ಸುಳ್ಳು ಸುದ್ದಿಗಳು: ಪಾರದರ್ಶಕತೆ, ಪರಿಣಾಮಕಾರಿ ಸಂವಹನಕ್ಕೆ ಪ್ರಧಾನಿ ಮೋದಿ ಕರೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತದಲ್ಲಿ ಸಂವಹನ ಎಷ್ಟು ಮುಖ್ಯವಾಗುತ್ತದೆ ಎಂದು ಸತತವಾಗಿ ಹೇಳುತ್ತಲೇ ಬಂದಿದ್ದಾರೆ. ಪರಿಣಾಮಕಾರಿ ನಿರೂಪಣೆಗಳನ್ನು ಅರ್ಥ ಮಾಡಿಕೊಂಡು ಜನರ ನಂಬಿಕೆ ಮತ್ತು ಭರವಸೆಗಳನ್ನು ಉಳಿಸಿಕೊಳ್ಳುವುದನ್ನು ತಿಳಿಸಿದ್ದಾರೆ. ಇತ್ತೀಚಿಗೆ ಅವರು ಸಚಿವರು, ಅಧಿಕಾರಿಗಳಿಗೆ ಸರ್ಕಾರದ ತೀರ್ಮಾನ, ನೀತಿ ಮತ್ತು ಸಾಧನೆಗಳನ್ನು ಸಕ್ರಿಯವಾಗಿ ತಲುಪಿಸುವ ಕುರಿತು ನಿರ್ದೇಶನಗಳನ್ನು ಕೊಟ್ಟಿದ್ದಾರೆ. ವಿರೋಧಿಗಳು ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಿ ಸರ್ಕಾರದ ಪ್ರಯತ್ನ, ಸಾಧನೆಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವಾಗ ಈ ನಿರ್ದೇಶನಗಳು ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ.
ರಾಜಕೀಯದಲ್ಲಿ ನಿರೂಪಣೆಯ ಶಕ್ತಿ
ರಾಜಕೀಯ ರಂಗದಲ್ಲಿ ನಿರೂಪಣೆಗಳನ್ನು ನಿಯಂತ್ರಣದಲ್ಲಿಡುವುದು ಮಹತ್ವದ್ದಾಗಿದೆ. ಉತ್ತಮವಾದ ನಿರೂಪಣೆ ಜನರು ಸದಾಭಿಪ್ರಾಯವನ್ನು ಹೊಂದಲು, ಗ್ರಹಿಕೆಗಳಿಗೆ ಆಕಾರ ನೀಡಲು, ಚುನಾವಣಾ ಫಲಿತಾಂಶಗಳು ಉತ್ತಮವಾಗಿ ಬರಲು ಪ್ರೇರೇಪಣೆ ನೀಡುತ್ತದೆ. ವಿರೋಧಿಗಳು ಸರ್ಕಾರ ನೀತಿಗಳನ್ನು ಪ್ರಶ್ನಿಸಲು, ಅವುಗಳಲ್ಲಿ ಕೊರತೆಗಳನ್ನು ಹುಡುಕಲು, ಸರ್ಕಾರದ ಉದ್ದೇಶಗಳನ್ನು ಹುಡುಕಲು, ಪರಿಣಾಮವನ್ನು ಬಿಂಬಿಸಲು ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಮೋದಿ ಸರ್ಕಾರ ಸಾರ್ವಜನಿಕರು ಸರಿಯಾದ ಮಾಹಿತಿ ಪಡೆಯಬೇಕು ಎಂದು ಕೇವಲ ಸರ್ಕಾರದ ಸಮರ್ಥನೆಗಾಗಿ ಖಚಿತಪಡಿಸುತ್ತಿಲ್ಲ ನಂಬಿಕೆ ಮತ್ತು ವಿಶ್ವಾಸಾರ್ಹತೆ ಉಳಿಸಿಕೊಳ್ಳುವುದಕ್ಕಾಗಿ ಮಾಡುತ್ತಿದ್ದಾರೆ.

ಇತ್ತೀಚಿನ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ಹುರುಪಿನ ಅಭಿಯಾನವನ್ನು ಆರಂಭಿಸಿತು. ಬಿಜೆಪಿ ಸಂವಿಧಾನಕ್ಕೆ ಕೆಲವು ತಿದ್ದುಪಡಿಗಳನ್ನು ತರುವ ಮೂಲಕ ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತರುವ ಉದ್ದೇಶ ಹೊಂದಿದೆ ಎಂದು ಆರೋಪಿಸಿತು. ಚುನಾವಣೆ ಬಗ್ಗೆ ಜನರಲ್ಲಿ ಭಯ, ಅನುಮಾನ ಹುಟ್ಟುಹಾಕುವ ಉದ್ದೇಶ ಇದರಲ್ಲಿತ್ತು. ಆದರೆ ಬಿಜೆಪಿ ದೃಢವಾಗಿ ಈ ಆರೋಪಗಳನ್ನು ತಳ್ಳಿ ಹಾಕಿತು. ಪ್ರಧಾನಿ ನರೇಂದ್ರ ಮೋದಿ ಅವರೇ ಇದನ್ನು ಆಧಾರರಹಿತ ಎಂದು ತಳ್ಳಿಹಾಕಿದರು, ವಿರೋಧಿಗಳು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದರು.
ಸುಳ್ಳು ನಿರೂಪಣೆಗಳನ್ನು ಎದುರಿಸುವುದು
ಚುನಾವಣಾ ಪ್ರಚಾರದಲ್ಲಿ ವಿರೋಧಿಗಳ ನಿರೂಪಣೆಯ ಕೇಂದ್ರವಾಗಿದ್ದು, ಬಿಜೆಪಿಯ ವಿಜಯ ಸಂವಿಧಾನದ ತಿದ್ದುಪಡಿಗೆ ದಾರಿಯಾಗುತ್ತದೆ, ಈ ತಿದ್ದುಪಡಿಗಳ ಮೂಲಕ ದೇಶದ ಮೂಲ ತತ್ವಗಳನ್ನು ಬದಲಾಯಿಸಲಾಗುತ್ತದೆ ಎಂಬುದು. ಆದರೆ ಬಿಜೆಪಿ ಪದೇ ಪದೇ ಇಂತಹ ಯಾವುದೇ ಬದಲಾವಣೆ ತರುವ ಚಿಂತನೆ ಇಲ್ಲ ಎಂದು ಜನರಿಗೆ ಭರವಸೆ ನೀಡುತ್ತಾ ಬಂದಿತು. ಪಕ್ಷದ ಸದಸ್ಯರು ಮತ್ತು ಅಧಿಕಾರಿಗಳ ಸಭೆಯಲ್ಲಿ ಪ್ರಧಾನಿ ಮೋದಿ ಇಂತಹವುಗಳು ಜನರನ್ನು ತಪ್ಪುದಾರಿಗೆ ಕರೆದುಕೊಂಡು ಹೋಗದಂತೆ ಸರಿಯಾದ ಮಾಹಿತಿಯನ್ನು ಖಚಿತವಾಗಿ ಜನರಿಗೆ ಮುಟ್ಟಿಸಿ ಎಂದು ತಿಳಿಸಲು ಒತ್ತು ನೀಡಿದರು.
ಬಿಜೆಪಿ ಅಸಹಿಷ್ಣುತೆಯ ವಾತಾವರಣವನ್ನು ನಿರ್ಮಾಣ ಮಾಡಲು ಪ್ರಯತ್ನ ನಡೆಸುತ್ತಿದೆ, ಅದರಲ್ಲೂ ಮುಖ್ಯವಾಗಿ ಮುಸ್ಲಿಂ ಸಮಯದಾಯದ ವಿರುದ್ಧ ಎಂದು ವಿರೋಧಿಗಳು ಹೇಳಿಕೊಂಡರು. ಅಲ್ಪಸಂಖ್ಯಾತರ ಯೋಗಕ್ಷೇಮಕ್ಕೆ ಧಕ್ಕೆಯಾಗುತ್ತದೆ ಎಂದು ಬಿಂಬಿಸುವ ಮೂಲಕ ಅವರ ಮತಗಳನ್ನು ಬಿಜೆಪಿ ವಿರುದ್ಧವಾಗಿ ಚಲಾವಣೆಗೊಳಿಸುವ ಉದ್ದೇಶ ಇದರ ಹಿಂದಿತ್ತು. ಆದರೆ ಬಿಜೆಪಿ ಈ ಸುದ್ದಿಗಳಿಗೆ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್' ಎಂಬ ಘೋಷಣೆ ಮೂಲಕ ತಿರುಗೇಟು ನೀಡಿತು. ಪ್ರಧಾನಿ ನರೇಂದ್ರ ಮೋದಿ ಅವರು ಸಮುದಾಯ ಮತ್ತು ಪ್ರದೇಶಗಳನ್ನು ಹೊರತಾಗಿ ಸರ್ಕಾರದ ಯೋಜನೆಗಳು ಎಲ್ಲಾ ವರ್ಗದ ಜನರ ಕಲ್ಯಾಣಕ್ಕಾಗಿ ರೂಪಿಸಲಾಗಿದೆ ಎಂದು ಹೇಳಿದರು.
ವಿರೋಧಿಗಳು ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಸರ್ಕಾರವನ್ನು ಗುರಿಯಾಗಿಸಿಕೊಂಡರು. ಅದರಲ್ಲೂ ಲಡಾಕ್‌ನಲ್ಲಿ ಚೀನಾದ ಅಕ್ರಮಣಗಳನ್ನು ಉಲ್ಲೇಖಿಸಿದರು. ಭಾರತದ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವಲ್ಲಿ ಬಿಜೆಪಿ ವಿಫಲವಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಘೋಷಿಸಿದರು. ಇದಕ್ಕೆ ಸರ್ಕಾರ ತಿರುಗೇಟು ನೀಡಿತು, ಭಾರತದ ರಕ್ಷಣಾ ಸಾಮರ್ಥ್ಯವನ್ನು ಗಟ್ಟಿಗೊಳಿಸಲು ಪರಿಣಾಮಕಾರಿ ಹೆಜ್ಜೆಗಳನ್ನು ಇಡಲಾಗಿದೆ, ಒಂದಿಚೂ ಭೂಮಿಯನ್ನು ಚೀನಾಗೆ ಬಿಟ್ಟುಕೊಟ್ಟಿಲ್ಲ ಎಂದು ಹೇಳಿತು.
ಸಂವಹನದ ಪ್ರಾಮುಖ್ಯತೆ
ಸಕಾಲದಲ್ಲಿ ಪರಿಣಾಮಕಾರಿ ಸಂವಹನ ನಡೆಸುವ ಮಹತ್ವದ ಕುರಿತು ಪ್ರಧಾನಿ ನರೇಂದ್ರ ಮೋದಿ ಉನ್ನತ ಅಧಿಕಾರಿಗಳು ಮತ್ತು ಸಚಿವರ ಸಭೆಯಲ್ಲಿ ಹೇಳಿದ್ದಾರೆ. ಸರ್ಕಾರದ ಕಾರ್ಯಗಳು ಮತ್ತು ನೀತಿಗಳನ್ನು ತ್ವರಿತವಾಗಿ ಜನರಿಗೆ ತಲುಪಿಸುವತ್ತ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ. ಇದು ಸುಳ್ಳು ಸುದ್ದಿಗೆ ತಿರುಗೇಟು ನೀಡುವುದು ಮಾತ್ರವಲ್ಲ ಪಾರದರ್ಶಕತೆ ಮತ್ತು ಸರ್ಕಾರದ ಉತ್ತರದಾಯಿತ್ವವನ್ನು ಬಿಂಬಿಸುವ ಕ್ರಮವಾಗಿದೆ ಎಂದು ಹೇಳಿದ್ದಾರೆ.
ಸಹಕಾರಿ ನೀತಿಗಳನ್ನು ಒತ್ತಿ ಹೇಳಿರುವ ಪ್ರಧಾನಿ ಮೋದಿ ಕೇಂದ್ರ ಸರ್ಕಾರಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರಿ ನೌಕರರ ಒಳಗೊಳ್ಳುವಿಕೆಯನ್ನು ಬಯಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಿಗೆ ಕೆಲಸ ಮಾಡುವುದನ್ನು ಖಚಿತ ಪಡಿಸುವ ಮೂಲಕ ಕೊನೆಯ ವ್ಯಕ್ತಿಗೂ ಆಡಳಿತ ತಲುಪುವ ಪರಿಣಾಮಕಾರಿ ಕ್ರಮಗಳ ಖಚಿತತೆ ಬಯಸಿದ್ದಾರೆ.
ರಾಜಕೀಯ ಪರಿಸ್ಥಿತಿ ವಿಕಸಿತಗೊಳ್ಳುತ್ತಿರುವ ಸಂದರ್ಭದಲ್ಲಿ ಸರಿಯಾದ ಮಾಹಿತಿ ಸಿಗಬೇಕು ಹಾಗೂ ವೇಗವಾಗಿ ಅವುಗಳನ್ನು ತಲುಪಿಸಿ ಜನಾಭಿಪ್ರಾಯ ರೂಪಿಸಬೇಕು ಎಂಬುದು ಮೋದಿ ನಿರ್ದೇಶನವಾಗಿದೆ. ಪೂರ್ವಭಾವಿ ಹೆಜ್ಜೆಗಳನ್ನು ಇಡುವ ಮೂಲಕ ಜನರಿಗೆ ಮಾಹಿತಿ ತಲುಪಿಸಿ ಸುಳ್ಳುಸುದ್ದಿಗಳಿಗೆ ಕೌಂಟರ್ ನೀಡಬೇಕು. ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ನಿರೂಪಣೆಗಳು ಪ್ರಬಲವಾಗಿರಬೇಕು ಎಂಬುದನ್ನು ಖಚಿತಪಡಿಸುವ ದೂರದೃಷ್ಟಿ ಇದರಲ್ಲಿ ಅಡಗಿದೆ.
ಅಂತಿಮ ಷರಾ
ಸಕ್ರಿಯ ಮತ್ತು ಉತ್ತಮ ಸಂವಹನ ನೀತಿ ವಿರೋಧಿಗಳ ಪ್ರಯತ್ನಕ್ಕೆ ತಿರುಗೇಟುಗಳನ್ನು ನೀಡುವ ಮೂಲಕವೇ ಸರ್ಕಾರದ ಮೇಲಿನ ನಂಬಿಕೆ ದುರ್ಬಲಗೊಳಿಸುವ ಪ್ರಯತ್ನಗಳನ್ನು ನಿಲ್ಲಿಸುವುದು ಮೋದಿ ಕರೆಯ ಹಿಂದಿರುವ ತಂತ್ರವಾಗಿದೆ. ತಪ್ಪು ಮಾಹಿತಿಗಳು ಬೇಗನೇ ತಲುಪುವ ಕಾಲಘಟ್ಟದಲ್ಲಿ ಸರ್ಕಾರದ ಸಾಧನೆ ಮತ್ತು ನೀತಿಗಳ ಕುರಿತು ಜನತೆಗೆ ಖಚಿತ ಮತ್ತು ಸಮಯಕ್ಕೆ ಸರಿಯಾದ ಮಾಹಿತಿ ತಿಳಿಯುವುದು ಮಹತ್ವದ್ದಾಗಿದೆ. ಮೋದಿ ಸರ್ಕಾರದ ಪಾರದರ್ಶಕೆ, ಉತ್ತರದಾಯಿತ್ವ ಮತ್ತು ಪರಿಣಾಮಕಾರಿ ಸಂವಹನ ಸರ್ಕಾರದ ಬದ್ಧತೆಯನ್ನು ಮಾತ್ರ ಪ್ರತಿಫಲಿಸುವುದಿಲ್ಲ ರಾಜಕೀಯ ರಂಗದಲ್ಲಿನ ಗೆಲುವಿಗೂ ಸಹಕಾರಿ.












Click it and Unblock the Notifications