ಬ್ರೇಕಿಂಗ್: ಭಾರತದಲ್ಲಿ ಒಂದೇ ದಿನ 16,922 ಮಂದಿಗೆ ಕೊರೊನಾವೈರಸ್!
ನವದೆಹಲಿ, ಜೂನ್.25: ನೊವೆಲ್ ಕೊರೊನಾವೈರಸ್ ಅಟ್ಟಹಾಸಕ್ಕೆ ಭಾರತಕ್ಕೆ ಭಾರತವೇ ತತ್ತರಿಸುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ದಿನದಿನಕ್ಕೆ ದಾಖಲೆ ಮಟ್ಟದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಅತಿಹೆಚ್ಚು ಅಂದರೆ ಬರೋಬ್ಬರಿ 16,922 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಇನ್ನು, ಒಂದೇ ದಿನ ದೇಶದಲ್ಲಿ ಮಹಾಮಾರಿಗೆ 418 ಮಂದಿ ಬಲಿಯಾಗಿದ್ದಾರೆ.
Breaking: ಕರ್ನಾಟಕದಲ್ಲಿ 10 ಸಾವಿರ ಗಡಿ ದಾಟಿದ ಕೊರೊನಾ ಕೇಸ್
ನೊವೆಲ್ ಕೊರೊನಾವೈರಸ್ ಒಟ್ಟು ಸೋಂಕಿತರು ಹಾಗೂ ಮೃತಪಟ್ಟವರ ಸಂಖ್ಯೆಗಳ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನೀಡಿದ ಮಾಹಿತಿ ಹೊಸ ಆತಂಕವನ್ನು ಹುಟ್ಟಿಸುವಂತಿದೆ.
ದೇಶದಲ್ಲಿ ಒಟ್ಟು 4,73,105 ಮಂದಿಗೆ ಸೋಂಕು:
ಭಾರತದಲ್ಲಿ ಒಂದೇ ದಿನ 16,922 ಮಂದಿಗೆ ಕೊರೊನಾವೈರಸ್ ಅಂಟಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆಯು ಬರೋಬ್ಬರಿ 4,73,105ಕ್ಕೆ ಏರಿಕೆಯಾಗಿದೆ. ಮಹಾಮಾರಿಗೆ ದೇಶದಲ್ಲಿ ಇದುವರೆಗೂ 14,894 ಮಂದಿ ಬಲಿಯಾಗಿದ್ದಾರೆ. ಇನ್ನು, 2,71,697 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. 1,86,514 ಮಂದಿ ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.
ಕೊರೊನಾವೈರಸ್ ತಪಾಸಣೆ ಪ್ರಮಾಣ ಏರಿಕೆ:
ದೇಶದಲ್ಲಿ ಕೊರೊನಾವೈರಸ್ ಸೋಂಕು ಪತ್ತೆಗಾಗಿ ರಕ್ತ ಹಾಗೂ ಗಂಟಲು ದ್ರವ್ಯದ ಮಾದರಿಯನ್ನು ತಪಾಸಣೆ ನಡೆಸಲಾಗುತ್ತಿದೆ. ಈ ಪ್ರಮಾಣದಲ್ಲೂ ಭಾರಿ ಏರಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ ಐಸಿಎಂಆರ್ ನಲ್ಲಿ 2,07,871 ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಜೂನ್.24ರವರೆಗೂ ದೇಶದಲ್ಲಿ ಬರೋಬ್ಬರಿ 75,60,782 ಜನರ ರಕ್ತ ಹಾಗೂ ಗಂಟಲು ದ್ರವ್ಯದ ಮಾದರಿ ತಪಾಸಣೆ ನಡೆಸಲಾಗಿದೆ.