ISRO Mission: ಒಂದು.. ಎರಡು.. ಮೂರು... ಇಸ್ರೋ ಇತಿಹಾಸಕ್ಕೆ ಕೆಲವೇ ನಿಮಿಷ ಬಾಕಿ!

ಭಾರತ ಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದು, ಬಾಹ್ಯಾಕಾಶ ಲೋಕದಲ್ಲಿ ಮತ್ತೊಂದು ವಿಸ್ಮಯಕ್ಕೆ ಇಡೀ ಜಗತ್ತೇ ಸಾಕ್ಷಿಯಾಗಲಿದೆ. ಮನುಷ್ಯರು ಬಾಹ್ಯಾಕಾಶ ಕ್ಷೇತ್ರದಲ್ಲಿ ಕೂಡ ಎಷ್ಟು ಹಿಡಿತ ಹೊಂದಿದ್ದಾರೆ? ಅನ್ನೋದಕ್ಕೆ ಇಂದು ಮತ್ತೊಂದು ಉದಾಹರಣೆ ಸಿಗಲಿದೆ. ಯಾಕಿಷ್ಟು ಮಾತು ಅಂದ್ರೆ, ಒಂದು.. ಎರಡು.. ಮೂರು... ಅರೆರೆ 'ಇಸ್ರೋ' ಇತಿಹಾಸಕ್ಕೆ ಕೆಲವೇ ನಿಮಿಷ ಬಾಕಿ ಇದೆ ಕಣ್ರೀ!

ಭಾರತ ನೆಲದಲ್ಲಿ ಕಟ್ಟಿ ಬೆಳೆಸಿ, ಇಂದು ಜಾಗತಿಕವಾಗಿ ಕೂಡ ದೊಡ್ಡ ಹೆಸರು ಮಾಡಿರುವ ನಮ್ಮ 'ಇಸ್ರೋ' ಸಂಸ್ಥೆ ಕಂಡರೆ 'ನಾಸಾ' ವಿಜ್ಞಾನಿಗಳು ಕೂಡ ಎದ್ದು ನಿಂತು ಸಲ್ಯೂಟ್ ಹೊಡೆಯುತ್ತಾರೆ. ಯಾಕಂದ್ರೆ ಇಸ್ರೋ ಸಾಧನೆಗೆ ಖುದ್ದು ನಾಸಾ ವಿಜ್ಞಾನಿಗಳು ಕೂಡ ತಲೆ ಬಾಗಿದ್ದು, ಭಾರತದ ಕಾರ್ಯಕ್ಕೆ ಗ್ರೇಟ್ ಅಂತಾ ಹೇಳುತ್ತಿದ್ದಾರೆ. ಈಗಾಗಲೇ 2024 ರಲ್ಲಿ ಹಲವು ಸಾಧನೆ ಮಾಡಿರುವ 'ಇಸ್ರೋ' ಸಂಸ್ಥೆ ಇದೀಗ 2024ರ ಕೊನೆಯಲ್ಲಿ ಕೂಡ ಭಾರಿ ದೊಡ್ಡ ಸಾಧನೆಗೆ ಸಜ್ಜಾಗಿದೆ!

Countdown Begins For The ISRO Spacedx Mission Launch

ಕೆಲವೇ ನಿಮಿಷದಲ್ಲಿ ಹಾರಲಿದೆ ರಾಕೆಟ್!

ಆಡು ಮುಟ್ಟದ ಸೊಪ್ಪಿಲ್ಲ, ಇಸ್ರೋ ಬಾಹ್ಯಾಕಾಶದಲ್ಲಿ ಮಾಡದ ಸಾಧನೆ ಇಲ್ಲ ಎನ್ನಬಹುದು. 'ಇಸ್ರೋ' ಇದೀಗ ಅಮೆರಿಕ, ರಷ್ಯಾ & ಚೀನಾ ಮಾಡಿರುವ ಸಾಧನೆ ಸಾಲಿಗೆ ಸೇರಲು ಸಕಲ ಸಿದ್ಧತೆ ನಡೆಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಹತ್ವದ ಉಡಾವಣೆಗೆ ಸಜ್ಜಾಗಿದೆ. ಹೀಗೆ 'ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್' ಎಂಬ ಮಹತ್ವದ ಸಾಧನೆಗೆ ಇಸ್ರೋ ಸಜ್ಜಾಗಿದೆ. ಇನ್ನೇನು ಕೆಲವೇ ನಿಮಿಷದಲ್ಲಿ ಇಸ್ರೋ ರಾಕೆಟ್ ಆಕಾಶಕ್ಕೆ ಹಾರಲಿದೆ!

ಡಾಕಿಂಗ್ & ಅನ್‌ಡಾಕಿಂಗ್‌ ಅಂದ್ರೆ ಏನು?

ಅಂತರಿಕ್ಷದಲ್ಲಿ 2 ಬಾಹ್ಯಾಕಾಶ ನೌಕೆಗಳ ಡಾಕಿಂಗ್ ಮತ್ತು ಅನ್‌ಡಾಕಿಂಗ್‌ ನಡೆಸಲು 'ಇಸ್ರೋ' ವಿಜ್ಞಾನಿಗಳು ಸಜ್ಜಾಗಿದ್ದಾರೆ. ಈ ಮೂಲಕ ಬಾಹ್ಯಾಕಾಶ ಅಂದ್ರೆ ಆಕಾಶದಲ್ಲಿ ಯಾವುದೇ ರೀತಿ ಮಾನವರ ಸಹಾಯ ಇಲ್ಲದೆ, 2 ಬಾಹ್ಯಾಕಾಶ ನೌಕೆಗಳನ್ನು ಒಂದಕ್ಕೊಂದು ಕೂಡಿಸುವುದು & ಬೇರೆ ಮಾಡುವ ಕೆಲಸವನ್ನು ಇಸ್ರೋ ಭೂಮಿ ಮೇಲಿಂದಲೇ ನಡೆಸಲಿದೆ. ಡಿಸೆಂಬರ್ 30ರ ರಾತ್ರಿ 10 ಗಂಟೆಗೆ 'ಇಸ್ರೋ' 2 ಉಪಗ್ರಹಗಳನ್ನು ಉಡಾವಣೆ ಮಾಡಲಿದ್ದು, ಉಪಗ್ರಹ ನಭಕ್ಕೆ ಅಂದ್ರೆ ಬಾಹ್ಯಾಕಾಶಕ್ಕೆ ಹಾರಲಿದೆ. ಇದಕ್ಕಾಗಿ ವಿಶೇಷ ತಂತ್ರಜ್ಞಾನ ಬಳಸಲು ಇಸ್ರೋ ಈಗ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+