ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡನೇ ಬಾರಿಗೆ ಕೊರೊನಾ ಸೋಂಕು ತಗುಲಿದರೆ ಮತ್ತಷ್ಟು ಅಪಾಯ

|
Google Oneindia Kannada News

ಮುಂಬೈ, ಸೆಪ್ಟೆಂಬರ್ 26: ಎರಡನೇ ಬಾರಿಗೆ ಕೊರೊನಾ ಸೋಂಕು ತಗುಲಿದರೆ ಮೊದಲನೆಯ ಬಾರಿಗಿಂತ ಹೆಚ್ಚು ಅಪಾಯವನ್ನು ಎದುರಿಸಬಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಪ್ರಿ ಪ್ರಿಂಟ್ ಪೇಪರ್‌ನಲ್ಲಿ ಕಸ್ತೂರ ಬಾ ಆಸ್ಪತ್ರೆ, ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಜೆನೆಟಿಕ್ ಎಂಜಿನಿಯರಿಂಗ್ ಆಂಡ್ ಬಯೋ ಟೆಕ್ನಾಲಜಿ ಹಾಗೂ ಸಿಎಸ್‌ಐಆರ್ -ಇನ್‌ಸ್ಟಿಟ್ಯೂಟ್ ಆಫ್ ಜೆನಾಮಿಕ್ಸ್ ಆಂಡ್ ಇಂಟೆಗ್ರೆಟೀವ್ ಬಯಾಲಜಿಯ ತಜ್ಞರು ಕೆಲವು ಮಾಹಿತಿಗಳನ್ನು ವಿವರಿಸಿದ್ದಾರೆ.

ಕೊವಿಡ್ 19 ಲಸಿಕೆ ಖರೀದಿಸಲು 80 ಸಾವಿರ ಕೋಟಿ ರೂ. ಸರ್ಕಾರದ ಬಳಿ ಇದೆಯೇ? ಕೊವಿಡ್ 19 ಲಸಿಕೆ ಖರೀದಿಸಲು 80 ಸಾವಿರ ಕೋಟಿ ರೂ. ಸರ್ಕಾರದ ಬಳಿ ಇದೆಯೇ?

ಹಲವು ಮಂದಿ ಜೂನ್‌ನಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಮತ್ತೆ ಜುಲೈನಲ್ಲಿ ಅವರಲ್ಲಿ ಹಲವು ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿತ್ತು.

COVID-19 Re-Infection Can Be More Severe Than The First

ಹಾಗೆಯೇ ವೈರಸ್‌ಗಳು ಬೇರೆಯದ್ದೇ ರೂಪ ಪಡೆಯುತ್ತವೆ. ಎರಡನೇ ಬಾರಿಗೆ ಸೋಂಕು ತಗುಲಿದಾಗ ಅದು ತೀವ್ರತರವಾಗಿರಲಿದೆ. ಮೊದಲನೆಯ ಬಾರಿ ಒಂದು ವಾರದಲ್ಲೇ ಚೇತರಿಸಿಕೊಂಡಿರಬಹುದು ಆದರೆ ಎರಡನೇ ಬಾರಿ ಸೋಂಕು ತಗುಲಿದಾಗ ಉಸಿರಾಟದ ತೊಂದರೆ, ಪಾರ್ಶ್ವವಾಯು, ಹೃದಯಾಘಾತ ಇನ್ಯಾವುದೇ ತೊಂದರೆಯೂ ಕೂಡ ಉಂಟಾಗಬಹುದು.

ಡಬ್ಲ್ಯೂಜಿಎಸ್ ವಿಶ್ಲೇಷಣೆಯು ವಿಭಿನ್ನ ಸಮಯದ ಹಂತಗಳಲ್ಲಿ ಸಂಗ್ರಹಿಸಿದ ವೈರಸ್‌ಗಳಲ್ಲಿ ವಿಭಿನ್ನ ರೂಪಾಂತರಗಳಿವೆ. ರೋಗಿ ಎ ಮತ್ತು ಬಿ ಒಂದೇ ಕ್ಲಿನಿಕಲ್ ತಂಡದ ಭಾಗವಾಗಿದ್ದರೂ ಮತ್ತು ವೈರಸ್ ತಳಿಗಳು ಹೋಲುತ್ತವೆ. ಆದರೂ ಜಿನೋಮ್ ವಿಶ್ಲೇಷಣೆ ಪ್ರಕಾರ ವೈರಸ್‌ಗಳು ವಿಭಿನ್ನ ಉಪವರ್ಗಗಳಿಗೆ ಸೇರಿದವಾಗಿವೆ ಎಂಬುದು ಕೂಡ ಸಾಬೀತಾಗಿದೆ.

ದೇಶದಲ್ಲಿ ಕೊರೊನಾ ಲಸಿಕೆ ತಯಾರಿಕೆ ಹಾಗೂ ಮಾರಾಟ ಪ್ರಮುಖವಾದದ್ದು, ಮುಂದಿನ ಒಂದು ವರ್ಷದೊಳಗೆ ಕೇಂದ್ರ ಸರ್ಕಾರದ ಬಳಿ 80 ಸಾವಿರ ಕೋಟಿ ರೂ. ಹಣ ಸಿದ್ಧವಿರುವುದೇ ಎಂದು ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದರ್ ಪೂನಾವಾಲ ಪ್ರಶ್ನಿಸಿದ್ದಾರೆ.

ಇಡೀ ವಿಶ್ವದಲ್ಲೇ ಸೆರಂ ಅತಿ ಹೆಚ್ಚು ಲಸಿಕೆಗಳನ್ನು ತಯಾರಿಸುವ ಕಂಪನಿಯಾಗಿದೆ.ಮುಂದಿನ ಒಂದು ವರ್ಷದಲ್ಲಿ ಭಾರತದ ಬಳಿ 80 ಸಾವಿರ ಕೋಟಿ ರೂ. ಲಭ್ಯವಿರುವುದೇ? ಯಾಕೆಂದರೆ ಆರೋಗ್ಯ ಸಚಿವಾಲಯವು ಲಸಿಕೆಯನ್ನು ಖರೀದಿಸಿ ಭಾರತದಲ್ಲಿ ವಿತರಿಸಬೇಕಾಗುತ್ತದೆ ನಾವು ಎದುರಿಸುವ ಮುಂದಿನ ಸವಾಲು ಇದು ಎಂದಿದ್ದಾರೆ.

ಭಾರತ ಮತ್ತು ವಿದೇಶದಲ್ಲಿ ಲಸಿಕೆ ತಯಾರಕರು ತಮ್ಮ ದೇಶದ ಅಗತ್ಯತೆಗೆ ಅನುಗುಣವಾಗಿ ಲಸಿಕೆಗಳನ್ನು ತಯಾರಿಸಬೇಕಾಗುತ್ತದೆ. ಹೀಗಾಗಿ ನಾನು ಈ ಪ್ರಶ್ನೆಯನ್ನು ಕೇಳುತ್ತಿದ್ದೇನೆ ಎಂದು ಪೂನಾವಾಲಾ ಹೇಳಿದ್ದಾರೆ.

English summary
The threat of re-infection due to COVID-19 virus, though not common, is real and can also be more severe than the first one, shows a study published by Indian researchers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X