Independence day: ಭಾರತದ ಜೊತೆ ಸ್ವಾತಂತ್ರ್ಯ ದಿನ ಆಚರಿಸಿಕೊಳ್ಳುವ ದೇಶಗಳು
78ನೇ ಸ್ವಾತಂತ್ರ್ಯ ದಿನವನ್ನು ಅದ್ದೂರಿಯಾಗಿ ಆಚರಿಸಲು ಭಾರತದಲ್ಲಿ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 200 ವರ್ಷಗಳ ಕಾಲ ಬ್ರಿಟಿಷರಿಂದ ಆಳಲ್ಪಟ್ಟ ಭಾರತ, ಅನೇಕ ಹೋರಾಟ, ಸಂಗ್ರಾಮಗಳ ಬಳಿಕ 1947ರಲ್ಲಿ ಸ್ವಾತಂತ್ರ್ಯವನ್ನು ಪಡೆದುಕೊಂಡಿತು. ಭಾರತ ಮಾತ್ರವಲ್ಲದೆ ಇನ್ನೂ ಹಲವು ದೇಶಗಳು ಕೂಡ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿವೆ.
ದಕ್ಷಿಣ ಕೊರಿಯಾ, ಉತ್ತರ ಕೊರಿಯಾ, ಕಾಂಗೋ ಗಣರಾಜ್ಯ, ಬಹ್ರೇನ್ ಮತ್ತು ಲಿಚ್ಟೆನ್‌ಸ್ಟೈನ್ ಭಾರತದೊಂದಿಗೆ ತಮ್ಮ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಳ್ಳುವ ದೇಶಗಳಾಗಿವೆ. ಈ ಎಲ್ಲಾ ದೇಶಗಳು ಆಗಸ್ಟ್ 15ರಂದು ಸ್ವಾತಂತ್ರ್ಯ ದಿನದ ಸಂಭ್ರಮವನ್ನು ಆಚರಿಸುತ್ತವೆ.

ದಕ್ಷಿಣ ಕೊರಿಯಾ
ದಕ್ಷಿಣ ಕೊರಿಯಾ ಕೂಡ ಆಗಸ್ಟ್ 15ರಂದು ರಾಷ್ಟ್ರೀಯ ವಿಮೋಚನಾ ದಿನವನ್ನು ಆಚರಣೆ ಮಾಡಲಾಗುತ್ತದೆ. 1945ರಲ್ಲಿ ಕೊರಿಯನ್ ದೇಶವು ಯುಎಸ್ ಮತ್ತು ಸೋವಿಯತ್ ಪಡೆಗಳ ಜಪಾನ್‌ನ ಆಕ್ರಮಣದಿಂದ ಮುಕ್ತವಾಯಿತು. ಬಳಿಕ ಈ ದೇಶವನ್ನು ದಕ್ಷಿಣ ಕೊರಿಯಾ ಮತ್ತು ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ ಎಂದು ವಿಂಗಡಿಸಲಾಗಿದೆ. ಕೊರಿಯನ್ನರು ಈ ದಿನವನ್ನು ಗ್ವಾಂಗ್ಬೊಕ್ಜಿಯೋಲ್ ಎಂದು ಕರೆಯುತ್ತಾರೆ, ಇದರ ಅರ್ಥ ಬೆಳಕು ಹಿಂತಿರುಗಿದ ದಿನ.
ಉತ್ತರ ಕೊರಿಯಾ
ಉತ್ತರ ಕೊರಿಯಾದಲ್ಲಿ ಪ್ರತಿ ವರ್ಷ ಆಗಸ್ಟ್ 15 ರಂದು ರಾಷ್ಟ್ರೀಯ ವಿಮೋಚನಾ ದಿನವನ್ನು ಆಚರಿಸಲಾಗುತ್ತದೆ. 1945 ರಲ್ಲಿ ಮಿತ್ರರಾಷ್ಟ್ರಗಳಿಂದ ಕೊರಿಯನ್ ಪರ್ಯಾಯ ದ್ವೀಪವನ್ನು ಸ್ವತಂತ್ರಗೊಳಿಸಿದ ಮೂರು ವರ್ಷಗಳ ನಂತರ, 15 ಆಗಸ್ಟ್, 1948 ರಂದು ಸ್ವತಂತ್ರ ಕೊರಿಯಾದ ಸರ್ಕಾರಗಳನ್ನು ರಚನೆ ಮಾಡಲಾಯಿತು.
ಕಾಂಗೋ ಗಣರಾಜ್ಯ
ಕಾಂಗೋಲೀಸ್ ರಾಷ್ಟ್ರೀಯ ದಿನ ಎಂದೂ ಕರೆಯಲ್ಪಡುವ ಕಾಂಗೋ ರಾಜ್ಯವು 80 ವರ್ಷಗಳ ಫ್ರಾನ್ಸ್‌ನ ಅಧೀನದ ನಂತರ 15 ಆಗಸ್ಟ್ 1960 ರಂದು ಪೂರ್ಣ ಸ್ವಾತಂತ್ರ್ಯ ಪಡೆದುಕೊಂಡಿತು.
ಬಹ್ರೇನ್
ಬಹ್ರೇನ್ ಸಹ ಭಾರತದಂತೆಯೇ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಲ್ಲಿತ್ತು ಮತ್ತು ಆಗಸ್ಟ್ 15, 1971 ರಂದು ತನ್ನ ಸ್ವಾತಂತ್ರ್ಯ ಪಡೆದುಕೊಂಡಿತು. ಬಹ್ರೇನ್ ಜನಸಂಖ್ಯೆಯ ವಿಶ್ವಸಂಸ್ಥೆಯ ಸಮೀಕ್ಷೆಯ ನಂತರ ದೇಶವು 1971 ರಲ್ಲಿ ಸ್ವಾತಂತ್ರ್ಯ ಘೋಷಿಸಿತು ಬಳಿಕ ದೇಶವು ಬ್ರಿಟನ್ ಜೊತೆ ಹೊಸ ಸ್ನೇಹ ಒಪ್ಪಂದಕ್ಕೆ ಸಹಿ ಹಾಕಿತು.
ಲಿಚ್ಟೆನ್‌ಸ್ಟೈನ್
ಲೆಚ್ಟೆನ್‌ಸ್ಟೈನ್ ಜಗತ್ತಿನ ಆರನೇ ಚಿಕ್ಕ ರಾಷ್ಟ್ರವಾಗಿದೆ. 1866ರಲ್ಲಿ ಜರ್ಮನ್ನರ ಆಳ್ವಿಕೆಯಿಂದ ಮುಕ್ತವಾದ ನೆನಪಿಗಾಗಿ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸುತ್ತದೆ. ಯೂರೋಪ್‌ನ ಚಿಕ್ಕ ರಾಷ್ಟ್ರವಾಗಿದ್ದರೂ ಇದು ಶ್ರೀಮಂತ ರಾಷ್ಟ್ರವಾಗಿದೆ.












Click it and Unblock the Notifications