ಕೊರೊನೊ ವೈರಸ್ ವೈದ್ಯಕೀಯ ವೈದ್ಯಕೀಯ ತಪಾಸಣೆಯ ಮಾರ್ಗಸೂಚಿ

ನವದೆಹಲಿ, ಮಾರ್ಚ್.19: ಕೊರೊನಾ ವೈರಸ್ ಸೋಂಕಿತರ ವೈದ್ಯಕೀಯ ತಪಾಸಣೆ ನಡೆಸುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುವ ಅನಿವಾರ್ಯತೆ ಮತ್ತು ಅಗತ್ಯತೆ ಎದುರಾಗಿದೆ.

ಕೊರೊನಾ ವೈರಸ್ ಸೋಂಕಿನಿಂದ ಭಾರತೀಯರನ್ನು ರಕ್ಷಿಸಲು ಭಾರತದ ವೈದ್ಯಕೀಯ ಸಂಶೋಧನಾ ಸಮಿತಿ ಹಾಗೂ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ವೈದ್ಯಕೀಯ ತಪಾಸಣಾ ಮಾರ್ಗಸೂಚಿಯನ್ನು ನೀಡಿದೆ.

ವಿದೇಶಕ್ಕೆ ಪ್ರಯಾಣಿಸದಿದ್ದರೂ ಕೊರೊನಾ ವೈರಸ್ ಸೋಂಕಿತ ಲಕ್ಷಣಗಳು ಕಂಡು ಬಂದಂತಾ ವ್ಯಕ್ತಿಗಳನ್ನು ಯಾವ ರೀತಿಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು. ಶಂಕಿತ ಸೋಂಕಿತರನ್ನು ಹೇಗೆ ಚಿಕಿತ್ಸೆ ಒಳಪಡಿಸಬೇಕು ಎಂಬುದರ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ.

3 ಭಾರತೀಯರು ಸಾವು, 174 ಮಂದಿಗೆ ಸೋಂಕು

3 ಭಾರತೀಯರು ಸಾವು, 174 ಮಂದಿಗೆ ಸೋಂಕು

ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತನ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿದ್ದು, ಇದುವರೆಗೂ 174ಕ್ಕೂ ಅಧಿಕ ಮಂದಿಗೆ ಮಾರಕ ಸೋಂಕು ತಗಲಿರುವುದು ಸ್ಪಷ್ಟವಾಗಿದೆ. ಕಲಬುರಗಿ, ದೆಹಲಿ ಹಾಗೂ ಮುಂಬೈ ನಲ್ಲಿ ಒಬ್ಬೊಬ್ಬರು ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದಾರೆ.

ಕೊರೊನಾ ವೈರಸ್ ತಪಾಸಣೆಯಲ್ಲಿ ಶಿಷ್ಟಾಚಾರ ಪಾಲನೆ

ಕೊರೊನಾ ವೈರಸ್ ತಪಾಸಣೆಯಲ್ಲಿ ಶಿಷ್ಟಾಚಾರ ಪಾಲನೆ

ದೇಶದಲ್ಲಿ ಕೊರೊನಾ ವೈರಸ್ ವೈದ್ಯಕೀಯ ತಪಾಸಣೆ ವೇಳೆ ಶಿಷ್ಟಾಚಾರವನ್ನು ಪಾಲನೆ ಮಾಡಲಾಗುತ್ತಿದೆ. ಅದರ ಪ್ರಕಾರ ಎಲ್ಲರನ್ನೂ ಕೊರೊನಾ ವೈರಸ್ ತಪಾಸಣೆಗೆ ಒಳಪಡಿಸಲಾಗುವುದಿಲ್ಲ. ವಿದೇಶಗಳಿಂದ ಆಗಮಿಸಿದ ಮತ್ತು ಅವರ ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿ ಇರುವ ಹಾಗೂ ಜ್ವರ, ಶೀತ, ಕೆಮ್ಮಿನಂತಾ ಸೋಂಕು ತಗಲಿರುವ ಶಂಕಿತರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ.

ದೇಶದ 67 ಕಡೆಗಳಲ್ಲಿ ಕೊರೊನಾ ವೈರಸ್ ತಪಾಸಣಾ ಕೇಂದ್ರ

ದೇಶದ 67 ಕಡೆಗಳಲ್ಲಿ ಕೊರೊನಾ ವೈರಸ್ ತಪಾಸಣಾ ಕೇಂದ್ರ

ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ವೈದ್ಯಕೀಯ ತಪಾಸಣೆಗೆ 67 ಕಡೆಗಳಲ್ಲಿ ತಪಸಣಾ ಕೇಂದ್ರಗಳನ್ನು ತೆರೆಯಲಾಗಿದೆ. ಐಸಿಎಂಆರ್ ವಿಜ್ಞಾನಿಗಳು ನಡೆಸುವ ಪ್ರಾಥಮಿಕ ತಪಾಸಣೆ ನಂತರ ಸೋಂಕಿನ ಬಗ್ಗೆ ದೃಢಪಡಿಸಲಾಗುತ್ತದೆ.

ಸೋಂಕು ಹರಡುವುದರಲ್ಲಿ ನಾಲ್ಕು ಹಂತಗಳಿವೆ ಎಂದ ವೈದ್ಯರು

ಸೋಂಕು ಹರಡುವುದರಲ್ಲಿ ನಾಲ್ಕು ಹಂತಗಳಿವೆ ಎಂದ ವೈದ್ಯರು

ಇನ್ನು, ದೇಶದಲ್ಲಿ ಕೊರೊನಾ ವೈರಸ್ ಸೋಂಕು ಹರಡುವುದರಲ್ಲಿ ಎರಡು ವಿಧಗಳಿದ್ದು, ಪ್ರಾಥಮಿಕವಾಗಿ ಸೋಂಕಿತ ದೇಶಗಳಿಂದ ಆಗಮಿಸಿದ ವ್ಯಕ್ತಿಗಳು ಮತ್ತು ಸೋಂಕಿತ ಜನರ ಜೊತೆಗೆ ಪ್ರಯಾಣಿಸಿದ ಭಾರತೀಯರಿಗೆ ಸೋಂಕು ತಗಲುವ ಸಾಧ್ಯತೆಗಳಿರುತ್ತವೆ. ಎರಡನೇ ಹಂತದಲ್ಲಿ ವಿದೇಶದಿಂದ ಆಗಮಿಸಿದವರ ಜೊತೆಗೆ ಪ್ರಾಥಮಿಕ ಸಂಪರ್ಕ ಹೊಂದಿರುವವರಿಗೆ ಕೊರೊನಾ ಸೋಂಕು ತಗಲುವ ಸಾಧ್ಯತೆಗಳಿವೆ. ಮೂರನೇ ಹಂತದಲ್ಲಿ ಪ್ರಾದೇಶಿಕ ಮತ್ತು ಸಮುದಾಯಗಳ ನಡುವಿನ ಜನರಿಗೆ ಸೋಂಕು ಹರಡಲಿದ್ದು, ನಾಲ್ಕನೇ ಹಂತವು ದೇಶದ ಪಾಲಿಗೆ ಅಪಾಯಕಾರಿ ಆಗಲಿದೆ. ಈ ಹಂತದಲ್ಲಿ ಕೊರೊನಾ ವೈರಸ್ ಒಂದು ಸಾಂಕ್ರಾಮಿಕ ಪಿಡುಗು ಆಗಿ ದೇಶಕ್ಕೆಲ ಹರಡುವ ಸಾಧ್ಯತೆಗಳಿವೆ ಎಂದು ಎಂದು ಐಸಿಎಂಆರ್ ನಿರ್ದೇಶಕ ಡಾ.ಬಲರಾಮ್ ಭಾರ್ಗವ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+