Breaking: ಭಾರತದಲ್ಲಿ ಒಂದೇ ದಿನ 7,584 ಮಂದಿಗೆ ಕೊರೊನಾ ವೈರಸ್!
ನವದೆಹಲಿ, ಜೂನ್ 10: ಭಾರತದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ಹಾವಳಿ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ದೇಶದಲ್ಲಿ ನಿರಂತರ ಮೂರನೇ ದಿನವೂ ಸೋಂಕಿತರ ಸಂಖ್ಯೆಯಲ್ಲಿ ಶೇ.39ರಷ್ಟು ಏರಿಕೆಯಾಗಿದೆ.
ಮೂರು ತಿಂಗಳ ನಂತರ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಸತತ ಮೂರನೇ ದಿನವೂ ಶೇ.39ರಷ್ಟು ಹೆಚ್ಚಳವಾಗಿದ್ದು, ಸೋಂಕಿತರ ಸಂಖ್ಯೆಯು 7,000 ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 7,584 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಇದೇ ಅವಧಿಯಲ್ಲಿ 24 ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದರೆ, 3,791 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಭಾರತೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ ಒಟ್ಟು ಕೋವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ 43,207,265ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ, ಇದುವರೆಗೂ 42,644,092 ಸೋಂಕಿತರು ಗುಣಮುಖರಾಗಿದ್ದು, 524,747 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 36,267ಕ್ಕೆ ಏರಿಕೆಯಾಗಿದೆ.

99 ದಿನಗಳಲ್ಲೇ ಕೊರೊನಾ ವೈರಸ್ ದಾಖಲೆ: ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ಕಡಿಮೆ ಆಯ್ತು ಎನ್ನುವಷ್ಟರಲ್ಲೇ ಮಹಾಮಾರಿ ಆಟ ಶುರು ಮಾಡಿದೆ. ಕಳೆದ 99 ದಿನಗಳ ನಂತರದಲ್ಲಿ ಕೋವಿಡ್-19 ಗರಿಷ್ಠ ಮಟ್ಟಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 7,000ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಿಲಿಸಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 36,267ಕ್ಕೆ ಏರಿಕೆ ಆಗುವಂತೆ ಮಾಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಕರ್ನಾಟಕದಲ್ಲೂ ಕೊರೊನಾ ವೈರಸ್ ಹಾವಳಿ: ಕರ್ನಾಟಕದಲ್ಲಿ ಕೊರೊನಾ ವೈರಸ್ ಅಪಾಯ ತಪ್ಪಿದ್ದಲ್ಲ ಎನ್ನುವುದನ್ನು ಪ್ರಕರಣಗಳ ಸಂಖ್ಯೆಯು ಪದೇ ಪದೆ ಎಚ್ಚರಿಸುತ್ತಿವೆ. ಕಳೆದ 24 ಗಂಟೆಗಳಲ್ಲೇ 471 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.
ಇದೇ ಅವಧಿಯಲ್ಲಿ 214 ಸೋಂಕಿತರು ಗುಣಮುಖರಾಗಿದ್ದಾರೆ. ಗುರುವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 3954784 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈವರೆಗೂ 3911796 ಸೋಂಕಿತರು ಗುಣಮುಖರಾಗಿದ್ದು, 40,066 ಜನರು ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಇದರ ಹೊತರಾಗಿ ರಾಜ್ಯದಲ್ಲಿ 2880 ಸಕ್ರಿಯ ಪ್ರಕರಣಗಳಿವೆ.
ದೇಶದಲ್ಲಿ ಹೇಗಿತ್ತು ಲಕ್ಷದಿಂದ ಲಕ್ಷಕ್ಕೆ ಪ್ರಕರಣಗಳ ಸಂಖ್ಯೆ?: ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು ಏಕಾಏಕಿ ಏರಿಕೆಯಾಗದ ಉದಾಹರಣೆಗಳನ್ನೂ ಭಾರತ ಈ ಹಿಂದೆ ಕಂಡಿದೆ. ದೇಶದಲ್ಲಿ 2020ರ ಆಗಸ್ಟ್ 7ರಂದು 20 ಲಕ್ಷ ಕೋವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದವು. ಅಲ್ಲಿಂದ ಸೋಂಕಿತರ ಸಂಖ್ಯೆಯು ಗಣನೀಯವಾಗಿ ಏರಿಕೆ ಆಯಿತು. ಆಗಸ್ಟ್ 23ರ ಹೊತ್ತಿಗೆ ಈ ಸಂಖ್ಯೆ 30 ಲಕ್ಷ ತಲುಪಿತು.
ಸೆಪ್ಟಂಬರ್ 5ರ ವೇಳೆಗೆ 40 ಲಕ್ಷವಾದರೆ, ಅದೇ ಸೆಪ್ಟಂಬರ್ 16ರ ವೇಳೆಗೆ 50 ಲಕ್ಷದ ಗಡಿ ದಾಟಿತು. ಸೆಪ್ಟಂಬರ್ 28ಕ್ಕೆ ಸೋಂಕಿತ ಪ್ರಕರಣಗಳ ಸಂಖ್ಯೆ 60 ಲಕ್ಷದ ಗಡಿ ದಾಟಿತು. ಅಕ್ಟೋಬರ್ 11ಕ್ಕೆ 70 ಲಕ್ಷ ಸೋಂಕಿತ ಪ್ರಕರಣಗಳಾದರೆ, ಆ ಸಂಖ್ಯೆಯು ಅಕ್ಟೋಬರ್ 29ರ ಹೊತ್ತಿಗೆ 80 ಲಕ್ಷ ತಲುಪಿತು. ಅದೇ ರೀತಿ ನವೆಂಬರ್ 20ರ ವೇಳೆಗೆ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 90 ಲಕ್ಷ ತಲುಪಿದರೆ, ಡಿಸೆಂಬರ್ 19ರ ಹೊತ್ತಿಗೆ ಒಂದು ಕೋಟಿಯ ಗಡಿ ದಾಟಿತು.
Recommended Video
2021ರ ಮೇ 4ರ ವೇಳೆಗೆ ಕೋವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯು ಒಂದು ಕೋಟಿಯಿಂದ ಎರಡು ಕೋಟಿಗೆ ಜಿಗಿಯಿತು. ಅದೇ ರೀತಿ 2021ರ ಜೂನ್ 23ರ ಹೊತ್ತಿಗೆ ಸೋಂಕಿತ ಪ್ರಕರಣಗಳ ಸಂಖ್ಯೆಯು ಮೂರು ಕೋಟಿ ಗಡಿ ಮುಟ್ಟಿತು ಎಂಬುದನ್ನು ಅಂಕಿ-ಸಂಖ್ಯೆಗಳು ವಿವರಿಸುತ್ತವೆ.












Click it and Unblock the Notifications