ಆನ್‌ಲೈನ್‌ನಲ್ಲಿ ನರೇಂದ್ರ ಮೋದಿ 2.0 ಸರ್ಕಾರದ ಮೊದಲ ವಾರ್ಷಿಕೋತ್ಸವ
ನವದೆಹಲಿ, ಮೇ 26: ಕೊವಿಡ್ 19 ಮಹಾಮಾರಿಯಿಂದಾಗಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರದ ವಾರ್ಷಿಕೋತ್ಸವವನ್ನು ಆನ್‌ಲೈನ್‌ನಲ್ಲಿ ಆಚರಿಸಿಕೊಳ್ಳುವಂತಾಗಿದೆ.
ಸಚಿವರುಗಳಿಂದ ಡಿಜಿಟಲ್ ಪ್ರೆಸ್ ಕಾನ್ಫರೆನ್ಸ್ ನಡೆಯಲಿದೆ, ಸಾರ್ವಜನಿಕರೊಂದಿಗೆ ವಿಡಿಯೋ ಸಂವಾದ ಹಾಗೆಯೇ ಇ-ಜಾಥಾವನ್ನು ಕೂಡ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಕಳೆದ ವರ್ಷ ಮೇ 30 ರಂದು ನರೇಂದ್ರ ಮೋದಿ 2.0 ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ತ್ರಿವಳಿ ತಲಾಖ್ ರದ್ದು, ಆರ್ಟಿಕಲ್ 370 ರದ್ದು, ಲಡಾಖ್‌ನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸುವುದು ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿತ್ತು.

ಇ-ಜಾಥಾಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಪ್ರತಿ ದಿನ 500 ಮಂದಿಯನ್ನು ತಲುಪುವ ಗುರಿ ಹೊಂದಲಾಗಿದೆ. ಈ ಜಾಥಾಗಳಲ್ಲಿ ಸರ್ಕಾರಕ್ಕಿದ್ದ ಸವಾಲು ಹಾಗೂ ಸಾಧನೆಗಳನ್ನು ವಿವರಿಸಲಾಗುವುದು.
ಒಟ್ಟು 150 ಮಾಧ್ಯಮ ಕೇಂದ್ರಗಳಲ್ಲಿ ಮೀಡಿಯಾ ಕಾನ್ಫರೆನ್ಸ್ ನಡೆಯಲಿದೆ. 20 ನಿಮಿಷಗಳ ಕಾಲ ಪ್ರಶ್ನೋತ್ತರಕ್ಕೆ ಅನುವು ಮಾಡಿಕೊಡಲಾಗಿದೆ. ಭಾರತದಲ್ಲಿ 4179 ಮಂದಿ ಕೊರೊನಾವೈರಸ್‌ನಿಂದ ಮೃತಪಟ್ಟಿದ್ದಾರೆ. 1,46,000 ಮಂದಿ ಸೋಂಕಿತರಿದ್ದಾರೆ.












Click it and Unblock the Notifications