ಭಾರತದಲ್ಲಿ ಒಟ್ಟು 28 ಕೊರೊನಾ ಕೇಸ್ ಪತ್ತೆ, ಎಲ್ಲೆಲ್ಲಿ?

ದೆಹಲಿ, ಮಾರ್ಚ್ 4: ಜಗತ್ತಿನಾದ್ಯಂತ ಕೊರೊನಾ ವೈರಸ್ ಭೀತಿ ಹೆಚ್ಚಾಗಿದ್ದು, ಭಾರತದಲ್ಲೂ ಕೊರೊನಾ ಆತಂಕ ಕಾಡುತ್ತಿದೆ. ದೇಶದ ಹಲವು ಕಡೆ ಕೊರೊನಾ ಕೇಸ್‌ಗಳು ಪತ್ತೆಯಾಗಿರುವ ಹಿನ್ನೆಲೆ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ದೆಹಲಿಯಲ್ಲಿಂದು ಉನ್ನತ ಮಟ್ಟದ ಸಭೆ ನಡೆಸಿದ್ದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ''ಇದುವರೆಗೂ ಭಾರತದಲ್ಲಿ ಒಟ್ಟು 28 ಕೊರೊನಾ ಕೇಸ್‌ಗಳು ಪತ್ತೆಯಾಗಿದೆ'' ಎಂದು ಮಾಹಿತಿ ನೀಡಿದ್ದಾರೆ.

ತೆಲಂಗಾಣ ಮೂಲಕ ಟೆಕ್ಕಿಯಲ್ಲಿ ಕೊರೊನಾ ಪತ್ತೆಯಾಗಿದೆ. ದುಬೈನಿಂದ ಬೆಂಗಳೂರಿಗೆ ಆಗಮಿಸಿ, ಇಲ್ಲಿಂದ ಹೈದರಾಬಾದ್ ಗೆ ಪ್ರಯಾಣ ಮಾಡಿದ್ದ ಟೆಕ್ಕಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿತ್ತು.

Coronavirus Update: Total Cases Rise To 28 In India

ಯೂರೋಪ್‌ನಿಂದ ದೆಹಲಿ ಆಗಮಿಸಿದ್ದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಪತ್ತೆಯಾಗಿದೆ. ದೆಹಲಿ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ ಆಗ್ರಾದಲ್ಲಿನ ಒಟ್ಟು ಆರು ಜನರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಈ ಆರು ಜನರನ್ನು ಪರೀಕ್ಷಿಸದಾಗ ಪಾಸಿಟೀವ್ ಫಲಿತಾಂಶ ಹೊರಬಿದ್ದಿದೆ.

ಇಟಲಿಯಿಂದ ಭಾರತಕ್ಕೆ ಬಂದಿಳಿದ 16 ಜನ ವಿದೇಶಿ ಪ್ರವಾಸಿಗರಿಗೂ ಕೊರೊನಾ ವೈರಸ್ ಸೋಂಕಿದೆ. ಒಟ್ಟು 21 ಜನರು ಭಾರತಕ್ಕೆ ಬಂದಿದ್ದರು. ಇವರಲ್ಲಿ 16 ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟಿದೆ.

ಇದಕ್ಕೂ ಮುಂಚೆ ಕೇರಳದ ಮೂವರಲ್ಲಿ ಕೊರೊನಾ ವೈಸರ್ ಪತ್ತೆಯಾಗಿತ್ತು. ಪ್ರಾಥಮಿಕ ಹಂತವಾಗಿದ್ದ ಕಾರಣ ಸೂಕ್ತ ಅದು ಹರಡದಂತೆ ಕ್ರಮವಹಿಸಲಾಗಿತ್ತು ಎಂದು ಡಾ ಹರ್ಷವರ್ಧನ್ ತಿಳಿಸಿದ್ದಾರೆ. ಒಟ್ಟಾರೆ ಭಾರತದಲ್ಲಿ ಇದುವರೆಗೂ 28 ಪ್ರಕರಣಗಳು ದಾಖಲಾಗಿದೆ. ಅದರಲ್ಲಿ 25 ಜನರನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನುಳಿದಂತೆ ಜಗತ್ತಿನಾದ್ಯಂತ 94,333 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, 3222ಕ್ಕೂ ಅಧಿಕ ಸಾವು ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+