ಭಾರತದಲ್ಲಿ ಮತ್ತೆ 507 ಮಂದಿ ಸಾವು: 18,653 ಮಂದಿಗೆ ಕೊರೊನಾ ಸೋಂಕು

ನವದೆಹಲಿ, ಜುಲೈ 1: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿನಿಂದ 507 ಮಂದಿ ಮೃತಪಟ್ಟಿದ್ದು, 18,563 ಮಂದಿಗೆ ಸೋಂಕು ತಗುಲಿದೆ.

ದೇಶದಲ್ಲಿ ಒಟ್ಟು 5,85,493 ಕೊರೊನಾ ಸೋಂಕಿತ ಪ್ರಕರಣಗಳಿವೆ. 2,20,114 ಸಕ್ರಿಯ ಪ್ರಕರಣಗಳಿವೆ. 3,47,979 ಮಂದಿ ಗುಣಮುಖರಾಗಿದ್ದಾರೆ. 17,400 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

Coronavirus In India: 507 Deaths And 18,563 New Cases Reported In Last 24 Hour

ಜೂನ್ 30ರವರೆಗೆ 86,26,585 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಮಂಗಳವಾರ ಒಟ್ಟು 2,17,931 ಜನರನ್ನು ಪರೀಕ್ಷೆ ಮಾಡಿದ್ದಾರೆ. ಯುಎಸ್ಎ: ಮೃತರ ಸಂಖ್ಯೆ128,783, ಬ್ರೆಜಿಲ್: 58,385,ಯುಕೆ: 43,575, ಇಟಲಿ: 34,744, ಫ್ರಾನ್ಸ್: 29,813,ಸ್ಪೇನ್: 28,346, ಮೆಕ್ಸಿಕೋ: 27,121
ಭಾರತ: 16,904, ಇರಾನ್: 10,670, ಬೆಲ್ಜಿಯಂ: 9,732 ಮೃತಪಟ್ಟಿದ್ದಾರೆ.

ಈ ನಡುವೆ ತಮಿಳುನಾಡು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 90,167ಕ್ಕೆ ಏರಿಕೆಯಾಗಿದ್ದು, 1,201 ಮಂದಿ ಬಲಿಯಾಗಿದ್ದಾರೆಂದು ತಿಳಿದುಬಂದಿದೆ.

ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವಂತೆಯೇ ಇತ್ತ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ 24 ಗಂಟೆಗಳಲ್ಲಿ ದೇಶಾದ್ಯಂತ 2,17,931 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+