ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Google ಮೂಲಕ ಕೊರೊನಾವೈರಸ್ ಲಸಿಕೆ ಲಭ್ಯತೆ ಬಗ್ಗೆ ತಿಳಿಯಿರಿ

|
Google Oneindia Kannada News

ನವದೆಹಲಿ, ಸಪ್ಟೆಂಬರ್ 1: ಭಾರತದಲ್ಲಿ ಪ್ರತಿಯೊಬ್ಬರಿಗೂ ಕೊರೊನಾವೈರಸ್ ಲಸಿಕೆಯು ಸಿಗುವಂತೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ದೇಶದ 13,000 ಕೇಂದ್ರಗಳಲ್ಲಿ ಲಸಿಕೆಯ ಕುರಿತು ಮಾಹಿತಿ ಹಾಗೂ ಲಭ್ಯತೆಯ ಬಗ್ಗೆ ಗೂಗಲ್ ಮೂಲಕ ನೀವು ತಿಳಿದುಕೊಳ್ಳಬಹುದು. ಇಂಥದೊಂದು ಯೋಜನೆಯು ಇದೇ ವಾರದಿಂದ ಜಾರಿಗೆ ಬರಲಿದೆ.

ಕೊವಿನ್ ಅಪ್ಲಿಕೇಷನ್ ಒದಗಿಸುವ ವಾಸ್ತವಿಕ ದತ್ತಾಂಶವನ್ನು ಆಧರಿಸಿ ಪ್ರತಿಯೊಂದು ಲಸಿಕೆ ಕೇಂದ್ರದಲ್ಲಿ ಎಷ್ಟು ಪ್ರಮಾಣದ ಲಸಿಕೆ ಲಭ್ಯವಿದೆ ಎಂಬುದರ ಮಾಹಿತಿಯನ್ನು ನೀಡಲಾಗುತ್ತದೆ. ಮೊದಲ ಡೋಸ್ ಹಾಗೂ ಎರಡನೇ ಡೋಸ್ ಪ್ರಮಾಣ ಎಷ್ಟಿದೆ. ಹಣ ಪಾವತಿಸುವ ಮತ್ತು ಉಚಿತ ಲಸಿಕೆ ಪ್ರಮಾಣ ಎಷ್ಟಿದೆ ಎಂಬುದರ ಎಲ್ಲ ಮಾಹಿತಿಯನ್ನು ಕುಳಿತಲ್ಲೇ ಪಡೆದುಕೊಳ್ಳಬಹುದು. ತದನಂತರ ಕೊವಿನ್ ಅಪ್ಲಿಕೇಶನ್ ಮೂಲಕ ಲಸಿಕೆಗಾಗಿ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಕೊರೊನಾ ನಮ್ಮಿಂದ ದೂರವಾಗುತ್ತಿದೆಯಾ: ಡಾ. ಸಿ.ಎನ್.ಮಂಜುನಾಥ್ ಸಂದರ್ಶನಕೊರೊನಾ ನಮ್ಮಿಂದ ದೂರವಾಗುತ್ತಿದೆಯಾ: ಡಾ. ಸಿ.ಎನ್.ಮಂಜುನಾಥ್ ಸಂದರ್ಶನ

ಗೂಗಲ್ ಬಳಕೆದಾರರು ತಮ್ಮ ಹತ್ತಿರದ ಲಸಿಕೆ ಕೇಂದ್ರಗಳನ್ನು ಹುಡುಕಿದಾಗ ಅಥವಾ Google ಹುಡುಕಾಟ, ನಕ್ಷೆಗಳು ಮತ್ತು ಗೂಗಲ್ ಅಸಿಸ್ಟೆಂಟ್‌ನ ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ ಹುಡುಕಿದಾಗ ಮಾಹಿತಿ ಸ್ವಯಂಚಾಲಿತವಾಗಿ ತೋರಿಸುತ್ತದೆ. ಇಂಗ್ಲಿಷ್ ಜೊತೆಗೆ ಬಳಕೆದಾರರು ಹಿಂದಿ, ಬಂಗಾಳಿ, ತೆಲುಗು, ತಮಿಳು, ಮಲಯಾಳಂ, ಕನ್ನಡ, ಗುಜರಾತಿ ಮತ್ತು ಮರಾಠಿ ಸೇರಿದಂತೆ ಎಂಟು ಭಾರತೀಯ ಭಾಷೆಗಳಲ್ಲೂ ಲಸಿಕೆ ಬಗ್ಗೆ ಹುಡುಕಬಹುದು.

Covid-19 Vaccination: Search covid vaccine near me on Google to book a slot

ಮಾರ್ಚ್ ತಿಂಗಳಿನಿಂದ ಲಸಿಕೆ ಬಗ್ಗೆ ಗೂಗಲ್ ಮಾಹಿತಿ:

2021ರ ಮಾರ್ಚ್‌ ತಿಂಗಳಿನಿಂದ ಗೂಗಲ್ ಸಂಸ್ಥೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಭಾಗಿತ್ವದಲ್ಲಿ COVID-19 ಲಸಿಕೆ ಕೇಂದ್ರಗಳ ಮಾಹಿತಿ ತೋರಿಸಲು ಪ್ರಾರಂಭಿಸಿತು. "ಜನರು ತಮ್ಮ ಜೀವನವನ್ನು ನಿರ್ವಹಿಸಲು ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹುಡುಕುತ್ತಲೇ ಇರುವುದರಿಂದ, ನಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅಧಿಕೃತ ಮತ್ತು ಸಕಾಲಿಕ ಮಾಹಿತಿ ಹುಡುಕಲು ಮತ್ತು ಹಂಚಿಕೊಳ್ಳಲು ನಾವು ಬದ್ಧರಾಗಿರುತ್ತೇವೆ" ಎಂದು ಗೂಗಲ್ ಸರ್ಚ್‌ನ ನಿರ್ದೇಶಕಿ ಹೇಮಾ ಬುಡರಾಜು ಹೇಳಿದ್ದಾರೆ.

65 ಕೋಟಿ ಮಂದಿಗೆ ಕೊರೊನಾವೈರಸ್ ಲಸಿಕೆ ವಿತರಣೆ

ಭಾರತದಲ್ಲಿ ಕೊವಿಡ್-19 ಲಸಿಕೆ ವಿತರಣೆ ಅಭಿಯಾನವನ್ನು ಆರಂಭಿಸಿ 228 ದಿನಗಳೇ ಕಳೆದು ಹೋಗಿವೆ. ಈ ಅವಧಿಯಲ್ಲಿ 65 ಕೋಟಿಗೂ ಅಧಿಕ ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಮಂಗಳವಾರ ರಾತ್ರಿ 7 ಗಂಟೆ ವೇಳೆಗೆ 1,33,18,718 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ. ದೇಶದಲ್ಲಿ ಈವರೆಗೂ 65,41,13,508 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ. ಕೇಂದ್ರ ಸರ್ಕಾರದಿಂದ ದೇಶದ ವಿವಿಧ ರಾಜ್ಯ ಮತ್ತು ಕೇಂದ್ರಾಡಲಿತ ಪ್ರದೇಶಗಳಿಗೆ ಈವರೆಗೆ 64,36,13,160 ಡೋಸ್ ಲಸಿಕೆ ಪೂರೈಕೆ ಮಾಡಲಾಗಿದೆ.

Covid-19 Vaccination: Search covid vaccine near me on Google to book a slot

ಕೇಂದ್ರ ಸರ್ಕಾರ ಪೂರೈಸಿರುವ ಕೊರೊನಾವೈರಸ್ ಲಸಿಕೆ

2021ರ ಸಪ್ಟೆಂಬರ್ 1ರ ಅಂಕಿ-ಅಂಶಗಳ ಪ್ರಕಾರ, 64,36,13,160 ಡೋಸ್ ಕೊರೊನಾವೈರಸ್ ಲಸಿಕೆ ಪೂರೈಕೆ ಮಾಡಲಾಗಿದೆ. ಈ ಪೈಕಿ ಎಷ್ಟು ಡೋಸ್ ಲಸಿಕೆ ಬಳಕೆಯಾಗಿದೆ, ಇನ್ನೆಷ್ಟು ಲಸಿಕೆ ಬರಬೇಕಿದೆ. ಬಾಕಿ ಉಳಿದಿರುವ ಲಸಿಕೆ ಪ್ರಮಾಣ ಎಷ್ಟು ಎಂಬುದನ್ನು ಪಟ್ಟಿಯಲ್ಲಿ ನೋಡಿರಿ.

* ಪೂರೈಕೆಯಾದ ಲಸಿಕೆ ಪ್ರಮಾಣ - 64,36,13,160

* ಸದ್ಯ ಬರಬೇಕಾಗಿರುವ ಲಸಿಕೆ ಪ್ರಮಾಣ - 14,94,040

* ಕೊವಿಡ್-19 ಲಸಿಕೆಯ ಲಭ್ಯತೆ - 5,42,30,546

ಭಾರತದಲ್ಲಿ ಕೊರೊನಾವೈರಸ್ ಸಂಖ್ಯೆ ಏರಿಕೆ:

ಭಾರತದಲ್ಲಿ ಒಂದೇ ದಿನ 41,965 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 33,964 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಇದೇ ಅವಧಿಯಲ್ಲಿ 460 ಜನರು ಬಲಿಯಾಗಿದ್ದು, ಸಾವಿನ ಸಂಖ್ಯೆ 4,39,020ಕ್ಕೆ ಏರಿಕೆಯಾಗಿದೆ. ಬುಧವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,28,10,845ಕ್ಕೆ ಏರಿಕೆಯಾಗಿದೆ. ಇದುವರೆಗೂ 3,19,93,644 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, 3,78,181 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

English summary
The Ministry of Health has taken yet another significant initiative to enhance access to #COVID19 vaccine: Search 'covid vaccine near me' on Google, Check availability of slots & more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X