ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನವ ಕಳ್ಳಸಾಗಣೆ ಕೇಸ್ : ಗಾಯಕ ದಲೇರ್ ಮೆಹಂದಿ ದೋಷಿ

By Mahesh
|
Google Oneindia Kannada News

ಚಂಡೀಗಢ, ಮಾರ್ಚ್ 16: ಪಂಜಾಬಿ ಪಾಪ್ ಗಾಯಕ ದಲೇರ್ ಮೆಹಂದಿ ಅವರು ಮಾನವ ಕಳ್ಳಸಾಗಣೆ ಕೇಸ್ ನಲ್ಲಿ ತಪ್ಪಿತಸ್ಥ ಎಂದು ಪಟಿಯಾಲ ಕೋರ್ಟ್ ಆದೇಶ ನೀಡಿದೆ.

2003ರ ಮಾನವ ಕಳ್ಳಸಾಗಣೆ ಕೇಸ್ ನಲ್ಲಿ ಸ್ಟಾರ್ ಗಾಯಕ ದಲೇರ್ ಅವರು ದೋಷಿ ಎಂದು ಆದೇಶಿಸಲಾಗಿದೆ. ದಲೇರ್ ಹಾಗೂ ಅವರ ಸೋದರ ಷಂಶೇರ್ ಸಿಂಗ್ ಅವರು ತಮ್ಮ ಗಾನವೃಂದದ ಮೂಲಕ ಅಕ್ರಮವಾಗಿ ವಿದೇಶಕ್ಕೆ ಜನರನ್ನು ಕರೆದೊಯ್ದಿರುವ ಆರೋಪ ಹೊತ್ತಿದ್ದಾರೆ.

Daler Mehndi sentenced to 2 years in jail in human trafficking case

1998 ಹಾಗೂ 1999ರಲ್ಲಿ ಎರಡು ಬಾರಿ ವಿದೇಶಿ ಪ್ರವಾಸ ಕೈಗೊಂಡಿದ್ದರು. ಈ ವೇಳೆಯಲ್ಲಿ ಸುಮಾರು 10 ಮಂದಿಯನ್ನು ಗಾನವೃಂದದ ಸದಸ್ಯರು ಎಂದು ಹೇಳಿ,. ಯುಎಸ್ ಗೆ ಕರೆದೊಯ್ದ ಆರೋಪ ಹೊತ್ತುಕೊಂಡಿದ್ದರು. ಇದರ ವಿರುದ್ಧ ಅಕ್ರಮವಾಗಿ ಮಾನವ ಕಳ್ಳ ಸಾಗಣೆ ಪ್ರಕರಣ ದಾಖಲಾಗಿತ್ತು.

2006ರಲ್ಲಿ ಪಟಿಯಾಲ ಪೊಲೀಸರು ದಲೇರ್ ಮೆಹಂದಿ ಪರ ವರದಿ ಸಲ್ಲಿಸಿದ್ದರು. ಆದರೆ, ಮೆಹಂದಿ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಸಿಕ್ಕಿದ್ದರಿಂದ ತನಿಖೆ ನಡೆಸಲಾಗಿತ್ತು. ತನಿಖೆಯಿಂದ ಮೆಹಂದಿ ಅವರ ಮೇಲಿನ ಆರೋಪ ಸತ್ಯ ಎಂದು ಸಾಬೀತಾಗಿದ್ದು, ಮೆಹಂದಿ ಸೋದರರು ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ.

English summary
Punjabi pop singer Daler Mehndi was sentenced to two years in prison by Patiala court after being convicted in a 2003 human trafficking case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X