ಕೊರೊನಾವೈರಸ್ ಭೀತಿ ನಡುವೆ Anti-Bacterial ಮಾಸ್ಕ್ ಸಿದ್ಧ

ನವದೆಹಲಿ, ಸಪ್ಟೆಂಬರ್.24: ದೇಶದಲ್ಲಿ ಪ್ರತಿನಿತ್ಯ ಸಾವಿರ ಸಾವಿರ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಇದರ ನಡುವೆ ಬ್ಯಾಕ್ಟಿರಿಯಾ ನಿಯಂತ್ರಿಸುವಂತಾ ಮಾಸ್ಕ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.

ಜಗತ್ತಿನಲ್ಲೇ ಅತಿಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಕೊವಿಡ್-19 ಸೋಂಕು ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರ ನಡುವೆ ಮಾರುಕಟ್ಟೆಯಲ್ಲಿ ಬ್ಯಾಕ್ಟಿರಿಯಾ ವಿರೋಧಿ ಮಾಸ್ಕ್ ಗಳು ಸದ್ದು ಮಾಡುತ್ತಿವೆ.

ಗುಜರಾತ್ ನ ಸೂರತ್ ನಲ್ಲಿರುವ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಈ ಮಾಸ್ಕ್ ಗಳನ್ನು ಸಿದ್ಧಪಡಿಸಲಾಗುತ್ತಿದೆ. ಮಾಸ್ಕ್ ತಯಾರಿಕೆಗೂ ಮೊದಲು ಅವುಗಳಿಗೆ ರಾಸಾಯನಿಕಗಳನ್ನು ಲೇಪನ ಮಾಡಲಾಗುತ್ತದೆ ಎಂದು ಉದ್ಯಮಿ ಸಂಜಯ್ ದನಾನಿ ತಿಳಿಸಿದ್ದಾರೆ.

Coronavirus Anti Bacterial Face Masks Entered To Indian Market

ಆಕರ್ಷಕ ಮಾಸ್ಕ್ ಗಳು ಶೇ.95ರಷ್ಟು ಸುರಕ್ಷಿತ:

ಇಂದಿನ ಫ್ಯಾಷನ್ ಲೋಕವನ್ನು ಸೆಳೆಯುವ ಆಕರ್ಷಕ ಶೈಲಿಯಲ್ಲಿ ಮಾಸ್ಕ್ ಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ಮಾಸ್ಕ್ ಗಳಿಗೆ ರಾಸಾಯನಿಕ ಲೇಪನ ಇರುವುದರಿಂದಾಗಿ ಕೊರೊನಾವೈರಸ್ ಸೇರಿದಂತೆ ಎಲ್ಲ ರೀತಿಯ ಬ್ಯಾಕ್ಟಿರಿಯಾಗಳಿಂದ ಶೇ.95ರಷ್ಟು ಸುರಕ್ಷಿತವಾಗಿರುತ್ತದೆ ಎಂದು ಉದ್ಯಮಿ ಸಂಜಯ್ ದನಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಕೊವಿಡ್-19 ಅಂಕಿ-ಸಂಖ್ಯೆ:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 83347 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ. ಒಂದೇ ದಿನ ಕೊರೊನಾವೈರಸ್ ಸೋಂಕಿಗೆ 1085 ಜನರು ಬಲಿಯಾಗಿದ್ದು, ದೇಶದಲ್ಲಿ ಮಹಾಮಾರಿಯಿಂದ ಪ್ರಾಣ ಬಿಟ್ಟವರ ಸಂಖ್ಯೆಯು 88935ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 56,46,011ಕ್ಕೆ ಏರಿಕೆಯಾಗಿದೆ. ಈ ಪೈಕಿ 45,87,614 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 9,68,377 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+