ ಪ್ರಯೋಗಾಲಯಗಳು ಮತ್ತು ಪರೀಕ್ಷಾ ಸಾಮರ್ಥ್ಯ ಕೂಡಾ ಹೆಚ್ಚಾಗಿದೆ. ಪ್ರಸ್ತುತ ದೇಶದಲ್ಲಿ 1500 ಪರೀಕ್ಷಾ ಪ್ರಯೋಗಾಲಯಗಳಿದ್ದು, ಶುಕ್ರವಾರ ಒಂದು ಮಿಲಿಯನ್ ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ತಿಳಿಸಿದರು.

ನಿನ್ನೆ ಒಂದೇ ದಿನ ದೇಶದಲ್ಲಿ 63,631 ಸೋಂಕಿತರು ಗುಣಮುಖರಾಗಿದ್ದಾರೆ. ಚೇತರಿಕೆ ಪ್ರಮಾಣ ಶೇ. 74.69ರಷ್ಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಕೋವ್ಯಾಕ್ಸಿನ್ ಮಾನವನ ಮೇಲೆ ಪ್ರಯೋಗ ನಡೆಸಿದ್ದು ಯಶಸ್ವಿಯಾಗಿದೆ. ಇದರಿಂದ ಯಾವುದೇ ಅಡ್ಡಪರಿಣಾಮವಿಲ್ಲ ಎಂಬುದು ತಿಳಿದುಬಂದಿದೆ.

English summary
Union Health Minister Dr Harsh Vardhan on Saturday said that India's first vaccine against the novel coronavirus could be available by end of this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X