4ನೇ ಹಂತದ ಲಾಕ್ ಡೌನ್; ಏನಿರುತ್ತೆ, ಏನಿರಲ್ಲ?
ನವದೆಹಲಿ, ಮೇ 14 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. 3ನೇ ಹಂತದ ಲಾಕ್ ಟೌನ್ ಮೇ 17ರಂದು ಮುಗಿಯಲಿದ್ದು, 4ನೇ ಹಂತ ಜಾರಿಗೆ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಹೇಳಿದ್ದಾರೆ.
ರಾಜ್ಯ ಸರ್ಕಾರಗಳು 4ನೇ ಹಂತದ ಲಾಕ್ ಡೌನ್ ಹೇಗಿರಬೇಕು? ಎಂಬ ವರದಿ ಸಿದ್ಧಪಡಿಸುತ್ತಿವೆ. ಶುಕ್ರವಾರ ಕೇಂದ್ರ ಗೃಹ ಇಲಾಖೆಗೆ ವರದಿ ನೀಡಲಾಗುತ್ತದೆ. ಶನಿವಾರ ಲಾಕ್ ಡೌನ್ ಮಾರ್ಗಸೂಚಿ ಪ್ರಕಟವಾಗುವ ನಿರೀಕ್ಷೆ ಇದೆ.
ಲಾಕ್ ಡೌನ್ ತೆರವು; ಜನರ ಸಲಹೆ ಕೇಳಿದ ಕೇಜ್ರಿವಾಲ್
ಮಂಗಳವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ 4ನೇ ಹಂತದ ಲಾಕ್ ಡೌನ್ ವಿಭಿನ್ನವಾಗಿರಲಿದೆ ಎಂಬ ಸುಳಿವು ನೀಡಿದ್ದಾರೆ. ಮತ್ತೊಂದು ಕಡೆ ರಾಜ್ಯಗಳು ಆರ್ಥಿಕ ಚಟುವಟಿಕೆಗೆ ಧಕ್ಕೆಯಾಗದಂತೆ ಲಾಕ್ ಡೌನ್ ಮುಂದುವರೆಸಲು ಬಯಸಿವೆ.
ಭಾರತ ಲಾಕ್ ಡೌನ್ ಸಡಿಲಿಕೆ ಸುಳಿವು ಕೊಟ್ಟರಾ ಪ್ರಧಾನಮಂತ್ರಿ ಮೋದಿ?
ಮೇ 17ರ ಬಳಿಕ ಬಹುತೇಕ ಎಲ್ಲಾ ಸೇವೆಗಳು ಆರಂಭವಾಗುವ ನಿರೀಕ್ಷೆ ಇದೆ. ಮಾಲ್‌ಗಳು ಬಾಗಿಲು ತೆರೆಯುವ ಸಾಧ್ಯತೆ ಕಡಿಮೆ ಇದೆ. ಸಮಾವೇಶ, ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳ ಮೇಲಿನ ನಿಷೇಧ ಹಾಗೆಯೇ ಮುಂದುವರೆಯಲಿದೆ.
ಲಾಕ್ ಡೌನ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ವಿಫಲ: ಶಿವು ಯಾದವ್

ಕಂಟೈನ್‌ಮೆಂಟ್ ಝೋನ್ ಬದಲಾವಣೆ
4ನೇ ಹಂತದ ಲಾಕ್ ಡೌನ್‌ನಲ್ಲಿ ಕಂಟೈನ್‌ಮೆಂಟ್ ಝೋನ್‌ಗಳಲ್ಲಿ ಬದಲಾವಣೆಯಾಗಲಿದೆ. ಕೇಂದ್ರ ಗೃಹ ಸಚಿವಾಲಯ ಕೊರೊನಾ ಕೇಸುಗಳ ಆಧಾರದ ಮೇಲೆ ಈಗಾಗಲೇ ಕೆಂಪು, ಕಿತ್ತಲೆ ಮತ್ತು ಹಸಿರು ವಲಯ ಎಂದು ದೇಶವನ್ನು ವಿಭಾಗ ಮಾಡಿದೆ.

ರಾಜ್ಯಗಳ ಬೇಡಿಕೆ ಏನು?
ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಸಭೆಯ ವೇಳೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ನಾವೇ ಝೋನ್ ಗುರುತಿಸಿಕೊಳ್ಳುತ್ತೇವೆ. ಒಂದು ತಾಲೂಕಿನಲ್ಲಿ ಕೊರೊನಾ ಪ್ರಕರಣ ಇದ್ದಾಗ ಇಡೀ ಜಿಲ್ಲೆಯನ್ನು ಕೆಂಪು ವಲಯಕ್ಕೆ ಸೇರಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾರಿಗೆ ಸಂಚಾರ ಆರಂಭ
ಮೇ 17ರ ಬಳಿಕ ಸಾರಿಗೆ ಸಂಚಾರ ಆರಂಭವಾಗಲಿದೆ. ಈಗಾಗಲೇ ಭಾರತೀಯ ರೈಲ್ವೆ ಹಲವು ಮಾರ್ಗದಲ್ಲಿ ರೈಲುಗಳನ್ನು ಓಡಿಸುತ್ತಿದೆ. ಕೈಗಾರಿಕಾ ಚಟುವಟಿಕೆ ಮಾಲ್ ಹೊರತುಪಡಿಸಿ ಇತರ ಅಂಗಡಿಗಳನ್ನು ತೆರೆಯಲು ಅವಕಾಶ ಸಿಗಲಿದೆ. ಅಂತರ ಜಿಲ್ಲಾ ಓಡಾಟಕ್ಕೆ ಅನುಮತಿ ನೀಡಲಾಗುತ್ತದೆ. ಆದರೆ, ಅಂತರರಾಜ್ಯ ಸಂಚಾರಕ್ಕೆ ಪಾಸ್ ಇರುತ್ತದೆ.

ಕಂಟೈನ್‌ಮೆಂಟ್ ಝೋನ್‌ಗೆ ಪ್ರವೇಶವಿಲ್ಲ
ಸ್ಥಳೀಯ ಆಡಳಿತ ಕಂಟೈನ್‌ಮೆಂಟ್ ಝೋನ್ ಎಂದು ಘೋಷಣೆ ಮಾಡಿದ ಪ್ರದೇಶಕ್ಕೆ ಪ್ರವೇಶ ಇರುವುದಿಲ್ಲ. ಸಮಾವೇಶ, ರಾಜಕೀಯ ಜಾಥಾ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡುವುದಿಲ್ಲ. ಜನಸಂದಣಿ ಸೇರದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಶಾಲಾ-ಕಾಲೇಜುಗಳನ್ನು ಜೂನ್ ತನಕ ತೆರೆಯುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.