• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ಕೋವಿಡ್-19 ಆರ್ಭಟ: ಅನ್ ಲಾಕ್ ಗೆ ಇದು ಸಕಾಲವೇ?

|

ನವದೆಹಲಿ, ಜೂನ್ 8: ಅದು ಮಾರ್ಚ್ 25, 2020.. ಆಗಿನ್ನೂ ಭಾರತದಲ್ಲಿದ್ದದ್ದು ಬೆರಳೆಣಿಕೆಯಷ್ಟು ಕೊರೊನಾ ವೈರಸ್ ಸೋಂಕಿತರು ಮಾತ್ರ. ಆದರೂ, ಅವತ್ತು ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟುವ ಸಲುವಾಗಿ ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು.

   ಚಿರು ಸಂಪಾದಿಸಿದ ಆಸ್ತಿ ಈ ಅಭಿಮಾನಿಗಳು | Chiranjeevi Sarja | FILMIBEAT KANNADA

   ಇಂದು ಭಾರತದಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ 2.50 ಲಕ್ಷ ದಾಟಿದೆ. ಇಂತಹ ಸಮಯದಲ್ಲಿ ಕೇವಲ ಕಂಟೇನ್ಮೆಂಟ್ ಝೋನ್ ಗಳಲ್ಲಿ ಮಾತ್ರ ಲಾಕ್ ಡೌನ್ ಮುಂದುವರೆಯಲಿದ್ದು, ಉಳಿದ ಪ್ರದೇಶಗಳನ್ನು 'ಅನ್ ಲಾಕ್' ಮಾಡಲಾಗಿದೆ.

   ಕೊರೊನಾ ವೈರಸ್ ಅಟ್ಟಹಾಸ: ಹೊಸ ದಾಖಲೆ ಬರೆದ ಭಾರತ

   ಕಳೆದ ನಾಲ್ಕೈದು ದಿನಗಳಿಂದ ಭಾರತದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಹಾಗ್ನೋಡಿದ್ರೆ, ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಇಟಲಿಯಲ್ಲಿದ್ದ ಪರಿಸ್ಥಿತಿ ಇದೀಗ ಭಾರತದಲ್ಲಿದೆ. ಅಂದು ಇಟಲಿಯನ್ನ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿತ್ತು. ಆದರೆ, ಭಾರತದಲ್ಲಿ ಈಗ ಹೆಚ್ಚು ಸಕ್ರಿಯ ಸೋಂಕಿತರಿದ್ದರೂ 'ಅನ್ ಲಾಕ್' ಪ್ರಕ್ರಿಯೆ ಆರಂಭವಾಗಿದೆ. ಅನ್ ಲಾಕ್ ಮಾಡಲು ಇದು ಸಕಾಲವೇ.?

   ಹೀಗೂ ಉಂಟು.!

   ಹೀಗೂ ಉಂಟು.!

   ವಿಶ್ವದಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿರುವ ದೇಶಗಳ ಪೈಕಿ ಭಾರತ ಸದ್ಯ ಆರನೇ ಸ್ಥಾನದಲ್ಲಿದೆ. ಪ್ರತಿ ದಿನದ ಹೊಸ ಸೋಂಕಿತರ ಪ್ರಮಾಣ ತಾಳೆ ಹಾಕಿ ನೋಡಿದರೆ, ಅಮೇರಿಕಾ ಮತ್ತು ಬ್ರೆಜಿಲ್ ಬಿಟ್ಟರೆ.. ಹೆಚ್ಚು ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಕಂಡುಬರುತ್ತಿರುವುದು ನಮ್ಮ ಭಾರತದಲ್ಲೇ.!

   ಕೆಲವೇ ದಿನಗಳಲ್ಲಿ ನಾಲ್ಕನೇ ಸ್ಥಾನಕ್ಕೆ.?

   ಕೆಲವೇ ದಿನಗಳಲ್ಲಿ ನಾಲ್ಕನೇ ಸ್ಥಾನಕ್ಕೆ.?

   ಟಾಪ್ 5 ದೇಶಗಳ ಪಟ್ಟಿಯಲ್ಲಿ ಯು.ಕೆ ಮತ್ತು ಸ್ಪೇನ್ ಕೂಡ ಇದೆ. ಆದರೆ, ಯು.ಕೆ ಮತ್ತು ಸ್ಪೇನ್ ನಲ್ಲೀಗ ಹೊಸ ಸೋಂಕಿತರ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಹೀಗೇ ಮುಂದುವರೆದರೆ ಕೆಲವೇ ದಿನಗಳಲ್ಲಿ ಒಟ್ಟಾರೆ ಕೊರೊನಾ ವೈರಸ್ ಸೋಂಕಿತರ ಜಾಗತಿಕ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೇರಲಿದೆ.

   ಒಳ್ಳೇ ಸುದ್ದಿ: ಕರ್ನಾಟಕದಲ್ಲಿ ಕೊರೊನಾ ವೈರಸ್ ಗೆ ಗುದ್ದು ಕೊಡುತ್ತಿದೆ 'ಈ' ಚಿಕಿತ್ಸೆ.!

   ಯೂರೋಪ್ ನಲ್ಲಿ ಫ್ರೆಶ್ ಕೇಸ್ ಗಳು ಕಮ್ಮಿಯಾಗಿವೆ

   ಯೂರೋಪ್ ನಲ್ಲಿ ಫ್ರೆಶ್ ಕೇಸ್ ಗಳು ಕಮ್ಮಿಯಾಗಿವೆ

   ಬಹುತೇಕ ಯೂರೋಪಿಯನ್ ರಾಷ್ಟ್ರಗಳು ಸದ್ಯ 'ಲಾಕ್ ಡೌನ್' ನಿಂದ 'ಆನ್ ಲಾಕ್' ಆಗುತ್ತಿವೆ. ಆದರೆ, ಆ ಎಲ್ಲಾ ರಾಷ್ಟ್ರಗಳಲ್ಲಿ ಹೊಸದಾಗಿ ಸೋಂಕಿತರು ಹೆಚ್ಚಾಗಿ ಕಂಡುಬರುತ್ತಿಲ್ಲ. ಇಟಲಿ, ಜರ್ಮನಿ, ಫ್ರಾನ್ಸ್, ನೆದರ್ ಲ್ಯಾಂಡ್ಸ್, ಸ್ವೀಡನ್, ಬೆಲ್ಜಿಯಂ, ಸ್ವಿಟ್ಜರ್ಲ್ಯಾಂಡ್ ನಲ್ಲಿ ಫ್ರೆಶ್ ಕೇಸ್ ಗಳು ಬೆರಳೆಣಿಕೆಯಷ್ಟಾಗಿದೆ.

   ಇದು ಸರಿಯೇ.?

   ಇದು ಸರಿಯೇ.?

   ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಗುಜರಾತ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಹರ್ಯಾಣ, ಕೇರಳದಲ್ಲಿ ಹೆಚ್ಚು ಕೋವಿಡ್-19 ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಇಂತಹ ಸಮಯದಲ್ಲಿ ಭಾರತ ಅನ್ ಲಾಕ್ ಆಗುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಹಲವರ ತಲೆಯಲ್ಲಿ ಕೊರೆಯುತ್ತಿದೆ.

   ಗುಡ್ ನ್ಯೂಸ್: ಕೊರೊನಾ ಕೊಲ್ಲಲು ಬಳಸಿದ ಅಸ್ತ್ರ ಭಾರತದಲ್ಲಿ ಯಶಸ್ವಿ!

   ಸೋಂಕಿತರ ಸಂಖ್ಯೆ ಹೆಚ್ಚಾದರೆ.?

   ಸೋಂಕಿತರ ಸಂಖ್ಯೆ ಹೆಚ್ಚಾದರೆ.?

   ಅನ್ ಲಾಕ್ 1.0 ನಲ್ಲಿ ಹಲವು ಚಟುವಟಿಕೆಗಳಿಗೆ ಅವಕಾಶ ನೀಡಿರುವ ಕಾರಣ, ಆರ್ಥಿಕ ಚಟುವಟಿಕೆ ಹೆಜ್ಜಾಗಲಿದೆ. ಇದರಿಂದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಕೂಡ ಹೆಚ್ಚಾಗುವ ಅಪಾಯ ಇದೆ. ಸೋಂಕಿತರ ಸಂಖ್ಯೆ ಹೆಚ್ಚಾದರೆ, ರೋಗಿಗಳ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ರಾಜ್ಯಗಳು ತೊಂದರೆ ಎದುರಿಸುವ ಸಂಭವವೂ ಇದೆ.

   ಬೆಡ್ ಗಳ ಕೊರತೆ

   ಬೆಡ್ ಗಳ ಕೊರತೆ

   ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಈಗಾಗಲೇ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಎದುರಾಗಿದೆ. ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಕೆಲ ವೈದ್ಯಕೀಯ ಮೂಲಸೌಕರ್ಯಗಳೇ ಇಲ್ಲದಂತಾಗಿದೆ. ಇನ್ನೂ ಹಲವು ರಾಜ್ಯಗಳಲ್ಲಿ ಟೆಸ್ಟಿಂಗ್ ಕಿಟ್ ಗಳ ಸಮರ್ಪಕ ಪೂರೈಕೆ ಸಾಧ್ಯವಾಗುತ್ತಿಲ್ಲ.

   ಇದು ಸಕಾಲವೇ.?

   ಇದು ಸಕಾಲವೇ.?

   ಅತ್ತ ಕಂಟೇನ್ಮೆಂಟ್ ಝೋನ್ ಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ದೆಹಲಿಯೊಂದರಲ್ಲೇ 200 ಕ್ಕೂ ಹೆಚ್ಚು ಕಂಟೇನ್ಮೆಂಟ್ ಝೋನ್ ಗಳಿವೆ. ಇಂಥಾ ಸಮಯದಲ್ಲಿ ದೇಶ ಅನ್ ಲಾಕ್ ಆಗಿದ್ದು ಸರಿಯೇ.? ಅನ್ ಲಾಕ್ ಮಾಡಲು ಇದು ಸಕಾಲವೇ.? ನೀವೇ ಯೋಚಿಸಿ...

   English summary
   Covid 19: Is it a good time to Unlock India.?
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X