ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಕಾಟದಿಂದ 84 ರೈಲುಗಳ ಸಂಚಾರ ರದ್ದು

|
Google Oneindia Kannada News

ನವದೆಹಲಿ, ಮಾರ್ಚ್.19: ವಿಶ್ವದ ಪಾಲಿಗೆ ಹೆಮ್ಮಾರಿಯಂತೆ ಕಾಡುತ್ತಿರುವ ಕೊರೊನಾ ವೈರಸ್ ನಿಂದ ದೇಶಕ್ಕೆ ದೇಶವೇ ಸ್ತಬ್ಧಗೊಂಡಿದೆ. ಭಾರತದಲ್ಲಿ ಇದುವರೆಗೂ 174 ಜನರಿಗೆ ಕೊರೊನಾ ವೈರಸ್ ತಗಿಲಿರುವುದು ದೃಢಪಟ್ಟಿದೆ.

ದಿನೇ ದಿನೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಕೇಂದ್ರ ಸರ್ಕಾರವೂ ಎಚ್ಚೆತ್ತುಕೊಂಡಿದೆ. ಮಾರ್ಚ್.23ರಿಂದ ಜಾರಿಗೆ ಬರುವಂತೆ 84 ರೈಲ್ವೆಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಮಾರ್ಚ್.31ರವರೆಗೂ ಈ ರೈಲುಗಳ ಸಂಚಾರಕ್ಕೆ ಬ್ರೇಕ್ ಬೀಳಲಿದೆ.

ಕೊರೊನಾ ವೈರಸ್ ನಿಂದ ಸಾವು: ಮೃತದೇಹಗಳ ನಿರ್ವಹಣೆಗೂ ಮಾರ್ಗಸೂಚಿಕೊರೊನಾ ವೈರಸ್ ನಿಂದ ಸಾವು: ಮೃತದೇಹಗಳ ನಿರ್ವಹಣೆಗೂ ಮಾರ್ಗಸೂಚಿ

ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಈ ಮೊದಲು ಕೂಡಾ ಇಲಾಖೆಯು ಹಲವು ರೈಲುಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿತ್ತು. ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ದೃಷ್ಟಿಯಿಂದ ಇದುವರೆಗೂ ಒಟ್ಟು 155 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

Coronavirus Effect: Another 84 Trains Cancelled By Indian Railway

ರೈಲ್ವೆ ಬುಕ್ ಮಾಡಿದವರ ಹಣ ವಾಪಸ್:

ಮಾರ್ಚ್.23ರಿಂದ ದೇಶದಲ್ಲಿ 55 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಮುಂಗಡ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರ ಟಿಕೆಟ್ ಕ್ಯಾನ್ಸಲ್ ಮಾಡಲಾಗುತ್ತದೆ. ಪ್ರಯಾಣಿಕರು ಪಾವತಿಸಿದ ಹಣದಲ್ಲಿ ಯಾವುದೇ ಕ್ಯಾನ್ಸಲೇಷನ್ ಫೀಸ್ ಇಲ್ಲದೇ, ಸಂಪೂರ್ಣ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಭಾರತೀಯ ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.

ಕಳೆದ ಮಾರ್ಚ್.17ರಂದು ಭಾರತೀಯ ರೈಲ್ವೆಯ 71 ರೈಲುಗಳ ಸಂಚಾರವನ್ನು ಮುಂದಿನ ಏಪ್ರಿಲ್.1ನೇ ತಾರೀಕಿನವರೆಗೂ ರದ್ದುಪಡಿಸಲಾಗಿತ್ತು. ಅದೇ ಮಂಗಳವಾರ ಕೇಂದ್ರ ರೈಲ್ವೆ ವಿಭಾಗದ 23 ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿತ್ತು.

English summary
Coronavirus Effect: Another 84 Trains Cancelled By Indian Railway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X