ಯಾಸೀನ್ ಭಟ್ಕಳ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಕೋರ್ಟ್ ಸೂಚನೆ
ನವದೆಹಲಿ, ಆಗಸ್ಟ್ 2: 2010ರಲ್ಲಿ ನಡೆದ ಜಾಮಾ ಮಸೀದಿ ಸ್ಫೋಟಕ್ಕೆ ಸಂಬಂದಿಸಿದಂತೆ 'ಇಂಡಿಯನ್ ಮುಜಾಹಿದ್ದೀನ್' ಸಂಸ್ಥಾಪಕ ಯಾಸೀನ್ ಭಟ್ಕಳ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸುವಂತೆ ದೆಹಲಿ ಕೋರ್ಟ್ ಮಂಗಳವಾರ ಆದೇಶ ನೀಡಿದೆ.
ಇನ್ನು ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಮೂವರು ಆರೋಪಿಗಳನ್ನು ಕೋರ್ಟ್ ಇದೇ ಸಂದರ್ಭದಲ್ಲಿ ಖುಲಾಸೆಗೊಳಿಸಿದೆ.

2010ರ ಅಕ್ಟೋಬರ್ 9ರಂದು ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಜಾಮಾ ಮಸೀದಿ ಗೇಟ್ ಬಳಿ ಪ್ರವಾಸಿಗರಿಗೆ ಗುಂಡು ಹಾರಿಸಿದ ಪರಿಣಾಮ ತೈವಾನ್ ಪ್ರವಾಸಿಯೊಬ್ಬ ಗಾಯಯಗೊಂಡಿದ್ದ. ಇದೇ ಪ್ರದೇಶದಲ್ಲಿ ಕಾರ್ ನಲ್ಲಿ ಪ್ರಬಲವಲ್ಲದ ಬಾಂಬ್ ಕೂಡಾ ಸ್ಪೋಟಗೊಂಡಿತ್ತು.
ಈಗಾಗಲೇ ಎನ್ಐಎ ವಿಶೇಷ ನ್ಯಾಯಾಲಯದಿಂದ 2013ರ ಹೈದರಾಬಾದ್ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ಯಾಸೀನ್ ಭಟ್ಕಳ್ ಮರಣದಂಡನೆ ಶಿಕ್ಷಗೆ ಗುರಿಯಾಗಿದ್ದಾನೆ.












Click it and Unblock the Notifications